ಕಾಪು: ಕೆ.ಐ.ಡಿ.ಬಿ ವತಿಯಿಂದ 1200 ಎಕರೆ ಜಮೀನನ್ನು ಭೂಸ್ವಾಧೀನಗೊಳಿಸಿ ಸುಜ್ಲಾನ್ ಪಡೆದುಕೊಂಡಿದ್ದು ಸದ್ಯ ಈ ಜಾಗವನ್ನು ಖಾಸಾಗಿ ಕಂಪೆನಿಗಳಿಗೆ – ವ್ಯಕ್ತಿಗಳಿಗೆ ಮಾರಾಟ ಮಾಡಿರುವುದಲ್ಲದೆ ಅದರಜತೆ ವಿವಿಧ ಜನಪರ ಬೇಡಿಕೆಗೆ ಆಗ್ರಹಿಸಿ ಸುಜ್ಲಾನ್ ಕಂಪೆನಿಯ ಮುಂಭಾಗದಲ್ಲಿ ಜನಾಮದೋಲನ ಸಬೆ ನಡೆಸುವುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಕಾಪುವಿನಲ್ಲಿ ನಡೆದ ಪತ್ರೀಕಾಗೊಷ್ಠಿಯಲ್ಲಿ ತಿಳಿಸಿದರು.
ಕೆ.ಐ.ಡಿ.ಬಿ ಜಾಗವನ್ನು ಪಡೆದುಕೊಂಡಿರುವ ಕಂಪೆನಿಗೆ ನಷ್ಟವಾದರೇಆಜಾಗವನ್ನು ಮರಳಿ ಸರ್ಕಾರಕ್ಕೆ ನೀಡಬೇಕೆ ಹೊರತು ಅದನ್ನು ರೀಯಲ್ ಎಸ್ಟೇಟ್ ಉದ್ಯಮವನ್ನಾಗಿ ಮಾಡಬಾರದು ಅದರಬದಲಿಗೆ ಕ್ಷೇತ್ರದಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ವಸತಿ ವಂಚಿತರಿಗೆ ಮನೆ ನಿವೇಶನ ನೀಡಬೇಕೆಂದು ಅವರು ಆಗ್ರಹ ನಡೆಸಿದರು.
ವಿವಿಧ ಕಂಪೆನಿಗಳಿಗೆ ಮಾರಾಟವಾದ ಜಾಗದಲ್ಲಿ ಹತ್ತಾರು ಇಂಡಸ್ಟ್ರೀಗಳು ಆರಂಭವಾಗಿದೆ ಅದರಲ್ಲಿ ಸ್ಥಳಿಯರಿಗೆ ಉದ್ಯೋಗವನ್ನು ನೀಡದೆ ವಂಚಿಸಿದ್ದು ಅತ್ಯಂತ ಬೇಸರದ ಸಂಗತಿಯಾಗಿದೆ ಮಾತ್ರವಲ್ಲದೆ ನಂದಿಕೂರು ಪ್ರಸಿದ್ಧಿ ಪಡೆದ ದೇವರ ಕಾಡು ಉಳಿಸಿ ಸೂಕ್ತ ರಕ್ಷಣೆ ನೀಡುವ ಬದಲು ಅಲ್ಲಿನ ನೂರು ಎಕರೆಜಾಗವನ್ನು ಸುಜ್ಲಾನ್ ಕಂಪೆನಿ ಖಾಸಾಗಿಯವರಿಗೆ ಮಾರಾಟ ಮಾಡಿರುವುದು ಧಾರ್ಮಿಕ ಭಾವನೆಗೆ ದಕ್ಕೆ ಬಂದಿದೆ ಎಂದರು.
ಪಡುಬಿದ್ರಿ ಕಾರ್ಕಳ ಪಿ.ಡಬ್ಲ್ಯೂ.ಡಿ ಮುಖ್ಯ ರಸ್ತೆಯಲ್ಲಿ ಪ್ರಸ್ತಾವನೆಯಲ್ಲಿರುವ ಟೋಲ್ ಸಂಗ್ರಹದ ಯೋಜನೆ ಕೈಬಿಡಬೇಕು ಮತ್ತು ಹೆಜಮಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ವಾಹನಗಳಿಗೆ ಹೆಜಮಾಡಿ ಟೋಲ್‍ನಲ್ಲಿ ವಿನಾಯಿತಿ ನೀಡಬೇಕೆಂದು ತಿಳಿಸಿದರು.
ಫಲಿಮಾಡು ಅಣೆಕಟ್ಟಿನ ನೀರನ್ನು ಸುಜ್ಲಾನ್ ಕಂಪೆನಿಗಳಿಗೆ ಕೊಳವೆ ಮೂಲಕ ನೀರು ಸರಬರಾಜು ಮಾಡುವುದನ್ನು ನಿಲ್ಲಿಸುವಂತೆಹಾಗೂ ಜಲಜೀವನ್ ಮಿಷನ್ ಯೋಜನೆಯ ಮುಖಾಂತರ ನಡೆದ ಕಾಮಗಾರಿಯ ಅವ್ಯವಹಾರದ ಬಗ್ಗೆ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವದೆಂದು ಸೊರಕೆ ತಿಳಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…
ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…
ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…
ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…
ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…
180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…