Featured

ಜಲೀಲ್ ಹತ್ಯೆ ಪ್ರಕರಣದ ಸೂತ್ರಧಾರಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ , ಉನ್ನತ ಮಟ್ಟದ ತನಿಖೆಗೆ ಒಪ್ಪಿಸಿ : ಎಸ್‌ಡಿಪಿಐ – Vishwanews24

ಸುರತ್ಕಲ್ ನ ಜಲೀಲ್ ಹತ್ಯೆ ಪ್ರಕರಣ : ಸಂಘಪರಿವಾರದ ಮೂವರು ಆರೋಪಿಗಳನ್ನು ಶೀಘ್ರ ಬಂಧಿಸಿದ ದ.ಕ ಪೊಲೀಸ್ ಇಲಾಖೆಯ ನಡೆ ಸ್ವಾಗತಾರ್ಹ : ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ

ಮಂಗಳೂರು: ಸುರತ್ಕಲ್ ನ ಜಲೀಲ್ ಹತ್ಯೆ ನಡೆಸಿದ ಸಂಘಪರಿವಾರ ಸಂಘಟನೆಯ ಮೂವರು ಆರೋಪಿಗಳನ್ನು ಶೀಘ್ರ ಬಂಧಿಸಿದ ದ.ಕ ಪೊಲೀಸ್ ಇಲಾಖೆಯ ನಡೆ ಸ್ವಾಗತಾರ್ಹವಾಗಿದೆ.

ಆದರೆ ಇವರು ಘಟನೆಯ ಪಾತ್ರಧಾರಿಗಳಾಗಿರುತ್ತಾರೆ,ಈ ಪ್ರಕರಣದ ಸೂತ್ರದಾರಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ ಕಠಿಣ ಕಾನೂನಿನ ಅಡಿಯಲ್ಲಿ ಕೇಸ್ ದಾಖಲಿಸಿ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕೆಂದು ಎಸ್‌ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಬಿಡುಗಡೆಗೊಳಿಸಿರುವ ಅವರು ಸಂಘಪರಿವಾರ ಈ ಹಿಂದಿನಿಂದಲೂ ಹತ್ಯಾ ರಾಜಕೀಯದಲ್ಲಿ ನಂಬಿಕೆ ಇರಿಸಿ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದೆ.ಈ ಬಗ್ಗೆ ಎಸ್‌ಡಿಪಿಐ ನಿಯೋಗ ಹಲವಾರು ಬಾರಿ ಜಿಲ್ಲಾಡಳಿತ, ಪೋಲಿಸ್ ಕಮಿಷನರ್ ಜಿಲ್ಲಾ ಪೊಲೀಸ್ ಅಧಿಕಾರಿಯವರನ್ನು ಭೇಟಿ ಮಾಡಿ ಮನವಿ ಮಾಡಿತ್ತು.ಆದರೆ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸದೇ ಸಂಘಪರಿವಾರ ಅನೈತಿಕ ಗೂಂಡಾಗಿರಿ ನಡೆಸಿ ಕೊಲೆಯತ್ನ ದಂತಹ ಕೃತ್ಯಗಳನ್ನು ನಡೆಸಿದಾಗಲೂ ಠಾಣೆಯಲ್ಲೇ ಜಾಮೀನು ನೀಡುವಂತಹ ಲಘು ಸೆಕ್ಷನ್ ಹಾಕಿ ಬಿಡುಗಡೆ ಗೊಳಿಸುವ ಕಾರಣದಿಂದಾಗಿ ಪ್ರೇರಣೆಗೊಂಡಿರುವ ಸಂಘಪರಿವಾರ ಇಂದು ಅಲ್ಪಸಂಖ್ಯಾತರನ್ನು ಹತ್ಯಾ ನಡೆಸುತ್ತಿದೆ.

ಹತ್ಯೆ ನಡೆಸಿದವರಿಗೆ ಗೊತ್ತು ಈ ಕೃತ್ಯದಿಂದ ನಾವು ಜೈಲಿಗೆ ಹೋಗಲಿದ್ದೇವೆ,ಶಿಕ್ಷೆ ಅನುಭವಿಸಲಿದ್ದೇವೆ ಎಂದು, ಆದರೂ ಇವರು ಈ ಕೃತ್ಯ ನಡೆಸುತ್ತಾರೆ ಎಂದಾದರೆ ಇದು ಇವರ ಏಕ ತೀರ್ಮಾನ ವಾಗಿರುವುದಿಲ್ಲ ಬದಲಿಗೆ ಇದರ ಹಿಂದೆ ಸಂಘಪರಿವಾರದ ಮುಖಂಡರ ತೀರ್ಮಾನ ಹಾಗೂ ಅದಕ್ಕೆ ಬೇಕಾಗಿ ವ್ಯವಸ್ಥೆ ಮಾಡುವ ಹಿಂದುತ್ವ ಶಕ್ತಿಗಳ ಕೈವಾಡ ಇರುತ್ತದೆ.

ಹಾಗಾಗಿ ಪೋಲಿಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದರ ಸೂತ್ರದಾರಿಗಳು ಎಷ್ಟೇ ಪ್ರಬಲರಾಗಿದ್ದರು ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ರೀತಿಯಲ್ಲಿ ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಫಾಝಿಲ್ ಹಂತಕರೋರ್ವನಿಗೆ ಶೀಘ್ರದಲ್ಲೇ ಜಾಮೀನು ಸಿಕ್ಕಿದ ರೀತಿಯಲ್ಲಿ ಈ ಪ್ರಕರಣದಲ್ಲಿ ಹಾಗಾಗದಂತೆ ಎಚ್ಚರಿಕೆ ವಹಿಸಿ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Vishwa News 24

Recent Posts

ಸತೀಶ್ ಕಡತನಮಲೆ 6 ವರ್ಷ ಬಿಜೆಪಿ ಪಕ್ಷದಿಂದ ಉಚ್ಛಾಟನೆ  – vishwanews24

ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾ‌ನ ಕಾರ್ಯದರ್ಶಿ ಸತೀಶ್ ಕಡತನಮಲೆ 6 ವರ್ಷ ಪಕ್ಷದಿಂದ ಉಚ್ಛಾಟನೆ  ಬೆಂಗಳೂರು: ರಾಜ್ಯ ರೈತ…

1 hour ago

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿ – vishwanews24

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: “ಮಾಗಡಿ…

2 hours ago

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ – vishwanews24

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ ಮಡಿಕೇರಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ…

2 hours ago

ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು  – vishwanews24

ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು …

2 hours ago

ಮಂಗಳೂರು: ತಡೆಗೋಡೆ ಕುಸಿದು ಬಿದ್ದು ಮೂವರು ಮೃತ್ಯು; 5 ಲಕ್ಷ ರೂ.ಗಳ ಪರಿಹಾರ ಮೊತ್ತದ ಚೆಕ್‌ ವಿತರಣೆ – vishwanews24

ಮಂಗಳೂರು: ತಡೆಗೋಡೆ ಕುಸಿದು ಬಿದ್ದು ಮೂವರು ಮೃತ್ಯು; 5 ಲಕ್ಷ ರೂ.ಗಳ ಪರಿಹಾರ ಮೊತ್ತದ ಚೆಕ್‌ ವಿತರಣೆ ಮಂಗಳೂರು: ತಡೆಗೋಡೆ…

3 hours ago

ಡಿವಿ ಸದಾನಂದಗೌಡ ಆಡಿಯೋ ವೈರಲ್ ಬಗ್ಗೆ ವಿಜಯೇಂದ್ರ ರಿಯಾಕ್ಷನ್ – vishwanews24

ಡಿವಿ ಸದಾನಂದಗೌಡ ಆಡಿಯೋ ವೈರಲ್ ಬಗ್ಗೆ ವಿಜಯೇಂದ್ರ ಫಸ್ಟ್ ರಿಯಾಕ್ಷನ್ ಆಡಿಯೋ ಧ್ವನಿ ತಮ್ಮದಲ್ಲ ಎಂದು ಸದಾನಂದಗೌಡರೇ ಹೇಳಿದ್ದಾರೆ ;…

3 hours ago