Featured

ಜನರ ಹೊಟ್ಟೆಗೆ‌ ಗತಿಯಿಲ್ಲದ ಸ್ಥಿತಿ ಬಂದರೆ‌ ಶ್ರೀಲಂಕಾದ ದುರಂತ ಭಾರತದಲ್ಲೂ ಆಗಬಹುದು ; ಇದಪ್ಪಾ ಅಚ್ಚೇದಿನ್ : ದಿನೇಶ್ ಗುಂಡುರಾವ್ – Vishwanews24

ಜನರ ಹೊಟ್ಟೆಗೆ‌ ಗತಿಯಿಲ್ಲದ ಸ್ಥಿತಿ ಬಂದರೆ‌ ಶ್ರೀಲಂಕಾದ ದುರಂತ ಭಾರತದಲ್ಲೂ ಆಗಬಹುದು ; ಇದಪ್ಪಾ ಅಚ್ಚೇದಿನ್ : ದಿನೇಶ್ ಗುಂಡುರಾವ್ – Vishwanews24

ಬೆಂಗಳೂರು: ಧರ್ಮ ಜನರ ಹೊಟ್ಟೆ ತುಂಬಿಸುವುದಿಲ್ಲ.‌ ಜನರ ಹೊಟ್ಟೆಗೆ‌ ಗತಿಯಿಲ್ಲದ ಸ್ಥಿತಿ ಬಂದರೆ‌ ಶ್ರೀಲಂಕಾದ ದುರಂತ ಭಾರತದಲ್ಲೂ ಆಗಬಹುದು ಬೆಲೆ ಏರಿಕೆ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆತ್ತಿಕೊಂಡಿರುವ ಕಾಂಗ್ರೆಸ್ ನಾಯಕ ಇದಪ್ಪಾ ಅಚ್ಚೇದಿನ್ ಎಂದು ದಿನೇಶ್ ಗುಂಡುರಾವ್ ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವವ ಅವರು, “ಧರ್ಮ ಜನರ ಹೊಟ್ಟೆ ತುಂಬಿಸುವುದಿಲ್ಲ.‌ ಜನರ ಹೊಟ್ಟೆಗೆ‌ ಗತಿಯಿಲ್ಲದ ಸ್ಥಿತಿ ಬಂದರೆ‌ ಶ್ರೀಲಂಕಾದ ದುರಂತ ಭಾರತದಲ್ಲೂ ಆಗಬಹುದು” ಎಂದು ಎಚ್ಚರಿಕೆ ನೀಡಿದ್ದಾರೆ.

ಮೋದಿಯವರ ಆಡಳಿತದಲ್ಲಿ ಹಣದುಬ್ಬರ 7.79 ಕ್ಕೆ ಏರಿ 8 ವರ್ಷದಲ್ಲಿ ಗರಿಷ್ಠ ಸಾಧನೆ ಮಾಡಿದೆ.ಹಸಿವಿನ ಸೂಚ್ಯಂಕದಲ್ಲಿ ಭಾರತಕ್ಕೆ 101ನೇ ಸ್ಥಾನ. ಬಡತನ ಸೂಚ್ಯಂಕದಲ್ಲಿ 66 ನೇ ಸ್ಥಾನ. ನಿರುದ್ಯೋಗದ ದರ 7.83% ಏರಿಕೆ. ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ.‌ ಪೆಟ್ರೋಲ್ 113,ಡೀಸೆಲ್ 96.ಅಡುಗೆ ಎಣ್ಣೆ ₹85 ಗಳಿಂದ ₹205. ಇದಪ್ಪಾ ಅಚ್ಚೇದಿನ್ ಎಂದು ಲೇವಡಿ ಮಾಡಿದ್ದಾರೆ.

8 ವರ್ಷಗಳ ಹಿಂದೆ ಸಿಲಿಂಡರ್ ಬೆಲೆ 400 ಇದ್ದಾಗ ‘ದುಬಾರಿ ಕಾಂಗ್ರೆಸ್ ಸಾಕು-ಜನಪರ ಬಿಜೆಪಿ ಬೇಕು’ ಎಂದು ಬಿಜೆಪಿಯವರು ಬೀದಿ ಬೀದಿಯಲ್ಲಿ ಬ್ಯಾನರ್ ಹಾಕಿದ್ದರು. ಈಗ ಸಿಲಿಂಡರ್ ₹1000 ದಾಟಿದೆ. ಅಕ್ಕಿ,ಗೋದಿ ಹಿಟ್ಟು,ಸಾಬೂನು, ಟೂಥ್‌ಪೇಸ್ಟ್ ಜನರ ಕೈಗೆಟುಕದಂತಾಗಿದೆ. ಈಗ ಬಿಜೆಪಿಯವರಿಗೆ ‘ದುಬಾರಿ BJP ಸಾಕು’ ಎಂದು ಬ್ಯಾನರ್ ಹಾಕಿಸುವ ಧಮ್ ಇದೆಯೆ? ಎಂದು ಸವಾಲ್ ಹಾಕಿದ್ದಾರೆ

ಆರ್ಥಿಕ ಶಿಸ್ತಿಲ್ಲದ ಮೋದಿಯವರ ಆಡಳಿತದಿಂದ‌ ದೇಶದ ಸಾಮಾನ್ಯ ವರ್ಗ ಬದುಕಲು ಹೋರಾಟ ನಡೆಸಬೇಕಾಗಿದೆ. ಮೋದಿಯವರು ದೇಶದ ನೈಜ ಸಮಸ್ಯೆಗಳನ್ನು ಮರೆಮಾಚಲು ಧರ್ಮ‌ ದೇವರು ಎಂಬ ಅಸ್ತ್ರ ಪ್ರಯೋಗಿಸುತ್ತಿದ್ದಾರೆ.‌ ಆದರೆ ಧರ್ಮ ಜನರ ಹೊಟ್ಟೆ ತುಂಬಿಸುವುದಿಲ್ಲ.‌ ಜನರ ಹೊಟ್ಟೆಗೆ‌ ಗತಿಯಿಲ್ಲದ ಸ್ಥಿತಿ ಬಂದರೆ‌ ಶ್ರೀಲಂಕಾದ ದುರಂತ ಭಾರತದಲ್ಲೂ ಆಗಬಹುದು ಎಂದು ಹೇಳಿದ್ದಾರೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

4 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

4 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

4 days ago