ಮಂಗಳೂರು : ಕೇಂದ್ರ ಸರ್ಕಾರ ಭಾವನಾತ್ಮಕವಾಗಿ ಜನರನ್ನು ವಂಚನೆ ಮಾಡ ಹೊರಟ್ಟಿದ್ದು, ಸರ್ಕಾರಿ ಸ್ವಾಮ್ಯ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಮುಂದಾಗಿದ್ದಾರೆ. ಜನರನ್ನು ಲೂಟಿ ಮಾಡಲು ಹೊರಟಿರುವುದೇ ಮೋದಿ ಸರಕಾರ ಎರಡನೇ ಅವಧಿಯ ಸಾಧನೆ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ರಮನಾಥ್ ರೈ ಕೇಂದ್ರ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ.
ಈ ಬಗ್ಗೆ ನಗರದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ವಿಮಾನ ನಿಲ್ದಾಣ, ಕಲ್ಲಿದ್ದಲು ನಿಗಮಗಳು, ಬಿಎಸ್ಎನ್ಎಲ್ ಇನ್ನಿತರ ಕಂಪನಿಗಳನ್ನು ಖಾಸಗೀಕರಣ ಮಾಡಲು ಮುಂದಾಗಿದೆ. ಮೆಸ್ಕಾಂ ಖಾಸಗೀಕರಣ ಮಾಡಲು ಹೊರಟಿರುವುದು ಸರಕಾರ ಸಾಧನೆಯೇ..? ಎಂದು ಪ್ರಶ್ನಿಸಿದರು.
ಖಾಸಗಿ ಕಂಪನಿಯನ್ನು ಬದುಕಿಸಲು ಸರಕಾರಿ ಕಂಪನಿ ಮುಚ್ಚಲು ಕೇಂದ್ರ ಸರ್ಕಾರ ಮುಂದಾಗಿದ್ದು ಜಿಯೋ ಕಂಪನಿಯನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡಲು ಮೋದಿ ಹೊರಟಿದ್ದಾರೆ ಎಂದು ದೂರಿದ ಅವರು ಸರ್ಕಾರವು ಭಾವನಾತ್ಮಕವಾಗಿ ಜನರನ್ನು ವಂಚಿಸಲು ಹೊರಟಿದ್ದು ಸ್ವಾತಂತ್ರ್ಯ ಹೋರಾಟಗಾರರ ಹೆಸರಿನ ಮೂಲಕ ನೆಹರೂ ಕುಟುಂಬದ ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿದರು.
ಮೋದಿಗೆ ಎರಡನೇ ಅವಧಿಯಲ್ಲೂ ಕಪ್ಪು ಹಣ ಹೊರತರಲು ಆಗಿಲ್ಲ. ಬದಲಾಗಿ ಗ್ಯಾಸ್, ಪೆಟ್ರೋಲಿಯಂನಲ್ಲಿ ಲೂಟಿ ಮಾಡಲು ಸರ್ಕಾರ ಮುಂದಾಗಿದೆ. ಮೋದಿ ಸರಕಾರ ಎರಡನೇ ಅವಧಿಯ ಸಾಧನೆ ಇದೇನಾ..? ಎಂದು ಮಾಜಿ ಸಚಿವ ರಮಾನಾಥ ರೈ ಪ್ರಶ್ನಿಸಿದರು.
ಬೆಳ್ತಂಗಡಿ: ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…
ಕಾಸರಗೋಡು : ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…
ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…
ಮಂಗಳೂರಿನಲ್ಲಿ ಹಜ್ ಭವನ, ಹಜ್ ಯಾತ್ರೆಗೆ ನೇರ ವಿಮಾನ ಸೌಲಭ್ಯ ಒದಗಿಸುವಂತೆ ಎಸ್‌ಡಿಪಿಐ ಆಗ್ರಹ ಮಂಗಳೂರು: ಮಂಗಳೂರಿನಲ್ಲಿ ಹಜ್ ಭವನ…
ಕಟಪಾಡಿ : ಶೀಘ್ರ ಒಂದು ಭಾಗದಲ್ಲಿ ವಾಹನ ಸಂಚಾರಕ್ಕೆ ಮುಕ್ತ ಕಟಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಂಡರ್‌ಪಾಸ್ ಕಾಮಗಾರಿ ವೇಗದಲ್ಲಿ ನಡೆಯುತಿದ್ದು,…