Featured

ಜಿಲ್ಲೆಯಲ್ಲೇ ಅತಿ ದೊಡ್ಡ ವೈಭವದ ಶೋಭಾ ಯಾತ್ರೆ  : ನವದುರ್ಗೆಯರಿಗೆ ಐತಿಹಾಸಿಕ ಗಂಗಾರತಿ ;  ಉಚ್ಚಿಲ ದಸರಾಗೆ ವೈಭವದ ತೆರೆ – Vishwanews24

ಜಿಲ್ಲೆಯಲ್ಲೇ ಅತಿ ದೊಡ್ಡ ವೈಭವದ ಶೋಭಾ ಯಾತ್ರೆ  : ನವದುರ್ಗೆಯರಿಗೆ ಐತಿಹಾಸಿಕ ಗಂಗಾರತಿ ;  ಉಚ್ಚಿಲ ದಸರಾಗೆ ವೈಭವದ ತೆರೆ

ಉಡುಪಿ: ಜಿಲ್ಲೆಯ ಮಹಾಲಕ್ಷ್ಮಿ ದೇವಸ್ಥಾನದ  ದಸರಾ ಮಹೋತ್ಸವ ಸಂಪನ್ನಗೊಂಡಿದ್ದು ವೈಭವದ ಮೆರವಣಿಗೆ ನಡೆಯಿತು. ಕಾಪು ಕಡಲ ತೀರದಲ್ಲಿ ನವದುರ್ಗೆಯರಿಗೆ ಗಂಗಾವತಿ ನಡೆಸಿ, ಸಾವಿರಾರು ಜನರ ಸಮ್ಮುಖದಲ್ಲಿ ಜಲಸ್ತಂಭನ ಮಾಡಲಾಯಿತು.

ದಕ್ಷಿಣ ಭಾರತದ ಪ್ರಸಿದ್ಧ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ  ನವರಾತ್ರಿ ಉತ್ಸವವನ್ನು ವೈಭವದಿಂದ ಆಚರಿಸಲಾಗಿತ್ತು. ನವ ದುರ್ಗೆಯರ ಮೂರ್ತಿಯನ್ನು 9 ದಿನ ಆರಾಧಿಸಿ, ಇಂದು ವಿಸರ್ಜನಾ ಮೆರವಣಿಗೆ ಮಾಡಲಾಯಿತು. ಸಮುದ್ರ ತೀರದಲ್ಲಿ ನವದುರ್ಗ ವಿಸರ್ಜನೆ ವಿಶೇಷವಾಗಿತ್ತು. ಇದಕ್ಕೂ ಮುನ್ನ ಹೆಲಿಕಾಪ್ಟರ್‌ನಲ್ಲಿ ಮೂರು ಸುತ್ತು ಪುಷ್ಪವೃಷ್ಟಿ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ನೂತನ ತಂತ್ರಜ್ಞಾನದ ಹೆಲಿಕಾಪ್ಟರ್ ನವ ದುರ್ಗೆಯರ ಸಮೀಪಕ್ಕೆ ಬಂದು ಮೂರು ಬಾರಿ ಪುಷ್ಪಾರ್ಚನೆ ಮಾಡಿದ್ದು ವಿಶೇಷವಾಗಿತ್ತು.

ಮೆರವಣಿಗೆಯ ವೈಭವದಲ್ಲಿ 80 ಕ್ಕಿಂತ ಹೆಚ್ಚು ಟ್ಯಾಬ್ಲೋಗಳು ಭಾಗಿಯಾದವು. ಗಣಪತಿ ಈಶ್ವರ ನವದುರ್ಗೆಯರು ಹನುಮಂತ ಮೂಷಿಕದ ಮೇಲೆ ಸಂಚಾರ ಹೊರಟ ವಿಘ್ನ ವಿನಾಶಕ ಕಾಳಿಂಗ ಮರ್ಧನ ಕೃಷ್ಣ, ಬಕಾಸುರ ರಥದಲ್ಲಿ ಸಂಚರಿಸುವ ಕೃಷ್ಣ ಅರ್ಜುನರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹುಲಿ ವೇಷ ಕುಣಿತ ವಿವಿಧ ಭಜನಾ ತಂಡಗಳು ಭಾಗಿಯಾದವು. ಇದನ್ನೂ ಓದಿ: ಉಡುಪಿ: ದುರ್ಗಾ ದೌಡ್‌‌ನಲ್ಲಿ ತಲವಾರು ಪ್ರದರ್ಶನ.. ದೂರು ದಾಖಲಿಸುವಂತೆ ವಿವಿಧ ಸಂಘಟನೆಗಳಿಂದ ಎಸ್ಪಿಗೆ ಮನವಿ – Vishwanews24

ಕಳೆದ ಹತ್ತು ದಿನದಲ್ಲಿ ಸುಮಾರು 5 ಲಕ್ಷ ಜನ ಭಕ್ತರು ಶ್ರೀ ಕ್ಷೇತ್ರ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದೇವರ ದರ್ಶನ ಮತ್ತು ಪ್ರಸಾದವನ್ನು ಸ್ವೀಕರಿಸಿದ್ದಾರೆ. ಮಹಾಲಕ್ಷ್ಮಿ ದೇವಸ್ಥಾನದಿಂದ ಹೆಜಮಾಡಿ ಟೋಲ್‍ವರೆಗೆ ಅಲ್ಲಿಂದ ಕಾಪುವಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿದೆ. ಸುಮಾರು 25 kmಗಳ ಬೃಹತ್ ಮೆರವಣಿಗೆಯನ್ನು ಕೈಗೊಂಡು ಜಿಲ್ಲೆಯಲ್ಲೇ ಅತಿ ದೊಡ್ಡ ವೈಭವದ ಶೋಭಾ ಯಾತ್ರೆ ಎಂಬ ಹೆಗ್ಗಳಿಕೆಗೆ ಉಚ್ಚಿಲ ದಸರಾ ಪಾತ್ರವಾಗಿದೆ.

ರಾತ್ರಿ ಎರಡು ಗಂಟೆಯವರೆಗೂ ಕಾಪು ಕಡಲತೀರದವರೆಗೆ ನವ ದುರ್ಗೆಯರ ವೈಭವದ ಮೆರವಣಿಗೆ ನಡೆಯಿತು. ಅಲ್ಲಲ್ಲಿ ನಿಂತು ಜನ ದೇವರಿಗೆ ಪ್ರಾರ್ಥನೆ, ಪೂಜೆ ಸಲ್ಲಿಸಿದರು. ಮಲ್ಪೆ ಕಡಲ ತೀರದಲ್ಲಿ ಸಾವಿರಾರು ಜನ ಭಕ್ತ ಸಮುದಾಯದ ನಡುವೆ ಸಾಲಾಗಿ ನವ ದುರ್ಗೆಯರ ಮೂರ್ತಿಯನ್ನು ಇಟ್ಟು ಗಂಗರತಿ ಸಲ್ಲಿಸಲಾಯಿತು. 9 ದೇವಿಯರನ್ನು ಏಕಕಾಲದಲ್ಲಿ ಜಲ ಸ್ತಂಭ ಮಾಡಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಮಲ್ಪೆ: ಬಲೆಗೆ ಬಿದ್ದ ಬೃಹತ್ ಗಾತ್ರದ ಕಾರ್ಗಿಲ್ ಮೀನು – Vishwanews24

Vishwa News 24

Recent Posts

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ – vishwanews24

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…

10 hours ago

ಬೀದರ್ : ಮಳೆ ಆರ್ಭಟ ; ಸಿಡಿಲು ಬಡಿದು ಯುವಕ ಸಾವು – vishwanews24

ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…

11 hours ago

ಬೆಳ್ತಂಗಡಿ:  ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಿಂದ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ – vishwanews24

ಬೆಳ್ತಂಗಡಿ:  ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…

11 hours ago

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ – vishwanews24

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…

12 hours ago

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು – vishwanews24

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…

13 hours ago

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? – vishwanews24

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…

13 hours ago