Featured

ಜನರಿಕ್ ಔಷಧಿಗಳು ಇನ್ನು ಎಲ್ಲೆಡೆ ಲಭ್ಯ ; ಕೇಂದ್ರದ ಮಹತ್ವದ ನಿರ್ಧಾರ..

ರಾಷ್ಟ್ರದಲ್ಲಿ ಮತ್ತೊಂದು ಅಮೂಲಾಗ್ರ ಬದಲಾವಣೆಗೆ ವೇದಿಕೆ ಸಿದ್ಧವಾಗಿದೆ. ಮೋದಿ ಸರ್ಕಾರದ ಮತ್ತೊಂದು ಮಹತ್ವದ ನಿರ್ಧಾರ ಭಾರತದ ಬಡವರ ಪಾಲಿಗೆ ನಿಜಕ್ಕೂ ಅಚ್ಛೇ ದಿನಗಳನ್ನು ತರಲಿದೆ. ಭಾರತೀಯರನ್ನು ಆರೋಗ್ಯವಂತರನ್ನಾಗಿಡುವ ಉದ್ದೇಶದಿಂದ, ಮಿತಿಮೀರುತ್ತಿದ್ದ ಔಷಧ ಬೆಲೆಗಳಿಗೆ ಕಡಿವಾಣ ಹಾಕಲು ಮೋದಿ ಸರಕಾರ ಜನರಿಕ್ ಜನೌಷಧಿ ಕೇಂದ್ರಗಳನ್ನು ದೇಶದಾದ್ಯಂತ ತೆರೆದಿತ್ತು.

ಈ ಜನರಿಕ್ ಜನೌಷಧಿ ಕೇಂದ್ರಗಳು ಔಷಧಿಗಳಿಗೆ ಹಣ ಹೊಂದಿಸುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದ ಬಡವರಿಗೆ ಅನುಕೂಲವಾಗಿದೆ. ಬ್ರಾಂಡೆಡ್ ಹಾಗೂ ಹಾಗೂ ಜೆನೆರಿಕ್ ಔಷಧಿಗಳ ಗುಣಮಟ್ಟ ಒಂದೇ ಆಗಿದ್ದು ಈ ಜೆನೆರಿಕ್ ಔಷಧಿಗಳು ಉತ್ಪಾದನೆಯಾಗಿ ನೇರವಾಗಿ ಮಳಿಗೆಗಳಿಗೆ ಬರುವುದರಿಂದ ಜನರಿಗೆ ಬ್ರಾಂಡೆಡ್ ಔಷಧಿಗಳಿಗಿಂತ ಸುಮಾರು 30 ರಿಂದ 70 ಶೇಕಡಾ ದಷ್ಟು ಕಡಿಮೆ ದರದಲ್ಲಿ ಲಭ್ಯವಾಗುತ್ತಿದೆ. ಈ ಕೇಂದ್ರದಲ್ಲಿ ಡಯಾಲಿಸಿಸ್ ರೋಗಿಗೆ ನೀಡಲಾಗುವ ಇಂಜೆಕ್ಷನ್ ನ ಬೆಲೆ ಕೇವಲ 650, ಇದೇ ಇಂಜೆಕ್ಷನ್ ನ ಬೆಲೆ ಮೆಡಿಕಲ್ ಗಳಲ್ಲಿ 1800 ರೂಪಾಯಿಗಳಾಗಿದ್ದು, ಎಚ್.ಐ.ವಿ. ಔಷಧ ಕಿಟ್ ಗೆ ಇತರೆಡೆ 4000 ರೂಪಾಯಿ ಮೌಲ್ಯವಾದರೆ ಜನರಿಕ್ ಮಳಿಗೆಗಳಲ್ಲಿ ಇದು 650 ರೂಪಾಯಿಗೆ ಲಭ್ಯವಿದೆ.

ದೇಶದಾದ್ಯಂತ 4000 ಕ್ಕೂ ಹೆಚ್ಚು ಜನೌಷಾದಿ ಮಳಿಗೆಗಳಿದ್ದರೂ ಸಹ ಜನರಿಗೆ ಸರಿಯಾಗಿ ತಲುಪುತ್ತಿರಲಿಲ್ಲ. ಈಗ ಇದಕ್ಕೆಲ್ಲಾ ಅಂತ್ಯ ಆಡಲು ಮೋದಿ ಸರಕಾರ ಕ್ರಾಂತಿಕಾರಿ ನಿರ್ಧಾರವನ್ನು ಕೈಗೊಂಡಿದೆ. ಇನ್ನು ಜನರಿಕ್ ಔಷಧಿಗಳನ್ನು ದೇಶದ ಎಲ್ಲಾ ಮೆಡಿಕಲ್ ಶಾಪ್ ಗಳಲ್ಲಿ ಮಾರಾಟ ಮಾಡುವಂತೆ ಸೂಚಿಸಲಾಗಿದ್ದು, ಜನರಿಕ್ ಔಷಧಿಗಳನ್ನು ತಮ್ಮ ಮೆಡಿಕಲ್ ಶಾಪ್ ನಲ್ಲಿ ಎಲ್ಲರಿಗೂ ಕಾಣುವಂತೆ ಇಡಬೇಕು ಎಂದು ಕೇಂದ್ರ ಔಷಧ ನಿಯಂತ್ರಣಾಲಯ ಮಹತ್ವದ ಫರ್ಮಾನು ಹೊರಡಿಸಿದೆ.ಪ್ರತಿಯೊಬ್ಬ ಭಾರತೀಯನಿಗೆ ಸಹ ಜನರಿಕ್ ಔಷಧಗಳು ಲಭ್ಯವಾಗಬೇಕು ಎನ್ನುವ ಉದ್ದೇಶದಿಂದ ಜನರಿಕ್ ಔಷಧಗಳನ್ನು ಎಲ್ಲ ಮೆಡಿಕಲ್ ಸ್ಟೋರ್ ಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ .

ಜೂನ್ ಹನ್ನೆರಡು ರಂದು ಕೇಂದ್ರ ಔಷಧ ನಿಯಂತ್ರಣ ಇಲಾಖೆ ಹೊರಡಿಸಿರುವ ಈ ಆದೇಶದಲ್ಲಿ ಲೈಸೆನ್ಸ್ ಪಡೆದು ಸೇವೆ ನೀಡುತ್ತಿರುವ ಎಲ್ಲಾ ಔಷಧಿ ಅಂಗಡಿಗಳಲ್ಲಿ ಜನರಿಕ್ ಔಷಧ ಮಾರಾಟ ಮಾಡುವಂತೆ ಸೂಚಿಸಲಾಗಿದೆ. ಒಂದು ವೇಳೆ ಮೆಡಿಕಲ್ ಗಳಲ್ಲಿ ಜನರಿಕ್ ಔಷಧ ಸಂಗ್ರಹಣೆ ಮತ್ತು ಮಾರಾಟದ ಆದೇಶ ಪಾಲನೆ ಉಲ್ಲಂಘಿಸಿದಲ್ಲಿ ಅಂತಹ ಔಷಧ ಅಂಗಡಿಗಳ ಲೈಸೆನ್ಸ್ ಗಳನ್ನು ರದ್ದುಪಡಿಸಲು ಕಟ್ಟುನಿಟ್ಟಿನ ಸೂಚನೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

Vishwa News 24

Recent Posts

ಉಡುಪಿ ನಗರಸಭೆ ವ್ಯಾಪ್ತಿಯ ಮೂಲ ಸೌಕರ್ಯ ಅಭಿವೃದ್ಧಿಗೆ ರೂ. 30 ಕೋಟಿ ಅನುದಾನ ಮಂಜೂರು ಮಾಡುವಂತೆ  ಶಾಸಕ ಯಶ್ ಪಾಲ್ ಮನವಿ – vishwanews24

ಉಡುಪಿ ನಗರಸಭೆ ಮೂಲ ಸೌಕರ್ಯ ಅಭಿವೃದ್ಧಿಗೆ ರೂ. 30 ಕೋಟಿ ವಿಶೇಷ ಅನುದಾನ ಮಂಜೂರು ಮಾಡುವಂತೆ ನಗರಾಭಿವೃದ್ಧಿ ಸಚಿವ ಯತೀಂದ್ರ…

1 hour ago

ಮಂಗಳೂರು: ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಚಿನ್ನ ಗೆಲ್ಲುವೆ : ಪೂವಮ್ಮ – vishwanews24

ಮಂಗಳೂರು: ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಚಿನ್ನ ಗೆಲ್ಲುವೆ : ಪೂವಮ್ಮ ಮಂಗಳೂರು: ಬದುಕಿನಲ್ಲಿ ಅನೇಕ ಏಳು…

1 hour ago

ಉಡುಪಿ ಜಿಲ್ಲೆಯಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟಕ್ಕೆ ಲೈಸನ್ಸ್ : ಅರ್ಜಿ ಸಲ್ಲಿಸಲು ಅ.26 ಕೊನೆಯ ದಿನ – vishwanews24

ಉಡುಪಿ :ಜಿಲ್ಲೆಯಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ; ಲೈಸನ್ಸ್‌ಗಾಗಿ ಅರ್ಜಿ ಸಲ್ಲಿಸಲು ಅ. 26 ಕೊನೆಯ ದಿನ ಉಡುಪಿ: ದೀಪಾವಳಿ…

1 hour ago

ಉಡುಪಿ : ಯಕ್ಷಗಾನವನ್ನು ‘ಕರ್ನಾಟಕ ರಾಜ್ಯ ಕಲೆ’ ಎಂದು ಘೋಷಿಸಿ : ಮುಖ್ಯಮಂತ್ರಿಗಳಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಮನವಿ – vishwanews24

ಉಡುಪಿ : ಯಕ್ಷಗಾನವನ್ನು ‘ಕರ್ನಾಟಕ ರಾಜ್ಯ ಕಲೆ’ ಎಂದು ಘೋಷಿಸಿ : ಮುಖ್ಯಮಂತ್ರಿಗಳಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಮನವಿ ಉಡುಪಿ…

2 hours ago

ರಾಜ್ಯಕ್ಕೆ 3705.30 ಕೋಟಿ ರೂ. ಬರ ಪರಿಹಾರ ನೀಡಿ: ಸಿಎಂ ಡಿ.ಕೆ.ಶಿವಕುಮಾರ್ ಮನವಿ – vishwanews24

ರಾಜ್ಯಕ್ಕೆ 3705.30 ಕೋಟಿ ರೂ. ಬರ ಪರಿಹಾರ ನೀಡಿ: ಸಿಎಂ ಡಿ.ಕೆ.ಶಿವಕುಮಾರ್ ಮನವಿ ಕೇಂದ್ರ ಬರ ಅಧ್ಯಯನ ತಂಡದೊಂದಿಗೆ ಸಿಎಂ…

2 hours ago

ಮಣಿಪಾಲ: ಕ್ಯು ಆರ್ ಕೋಡ್ ಬದಲಿಸಿ 12 ಲಕ್ಷ ರೂಪಾಯಿ ವಂಚನೆ – vishwanews24

ಮಣಿಪಾಲ: ಕ್ಯು ಆರ್ ಕೋಡ್ ಬದಲಿಸಿ 12 ಲಕ್ಷ ರೂಪಾಯಿ ವಂಚನೆ ಮಣಿಪಾಲ: ಕಂಪೆನಿ ಕ್ಯು ಆರ್‌ಕೋಡ್ ಬಳಸದೆ ಮರ್ಚೆಂಟ್…

2 hours ago