Featured

ಜಿಲ್ಲೆಯಾದ್ಯಂತ ಮಹಾ ಶಕ್ತಿಕೇಂದ್ರಗಳನ್ನು ಸಕ್ರಿಯಗೊಳಿಸಲು ಕುಯಿಲಾಡಿ ಕರೆ – Vishwanews24

ಜಿಲ್ಲೆಯಾದ್ಯಂತ ಮಹಾ ಶಕ್ತಿಕೇಂದ್ರಗಳನ್ನು ಸಕ್ರಿಯಗೊಳಿಸಲು ಕುಯಿಲಾಡಿ ಕರೆ

ಜಿಲ್ಲಾ ಪದಾಧಿಕಾರಿಗಳು ಮತ್ತು ಮಹಾ ಶಕ್ತಿಕೇಂದ್ರಗಳ ಉಸ್ತುವಾರಿಗಳ ಸಭೆ

‘ಮೇರಾ ಬೂತ್ ಸಬ್ಸೇ‌ ಮಜ್ಬೂತ್’ ಎಂಬ ತತ್ವದಡಿ  ಪ್ರತಿಯೊಂದು ಬೂತ್ ಗಳನ್ನು ಗೆಲ್ಲುವ ಗುರಿಯೊಂದಿಗೆ ಬೂತ್ ಮತ್ತು ಶಕ್ತಿಕೇಂದ್ರಗಳನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮಹಾ ಶಕ್ತಿಕೇಂದ್ರಗಳನ್ನು ಸಕ್ರಿಯಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ‌ ಕುಯಿಲಾಡಿ ಸುರೇಶ್ ನಾಯಕ್ ಕರೆ ನೀಡಿದರು.
ಅವರು ಮೇ 2ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ‌ ನಡೆದ ಬಿಜೆಪಿ ಜಿಲ್ಲಾ ಪದಾಧಿಕಾರಿಗಳು ಮತ್ತು ಮಹಾ ಶಕ್ತಿಕೇಂದ್ರಗಳ ಉಸ್ತುವಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೇ 7ರಂದು ಬಿಜೆಪಿ ಜಿಲ್ಲಾ‌‌ ಕಾರ್ಯಕಾರಿಣಿ ಸಭೆ ನಡೆಯಲಿದೆ. ಜಿಲ್ಲಾ‌ ಕಾರ್ಯಕಾರಿಣಿ ಸಭೆಯ ಮೊದಲು ಹಾಗೂ ಪ್ರತೀ‌ ತಿಂಗಳಿಗೊಮ್ಮೆ ಎಲ್ಲಾ‌ ಮಹಾ‌ ಶಕ್ತಿಕೇಂದ್ರಗಳ ಸಭೆಯನ್ನು ಕಡ್ಡಾಯವಾಗಿ ನಡೆಸಿ ಸಭೆಯ ವರದಿಯನ್ನು ಜಿಲ್ಲೆಗೆ ಸಲ್ಲಿಸುವ ಜೊತೆಗೆ ಶಕ್ತಿ‌‌ಕೇಂದ್ರಗಳಿಗೆ ಉಸ್ತುವಾರಿಗಳ ನೇಮಕ ಮಾಡುವಂತೆ ಅವರು ತಿಳಿಸಿದರು.
ವಿಸ್ತಾರಕ ಯೋಜನೆಯ ಪರಿಪೂರ್ಣ ಅನುಷ್ಠಾನ, ಬೂತ್ ಅಧ್ಯಕ್ಷರ ನಾಮ ಫಲಕ ಅನಾವರಣ, ಬೂತ್ ಸಮಿತಿ‌ ಮತ್ತು ಶಕ್ತಿ‌ಕೇಂದ್ರಗಳ ಪ್ರಮುಖರ ಸಹಿತ ಕೀ‌ ವೋಟರ್ಸ್ ಯಾದಿ ರಚನೆಯ ಪರಿಶೀಲನೆ, ಮೈಕ್ರೋ ಡೊನೇಶನ್‌ಗೆ ವೇಗ ನೀಡುವುದು ಹಾಗೂ ಶಕ್ತಿಕೇಂದ್ರಗಳಿಗೆ‌ ಮಂಡಲಗಳ ಪದಾಧಿಕಾರಿಗಳನ್ನು ಉಸ್ತುವಾರಿಗಳನ್ನಾಗಿ ನೇಮಿಸುವ ನಿಟ್ಟಿನಲ್ಲಿ ಮಹಾ ಶಕ್ತಿಕೇಂದ್ರಗಳ ಉಸ್ತುವಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಕುಯಿಲಾಡಿ ತಿಳಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಪಕ್ಷದ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು ಮತ್ತು ಮಹಾ ಶಕ್ತಿಕೇಂದ್ರಗಳ ಉಸ್ತುವಾರಿಗಳು ಉಪಸ್ಥಿತರಿದ್ದರು.
Vishwa News 24

Recent Posts

ಕಾಪು ಬೀಚ್ ನಲ್ಲಿ ತೀವ್ರ ಕಡಲು ಕೊರೆತ : ಸಾರ್ವಜನಿಕರು ಬೀಚ್‌ ಗೆ ತೆರಳದಂತೆ ಜಿಲ್ಲಾಡಳಿತ ಮನವಿ – vishwanews24

ಕಾಪು ಬೀಚ್ ನಲ್ಲಿ ತೀವ್ರ ಕಡಲು ಕೊರೆತ : ಸಾರ್ವಜನಿಕರು ಬೀಚ್‌ ಗೆ ತೆರಳದಂತೆ ಜಿಲ್ಲಾಡಳಿತ ಮನವಿ ಉಡುಪಿ :…

16 minutes ago

ಮಲ್ಪೆ ಬಂದರಿನಲ್ಲಿ ಸುಗಮ ಮೀನುಗಾರಿಕಾ ಚಟುವಟಿಕೆಗೆ ಅಗತ್ಯ ಕ್ರಮವಹಿಸಿ : ಅಧಿಕಾರಿಗಳಿಗೆ ಯಶ್ಪಾಲ್ ಸುವರ್ಣ ಸೂಚನೆ – vishwanews24

ಮಲ್ಪೆ ಬಂದರಿನಲ್ಲಿ ಸುಗಮ ಮೀನುಗಾರಿಕಾ ಚಟುವಟಿಕೆಗೆ ಅಗತ್ಯ ಕ್ರಮವಹಿಸಿ : ಅಧಿಕಾರಿಗಳಿಗೆ ಯಶ್ಪಾಲ್ ಸುವರ್ಣ ಸೂಚನೆ ಉಡುಪಿ: ಮಲ್ಪೆ ಬಂದರಿನಲ್ಲಿ…

36 minutes ago

ಮಹಾರಾಷ್ಟ್ರದಲ್ಲಿ ನಕಲಿ ಪನ್ನೀರ್ ಸಂಪೂರ್ಣ ನಿಷೇಧ : ಮಾರಾಟ ಮಾಡಿದರೆ ಜೈಲು ಶಿಕ್ಷೆ,ಭಾರಿ ದಂಡ – vishwanews24

ಮಹಾರಾಷ್ಟ್ರದಲ್ಲಿ ನಕಲಿ ಪನ್ನೀರ್ ಸಂಪೂರ್ಣ ನಿಷೇಧ : ಮಾರಾಟ ಮಾಡಿದರೆ ಜೈಲು ಶಿಕ್ಷೆ,ಭಾರಿ ದಂಡ ಮುಂಬೈ : ಆಹಾರದಲ್ಲಿ ಹೆಚ್ಚುತ್ತಿರುವ…

43 minutes ago

ಸದ್ಯಕ್ಕೆ ಕಾಕ್ರೋಚ್ ಜನತಾ ಪಾರ್ಟಿ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ : ಅಭಿಜೀತ್ ದೀಪ್ಕೆ – vishwanews24

ಕಾಕ್ರೋಚ್ ಜನತಾ ಪಾರ್ಟಿ ಸದ್ಯಕ್ಕೆ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ : ಅಭಿಜೀತ್ ದೀಪ್ಕೆ ಮುಂಬೈ : ಕಾಕ್ರೋಚ್ ಜನತಾ ಪಾರ್ಟಿ…

1 hour ago

ಉದ್ಯಾವರ : ಪಾಪನಾಶಿನಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ – vishwanews24

ಉದ್ಯಾವರ : ಪಾಪನಾಶಿನಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ ಉಡುಪಿ: ಉದ್ಯಾವರದ ಪಿತ್ರೋಡಿಯ ಪಾಪನಾಶಿನಿ ನದಿಯಲ್ಲಿ ಆಗಸ್ಟ್ 5…

1 hour ago

ಕಾರ್ಕಳ ರೆಂಜಾಳದಲ್ಲಿ ಭೂಕುಸಿತದ ಆತಂಕ : ಡಿಸಿ ಸ್ವರೂಪಾ ಟಿ.ಕೆ ಭೇಟಿ, ಪರಿಶೀಲನೆ – vishwanews24

ಕಾರ್ಕಳ ರೆಂಜಾಳದಲ್ಲಿ ಭೂಕುಸಿತದ ಆತಂಕ : ಡಿಸಿ ಸ್ವರೂಪಾ ಟಿ.ಕೆ ಭೇಟಿ, ಪರಿಶೀಲನೆ ಉಡುಪಿ: ಕಾರ್ಕಳ ತಾಲೂಕಿನಲ್ಲಿ ಕಳೆದ ಎರಡು…

4 hours ago