ಜಿಬೌಟಿ: ಜಿಬೌಟಿ ಕರಾವಳಿಯ ಬಳಿ ಸಂಚರಿಸುತ್ತಿದ್ದ ಕ್ಯಾಮರೂನ್ ದೇಶಕ್ಕೆ ಸೇರಿದ ವಾಣಿಜ್ಯ ಹಡಗು ಎಂಟಿ ಫಾಲ್ಕನ್ ಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಭಾರತೀಯ ನೌಕಾಪಡೆಯ ಐಎನ್ಎಸ್ ತ್ರಿಕಾಂಡ್ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿದ ಘಟನೆ ನಡೆದಿದೆ.
ನೌಕೆಯು ಅಗ್ನಿಶಾಮಕ ಮತ್ತು ರಕ್ಷಣಾ ಕಾರ್ಯಾಚರಣೆಗೆ ನಡೆಸಿ ಜೀವ ರಕ್ಷಣೆ ಮತ್ತು ಅವಶೇಷಗಳನ್ನು ಯಶಸ್ವಿಯಾಗಿ ತೆರವುಗೊಳಿಸಿದೆ. ಈ ದುರಂತದಲ್ಲಿ ಇಬ್ಬರು ಸಿಬ್ಬಂದಿ ಜೀವ ಕಳೆದುಕೊಂಡಿದ್ದಾರೆ
ಎಂಟಿ ಫಾಲ್ಕನ್ ಹಡಗಿನಲ್ಲಿ ಒಟ್ಟು 26 ಮಂದಿ ಸಿಬ್ಬಂದಿ ಇದ್ದರು. ಇವರಲ್ಲಿ 25 ಮಂದಿ ಭಾರತೀಯರು ಹಾಗೂ ಒಬ್ಬರು ಬ್ರಿಟಿಷ್ ಪ್ರಜೆ. ಬೆಂಕಿ ಕಾಣಿಸಿಕೊಂಡ ಬಳಿಕ ಸುತ್ತಮುತ್ತಲಿನ ಮರ್ಚಂಟ್ ಹಡಗುಗಳು ತಕ್ಷಣ ಸ್ಪಂದಿಸಿ 24 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿವೆ ಎಂದು ಭಾರತೀಯ ನೌಕಾಪಡೆಯ ಪ್ರಕಟನೆ ತಿಳಿಸಿದೆ.
ಏಡೆನ್ ಕೊಲ್ಲಿಯಲ್ಲಿ ಕಡಲ ಭದ್ರತಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದ್ದ ಐಎನ್ಎಸ್ ತ್ರಿಕಾಂಡ್ ಘಟನಾ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿ, ವೈದ್ಯಕೀಯ ನೆರವು ಒದಗಿಸಿತು. ತೀವ್ರ ಶಾಖ, ಹಾನಿಗೊಂಡ ಹಡಗಿನ ಭಾಗಗಳು ಹಾಗೂ ವಿಷಕಾರಿ ಹೊಗೆಯ ನಡುವೆ, ನೌಕಾಪಡೆಯ ಅಗ್ನಿಶಾಮಕ ಮತ್ತು ವೈದ್ಯಕೀಯ ತಜ್ಞರ ತಂಡವು ಕಾಣೆಯಾಗಿದ್ದ ಇಬ್ಬರು ಸಿಬ್ಬಂದಿಯ ಮೃತದೇಹಗಳನ್ನು ಪತ್ತೆಹಚ್ಚಿತು.
“ಹಡಗಿನಿಂದ ಹೊರಬರಲು ಸಾಧ್ಯವಾದ 26 ಮಂದಿಯಲ್ಲಿ 24 ಮಂದಿಯನ್ನು ಮರ್ಚೆಂಟ್ ಹಡಗುಗಳು ರಕ್ಷಿಸಿವೆ. ಐಎನ್ಎಸ್ ತ್ರಿಕಾಂಡ್‌ನ ತಂಡವು ತೀವ್ರ ಪರಿಸ್ಥಿತಿಗಳಲ್ಲಿಯೂ ಕಾಣೆಯಾದ ಇಬ್ಬರ ಮೃತದೇಹಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ,” ಎಂದು ನೌಕಾಪಡೆಯು ಎಕ್ಸ್ ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದೆ.
ನಂತರ ಮೃತದೇಹಗಳನ್ನು ಜಿಬೌಟಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಹಸ್ತಾಂತರಿಸಲಾಗಿದೆ ಎಂದು ನೌಕಾಪಡೆಯು ಪ್ರಕಟಿಸಿದೆ.
ಬೆಳ್ತಂಗಡಿ: ಗಡಾಯಿಕಲ್ಲು ಪ್ರವೇಶ ಆರಂಭ - ಈ ನಿಯಮ ಪಾಲನೆ ಕಡ್ಡಾಯ ಅಧಿಕೃತ ವೆಬ್‌ಸೈಟ್ ಮೂಲಕ ಪೂರ್ವ ನೋಂದಣಿ ಮಾಡಿಸಿಕೊಳ್ಳುವುದು…
ಉಡುಪಿ: ಡಿವೈಡರ್ ಮೇಲೇರಿದ ಸ್ಕೂಲ್ ಬಸ್ ; ತಪ್ಪಿದ ಅನಾಹುತ ಉಡುಪಿ: ಅಲ್-ಇಬಾದಾ ಇಂಡಿಯನ್ ಸ್ಕೂಲ್‌ಗೆ ಸೇರಿದ ಬಸ್‌ವೊಂದು ಗುರುವಾರ…
ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…
ರಾಜ್ಯ ಸರ್ಕಾರದಿಂದ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …
ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…
ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…