ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಷ್ಟ್ರ ರಾಜಧಾನಿ ಹೊಸದಿಲ್ಲಿ, ಬೆಳಗಾವಿ ಹಾಗೂ ಕೊಯಮತ್ತೂರಿಗೆ ಮುಂದಿನ ತಿಂಗಳಿನಿಂದ ವಿಮಾನ ಸೇವೆ ಆರಂಭವಾಗಲಿದ್ದು, ಕರಾವಳಿಯ ಬಂದರು ನಗರಿಗೆ ಮತ್ತಷ್ಟು ನಗರಗಳು ಹತ್ತಿರವಾಗಲಿವೆ.
ಕಳೆದ ಎರಡು ವರ್ಷಗಳಿಂದ ಬೇಡಿಕೆಯಿದ್ದ ಮಂಗಳೂರಿನಿಂದ ಹೊಸದಿಲ್ಲಿಯನ್ನು ಸಂಪರ್ಕಿಸುವ ನೇರ ವಿಮಾನದ ಬೇಡಿಕೆ ಸಾಕಾರಗೊಂಡಿದ್ದು, ಜು. 1ರಿಂದ ಇಂಡಿಗೋ ಸಂಸ್ಥೆಯಿಂದ ತಡೆರಹಿತ ವಿಮಾನ ಸೇವೆ ಆರಂಭವಾಗಲಿದೆ. ದಿಲ್ಲಿಯಿಂದ ಬೆಳಗ್ಗೆ 7.40ಕ್ಕೆ ಟೇಕಾಫ್ ಆಗಲಿರುವ ವಿಮಾನ ಬೆಳಗ್ಗೆ 10.15ಕ್ಕೆ ಮಂಗಳೂರಿನಲ್ಲಿ ಲ್ಯಾಂಡ್ ಆಗಲಿದೆ. ಬೆಳಗ್ಗೆ 10.45ಕ್ಕೆ ಮಂಗಳೂರಿನಿಂದ ನಿರ್ಗಮಿಸಲಿರುವ ವಿಮಾನ ಮಧ್ಯಾಹ್ನ 1.20ಕ್ಕೆ ದಿಲ್ಲಿಯಲ್ಲಿ ಇಳಿಯಲಿದೆ. ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಭಾನುವಾರ ಸೇರಿ ವಾರದಲ್ಲಿ ನಾಲ್ಕು ದಿನ ಈ ವಿಮಾನ ಕಾರ್ಯಾಚರಿಸಲಿದೆ.
ತಮಿಳುನಾಡಿನ ಕೊಯಮತ್ತೂರಿಗೆ ಮಂಗಳೂರಿನಿಂದ ವಿಮಾನ ಸೇವೆ ಬೇಕೆಂಬ ಬೇಡಿಕೆಯೂ ಈಡೇರಿದೆ. ಜು. 1ರಿಂದ ಅನ್ವಯವಾಗುವಂತೆ ಗೋ ಫಸ್ಟ್ ವಿಮಾನ ಸಂಸ್ಥೆ ಪ್ರತಿದಿನ ವಿಮಾನ ನಿರ್ವಹಣೆ ಮಾಡಲಿದೆ. ಮಧ್ಯಾಹ್ನ 1.30ಕ್ಕೆ ಮಂಗಳೂರಿನಿಂದ ಟೇಕಾಫ್ ಆಗುವ ವಿಮಾನ ಮಧ್ಯಾಹ್ನ 2.20ಕ್ಕೆ ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ. ಆದರೆ ಸದ್ಯ ಮುಂಬಯಿ-ಮಂಗಳೂರು ಗೋ ಫಸ್ಟ್ ವಿಮಾನ ಸೇವೆಯನ್ನೇ ಕೊಯಮತ್ತೂರಿಗೆ ವಿಸ್ತರಿಸಲಾಗಿದ್ದು, ಅಲ್ಲಿಂದ ಈ ವಿಮಾನ ಮತ್ತೆ ಮುಂಬಯಿಗೆ ತೆರಳಲಿದೆ. ಈ ಕಾರಣದಿಂದ ಮಂಗಳೂರು-ಕೊಯಮತ್ತೂರು ಏಕಮುಖ ಸಂಚಾರ ಮಾತ್ರ ಇರಲಿದ್ದು, ಕೊಯಮತ್ತೂರಿನಿಂದ ಮಂಗಳೂರಿಗೆ ಮರಳಿ ನೇರ ವಿಮಾನ ಸೇವೆ ಇರುವುದಿಲ್ಲ.
ಬ್ರಹ್ಮಾವರ: ಖಾಸಗಿ ಬಸ್ ಬೆಂಕಿಗಾಹುತಿ ; ಅದೃಷ್ಟವಶಾತ್ ಏಳು ಪ್ರಯಾಣಿಕರು ಪಾರು ಉಡುಪಿ: ಉಡುಪಿಯಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು…
ಸುರತ್ಕಲ್ : ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಆರೋಪ: ವ್ಯಕ್ತಿಯ ಬಂಧನ 1.206 ಕೆ.ಜಿ. ಗಾಂಜಾ, KTM ಮೋಟಾರ್ ಸೈಕಲ್…
ಸಕಲೇಶಪುರ–ಸುಬ್ರಹ್ಮಣ್ಯ ಮಾರ್ಗದಲ್ಲಿ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಪರಿಶೀಲನೆ ಕಡಬ : ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ರೈಲು ಮಾರ್ಗದಲ್ಲಿ ನಡೆದ…
ಉಡುಪಿ : ಆ. 20 ರಂದು ನೇರ ಸಂದರ್ಶನ ಉಡುಪಿ : ನಗರದ ಅಂಬಲಪಾಡಿ ಕರಾವಳಿ ಬೈಪಾಸ್ ಬಳಿಯ ರೀಗಲ್…
ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಗಳ ಮರುಪರಿಶೀಲನೆಗೆ…
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22ರಂದು ಉಡುಪಿಯಲ್ಲಿ ಸಭೆ ಉಡುಪಿ: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ…