Featured

ಜಮೀರ್ ನಮ್ಮ ಪಕ್ಷದ ಉನ್ನತ ನಾಯಕ , ಅವರು ನಮ್ಮ ಪಕ್ಷದ ಬಾಹುಬಲಿ : ಸತೀಶ್ ಜಾರಕಿಹೊಳಿ – Vishwanews24

ಜಮೀರ್ ನಮ್ಮ ಪಕ್ಷದ ಉನ್ನತ ನಾಯಕ , ಅವರು ನಮ್ಮ ಪಕ್ಷದ ಬಾಹುಬಲಿ : ಸತೀಶ್ ಜಾರಕಿಹೊಳಿ

ಬೆಳಗಾವಿ: ಜಮೀರ್ ಅಹ್ಮದ್ ಖಾನ್ ಅವರು ನಮ್ಮ ಪಕ್ಷದ ಉನ್ನತ ನಾಯಕ. ಅವರನ್ನು ನೀವು ಎಲ್ಲಾ ರೀತಿಯಿಂದ ಬೆಳೆಸಬೇಕು. ಅವರು ನಮ್ಮ ಪಕ್ಷದ ಬಾಹುಬಲಿ. ತಮ್ಮದೇ ಆದ ಶಕ್ತಿಯನ್ನು ಹೊಂದಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಜಮೀರ್ ಅಹ್ಮದ್ ಖಾನ್ ಅವರನ್ನು ಹೊಗಳಿದರು.

ನಗರದಲ್ಲಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ಆಗಸ್ಟ್ 3 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟುಹಬ್ಬವನ್ನು ದಾವಣಗೆರೆಯಲ್ಲಿ ಮಾಡುತ್ತಿದ್ದೇವೆ. ಬೆಂಗಳೂರಿನಿಂದ ನಮಗೆ ಆಹ್ವಾನ ನೀಡಲು ಜಮೀರ್ ಬಂದಿದ್ದಾರೆ. ನಮ್ಮ ಪಕ್ಷದ ಉನ್ನತ ನಾಯಕ ಜಮೀರ್ ಅಹ್ಮದ್ ಎಂದು ಕೊಂಡಾಡಿದರು.

9 ತಿಂಗಳಲ್ಲಿ ಚುನಾವಣೆ ಬರ್ತಾ ಇದೆ. ಈ ಚುನಾವಣೆಯಲ್ಲಿ ನೀವೆಲ್ಲಾ ಒಗ್ಗಟ್ಟಾಗಬೇಕು. ಬರುವ ಚುನಾವಣೆಯಲ್ಲಿ ಗಟ್ಟಿಯಾಗಿರಬೇಕು. ಜಾಫರ್ ಶರೀಫ್ ನಂತರ ಮತ್ತೊಬ್ಬ ಮುಸ್ಲಿಂ ನಾಯಕರಾಗಲು ಜಮೀರ್‌ಗೆ ಅವಕಾಶವಿದೆ. ಎಲ್ಲೇ ಹೋದರೂ 5-10 ಲಕ್ಷ ರೂ. ಜಮೀರ್ ಜೇಬಿನಲ್ಲಿರುತ್ತದೆ. ವಾಪಸ್ ಹೋಗುವಾಗ ಖಾಲಿ ಜೇಬಿನಿಂದ ಹೋಗುತ್ತಾರೆ. ನಾವು ಅಷ್ಟು ಹಣ ಇಟ್ಟುಕೊಳ್ಳುವುದಿಲ್ಲ. ಇಡಿ, ಐಟಿ ನಿಮ್ಮ ಹಿಂದೆ ಬಿದ್ದಿದೆ ಎಂದರೆ ನಿಮ್ಮ ಜೊತೆಗೆ ಪಕ್ಷ ಮತ್ತು ಸಮುದಾಯವಿದೆ. ಮುಂದಿನ ದಿನಗಳಲ್ಲಿ ಅಚ್ಚೇ ದಿನ್ ಬರುತ್ತದೆ. ನೀವು ಕಾಯಬೇಕು ಎಂದರು.

ನಿಮ್ಮ ಶಕ್ತಿ ಕಾಂಗ್ರೆಸ್ ಶಕ್ತಿ. ಎಲ್ಲರೂ ಒಗ್ಗಟ್ಟಾಗಿರಬೇಕು. ಮುಂದಿನ ದಿನಗಳಲ್ಲಿ ಜಮೀರ್ ಅಹ್ಮದ್ ಬೆಳಗಾವಿಗೆ ಆಗಮಿಸುತ್ತಾರೆ. ನಿಮಗೂ ಒಬ್ಬರು ಲೀಡರ್ ಅಂತ ಬೇಕಾಗುತ್ತದೆ. ಹೀಗಾಗಿ ಜಮೀರ್ ಬರ್ತಾರೆ. ಎಲ್ಲಾ ಕಡೆ ಸಭೆಗಳನ್ನು ಮಾಡುತ್ತಾರೆ. ಅಲ್ಪಸಂಖ್ಯಾತ ಸಮುದಾಯದಿಂದ ಜಮೀರ್ ಅಹ್ಮದ್ ನಾವು ಕೂಡ ಮುಖ್ಯಮಂತ್ರಿ ಆಕಾಂಕ್ಷಿ ಎಂದಿದ್ದಾರೆ ಎಂದು ತಿಳಿಸಿದರು.

ನಮಗೂ ಸಾಕಷ್ಟು ಜನ ಕೇಳುತ್ತಾರೆ. ಆದರೆ ನಮ್ಮ ಸರದಿ ಇನ್ನೂ ದೂರ ಇದೆ. ದಿಲ್ಲಿ ಅಬಿ ದೂರ್ ಹೈ. ನಮ್ಮದು ಸಿಎಂ ಕುರ್ಚಿಗಾಗಿ ಲಡಾಯಿ ಇಲ್ಲ. ಈಗ ನಮ್ಮ ಜನರಿಗೆ ಸಮಾನತೆ ಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ಇದೆ. ಈಗ ನಮ್ಮದು ಕುರ್ಚಿಗಾಗಿ ಫೈಟ್ ಇಲ್ಲ ಎಂದು ಹೇಳಿದರು.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

4 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

5 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

5 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

5 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

5 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

5 days ago