ಉಡುಪಿ: ಜಿಲ್ಲೆಯಲ್ಲಿ ನಿವೇಶನ ರಹಿತ ಬಡವರು ನೂರಾರು ವರ್ಷಗಳಿಂದ ನೋವಿನ ಬದುಕು ಸಾಗಿಸುತ್ತಿದ್ದರೂ ಅದರ ಬಗ್ಗೆ ಚಕಾರವೆತ್ತದ ಜನಪ್ರತಿನಿಧಿಗಳು ಈಗ ಕಂಬಳಕ್ಕಾಗಿ ಭೂಮಿಗೆ ಪೈಪೋಟಿ ನಡೆಸುತ್ತಿರುವುದು ನಾಚಿಕೆಗೇಡು ಹಾಗೂ ವಿಷಾದದ ವಿಚಾರ.
ಕಂಬಳ ಎನ್ನುವುದು ಕೆಲವೊಂದು ಕುಟುಂಬಗಳ ಸ್ವಂತ ಆಚರಣೆಯೇ ಹೊರತು ಅದು ಜಿಲ್ಲಾಡಳಿತದ ಅನಿವಾರ್ಯ ಕಾರ್ಯಕ್ರಮವಲ್ಲ. ತಮ್ಮ ಸ್ವ ಪ್ರತಿಷ್ಠೆಯ ಪ್ರದರ್ಶನದ ಪ್ರತೀಕವಾದ ಕಂಬಳಕ್ಕೆ ಈಗ ಜಿಲ್ಲಾಡಳಿತದ ಶಿರೋನಾಮೆ ಕೊಟ್ಟು ಕೋಟ್ಯಂತರ ರೂಪಾಯಿ ಖರ್ಚು ಮಾಡುವ ವ್ಯವಸ್ಥಿತ ಸಂಚು ಇದು. ಕಂಬಳಕ್ಕೆ ಜಾಗ ಕಾಯ್ದಿರಿಸಿ ಆಮೇಲೆ ರೆಸಾರ್ಟ್ ತೆರೆಯುವ ಹುನ್ನಾರವಾಗಿದೆ.
ಇದನ್ನೂ ಓದಿ 👇:
ಕೋಣಗಳನ್ನು ಓಡಿಸಿ ಕಂಬಳ ನಡೆಸುವುದರಿಂದ ಕೋಣಗಳಿಗೆ ಆಗುವ ಪ್ರಯೋಜನವಾದರೂ ಏನು? ಕಂಬಳಕ್ಕೆ 6-30 ಎಕರೆ ಭೂಮಿ ಕಾದಿರಿಸಿದಂತೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಎಲ್ಲಾ ಬಬ್ಬುಸ್ವಾಮಿ ದೈವಸ್ಥಾನಗಳಿಗೆ ಕೋಲ, ನೇಮೋತ್ಸವ ನಡೆಸಲು ಒಂದೊಂದು ಎಕರೆ ಸರಕಾರಿ ಭೂಮಿಯನ್ನು ಮಂಜೂರು ಮಾಡಿಸಲು ಈಗ ಗುದ್ದಲಿ ಪೂಜೆ ನಡೆಸಿದ ಜನಪ್ರತಿನಿಧಿಗಳು ಹೋರಾಟ ನಡೆಸುತ್ತಾರೆಯೇ ? ಜಿಲ್ಲಾಡಳಿತ ಈ ಕರಾವಳಿಯ ಆರಾಧ್ಯ ದೈವವಾದ ಬಬ್ಬುಸ್ವಾಮಿಯ ಎಲ್ಲಾ ದೈವಸ್ಥಾನಗಳಿಗೆ ನೇಮೋತ್ಸವ ನಡೆಸಲು ಒಂದೊಂದು ಎಕರೆ ಭೂಮಿ ಕಾದಿರಿಸುತ್ತದೆಯೇ ?
ಮುಂದೊಂದು ದಿನ ಜೂಜಾಟ ಆಡುವ ಕೋಳಿ ಅಂಕಕ್ಕೂ ನಿವೇಶನ ಕೊಡಬೇಕೆಂದು ಜನಪ್ರತಿನಿಧಿಗಳು ಬೇಡಿಕೆ ಇಟ್ಟು ಒತ್ತಾಯಿಸಿದರೆ ಅದಕ್ಕೂ ಜಿಲ್ಲಾಡಳಿತ ಮಣೆ ಹಾಕುತ್ತದೆಯೇ?
80 ಬಡಗುಬೆಟ್ಟು ಗ್ರಾಮದ ಸರ್ವೆ ನಂಬರ್ 11/1 ರಲ್ಲಿ 6-30 ಎಕರೆ ಭೂಮಿಯನ್ನು ಕಂಬಳಕ್ಕಾಗಿ ಕಾದಿರಿಸಿದ್ದು ಜನವಿರೋಧಿ ನೀತಿ. ಲಕ್ಷಾಂತರ ಬಡವರು ಉಡುಪಿ ಜಿಲ್ಲೆಯಲ್ಲಿ ಸ್ವಂತ ನಿವೇಶನವಿಲ್ಲದೇ ಕಣ್ಣೀರಿನ ಜೀವನ ನಡೆಸುತ್ತಿರುವಾಗ ಮೋಜು ಮಸ್ತಿಗಾಗಿ ಸರಕಾರಿ ಜಾಗವನ್ನು ಕಾದಿರಿಸಿರುವುದು ಅಕ್ಷಮ್ಯ ಎಂದು ಡಿಎಸ್ ಎಸ್ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ಟರ್ ಎಚ್ಚರಿಸಿದ್ದಾರೆ.
ಇದನ್ನೂ ಓದಿ 👇:
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…