Featured

ಜೂನ್ 29 ರಂದು ಕೊರೋನ ಲಸಿಕಾ ಲಭ್ಯತೆ ವಿವರ -Vishwanews24

ಜೂನ್ 29 ರಂದು ಕೊರೋನ ಲಸಿಕಾ ಲಭ್ಯತೆ ವಿವರ -Vishwanews24

ಉಡುಪಿ : ಜಿಲ್ಲೆಯಲ್ಲಿ ಜೂನ್ 29 ರಂದು ಉಡುಪಿ ನಗರ ಪ್ರದೇಶದಲ್ಲಿ ಕೊರೋನ ಮುಂಚೂಣಿ ಕಾರ್ಯಕರ್ತರು ಮತ್ತು 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಯಾವುದೇ ಕೋವಿಡ್-19 ಲಸಿಕೆ ಲಭ್ಯ ಇರುವುದಿಲ್ಲ.

ನಗರ ಪ್ರದೇಶದ ಸರಕಾರಿ ತಾಯಿ ಮತ್ತು ಮಕ್ಕಳ (ಬಿ.ಆರ್.ಎಸ್) ಆಸ್ಪತ್ರೆಯಲ್ಲಿ ಬೆಳಗ್ಗೆ 9.30 ರಿಂದ ಸಂಜೆ 4.30 ರ ವರೆಗೆ ಜುಲೈ 5 ರ ಒಳಗೆ ವಿದೇಶ ಪ್ರಯಾಣ ಮಾಡುವವರಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದವರಿಗೆ ಮಾತ್ರ 2ನೇ ಡೋಸ್ ಕೋವಿಶೀಲ್ಡ್ – 40 ಡೋಸ್ ಲಸಿಕೆ ಲಭ್ಯವಿರುತ್ತದೆ.

ಜಿಲ್ಲೆಯಲ್ಲಿರುವ ಪದವಿ, ಡಿಪ್ಲೋಮ ಹಾಗೂ ಐ.ಟಿ ಕಾಲೇಜುಗಳ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ, ಬೋಧಕ ಸಿಬ್ಬಂದಿಗಳಿಗೆ ಹಾಗೂ ಬೆಂಬಲ ಸಿಬ್ಬಂದಿಗಳಿಗೆ ಕೋವಿಡ್-19 ಲಸಿಕಾ ಶಿಬಿರವನ್ನು ಕಾಲೇಜುಗಳಲ್ಲಿ ಆಯೋಜಿಸಲಾಗುತ್ತಿದ್ದು, ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿಗಳು ಹಾಗೂ ಬೆಂಬಲ ಸಿಬ್ಬಂದಿಗಳು ತಾವು ಕಲಿಯುತ್ತಿರುವ / ಕರ್ತವ್ಯ ನಿರ್ವಹಿಸುತ್ತಿರುವ ಕಾಲೇಜನ್ನು ಅಥವಾ ಕಾಲೇಜಿನ ನೋಡಲ್ ಅಧಿಕಾರಿಯನ್ನು ಸಂಪರ್ಕಿಸಿ ಲಭ್ಯವಿರುವ ಲಸಿಕಾ ಪ್ರಮಾಣವನ್ನು ಆಧರಿಸಿ ಲಸಿಕಾಕರಣವನ್ನು ಖಚಿತಪಡಿಸಿಕೊಂಡು ಲಸಿಕೆ ಪಡೆಯಬಹುದು.

ಜಿಲ್ಲೆಯಲ್ಲಿರುವ ಪದವಿ, ಡಿಪ್ಲೋಮ ಹಾಗೂ ಐ.ಟಿ ಕಾಲೇಜುಗಳ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿಗಳು ಹಾಗೂ ಬೆಂಬಲ ಸಿಬ್ಬಂದಿಗಳು ತಾವು ಕಲಿಯುತ್ತಿರುವ / ಕರ್ತವ್ಯ ನಿರ್ವಹಿಸುತ್ತಿರುವ ಕಾಲೇಜನ್ನು ಹೊರತುಪಡಿಸಿ ಬೇರೆ ಕಾಲೇಜುಗಳಲ್ಲಿ ಲಸಿಕೆಯನ್ನು ಪಡೆಯುವಂತಿಲ್ಲ. ಬೇರೆ ಜಿಲ್ಲೆಯ ಕಾಲೇಜುಗಳಲ್ಲಿ ಕಲಿಯುತ್ತಿರುವ ಜಿಲ್ಲೆಯ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಬಗ್ಗೆ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಣೆಯ ಮೂಲಕ ತಿಳಿಸಲಾಗುವುದು.

ಜಿಲ್ಲೆಯಲ್ಲಿ 18 ರಿಂದ 44 ವರ್ಷ ವಯೋಮಿತಿಯ ಸಾರ್ವಜನಿಕರಿಗೆ ಯಾವುದೇ ಕೋವಿಡ್-19 ಲಸಿಕೆ ಲಭ್ಯವಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwa News 24

Recent Posts

NEET (UG) Re-Exam 2026:  ಭಾರತದಲ್ಲಿ ಟೆಲಿಗ್ರಾಮ್‌ಗೆ ತಾತ್ಕಾಲಿಕ ನಿಷೇಧ – vishwanews24

NEET (UG) Re-Exam 2026:  ಭಾರತದಲ್ಲಿ ಟೆಲಿಗ್ರಾಮ್‌ಗೆ ತಾತ್ಕಾಲಿಕ ನಿಷೇಧ ನವದೆಹಲಿ: ನೀಟ್ (NEET-UG 2026) ಮರು ಪರೀಕ್ಷೆಯನ್ನು ಸಂಪೂರ್ಣ…

6 minutes ago

NEET (UG) Re-Exam 2026:  ಭಾರತದಲ್ಲಿ ಟೆಲಿಗ್ರಾಮ್‌ಗೆ ತಾತ್ಕಾಲಿಕ ನಿಷೇಧ – vishwanews24

NEET (UG) Re-Exam 2026:  ಭಾರತದಲ್ಲಿ ಟೆಲಿಗ್ರಾಮ್‌ಗೆ ತಾತ್ಕಾಲಿಕ ನಿಷೇಧ ನವದೆಹಲಿ: ನೀಟ್ (NEET-UG 2026) ಮರು ಪರೀಕ್ಷೆಯನ್ನು ಸಂಪೂರ್ಣ…

12 minutes ago

ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜೂ. 19 ರಂದು ರಾಹುಲ್ ಗಾಂಧಿ ಜನ್ಮದಿನಾಚರಣೆ – vishwanews24

ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜೂ. 19 ರಂದು ರಾಹುಲ್ ಗಾಂಧಿ ಜನ್ಮದಿನಾಚರಣೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಕಾಂಗ್ರೆಸ್…

33 minutes ago

ಸುಳ್ಯ: ಮನೆಯ ಅಂಗಳಕ್ಕೆ ಮುರಿದು ಬಿದ್ದ ತೆಂಗಿನ ಮರ; ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ – vishwanews24

ಸುಳ್ಯ: ಮನೆಯ ಅಂಗಳಕ್ಕೆ ಮುರಿದು ಬಿದ್ದ ತೆಂಗಿನ ಮರ; ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ ಸುಳ್ಯ: ಮನೆಯ ಮುಂಭಾಗದಲ್ಲಿದ್ದ ತೆಂಗಿನ…

43 minutes ago

ಮಂಗಳೂರು: ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ – vishwanews24

ಮಂಗಳೂರು: ಸೋಮೇಶ್ವರದಲ್ಲಿ 16 ವರ್ಷದ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಂಗಳೂರು : 16 ವರ್ಷದ ಪ್ರಥಮ ವರ್ಷದ ಪಿಯುಸಿ (ಪಿಯುಸಿ)…

54 minutes ago

ಇನ್ಮುಂದೆ ವೈದ್ಯರ ಶಿಫಾರಸು ಇಲ್ಲದೇ ಮೆಡಿಕಲ್‌ನಲ್ಲಿ ಯಾವುದೇ ಸಿರಪ್‌ಗಳನ್ನು ಖರೀದಿಸುವಂತಿಲ್ಲ : ಕೇಂದ್ರ ಆದೇಶ – vishwanews24

ಮೆಡಿಕಲ್‌ನಲ್ಲಿ ಇನ್ಮುಂದೆ ಸಾರ್ವಜನಿಕರು ನೇರವಾಗಿ ಸಿರಪ್ ಖರೀದಿ ಮಾಡುವಂತಿಲ್ಲ: ಕೇಂದ್ರ ಆದೇಶ ನವದೆಹಲಿ: ಮೆಡಿಕಲ್‌ ಶಾಪ್‌ಗಳಲ್ಲಿ ಇನ್ಮುಂದೆ ಸಾರ್ವಜನಿಕರು ನೇರವಾಗಿ…

1 hour ago