ಮಂಡ್ಯ: ರಾಜಕೀಯ ಜಿದ್ದಾ ಜಿದ್ದಿಗೆ ಹೆಸರಾಗಿರುವ ಮಂಡ್ಯ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಭೇದಿಸಿ ಪ್ರಚಂಡ ಜಯ ದಾಖಲಿಸುವಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಯಶಸ್ವಿಯಾಗಿದ್ದಾರೆ.
ಮೊದಲ 2 ಸುತ್ತುಗಳಲ್ಲಿ ಮೈತ್ರಿ ಅಭ್ಯರ್ಥಿ ಕೆ.ನಿಖಿಲ್ ಮುನ್ನಡೆ ಸಾಧಿಸಿದಾಗ ಅವರು ಜೆಡಿಎಸ್ ಗೆಲುವಿನ ಕನಸು ಮೂಡಿಸಿತ್ತು. ಆದರೆ, ಅದು ಹೆಚ್ಚು ಕಾಲ ಉಳಿ ಯಲೇ ಇಲ್ಲ.
ಸುಮಲತಾ ಎಬ್ಬಿಸಿದ ಸ್ವಾಭಿಮಾನದ ಅಲೆಯೊಳಗೆ ಜೆಡಿಎಸ್ ಮೂಡಿಸಿದ್ದ ಅಭಿವೃದ್ಧಿ ಅಲೆ ಸಂಪೂರ್ಣವಾಗಿ ಕೊಚ್ಚಿಹೋಯಿತು. ಜೆಡಿಎಸ್ ಭದ್ರಕೋಟೆಯೊಳಗೆ ಸ್ವಾಭಿಮಾನದ ಕಹಳೆ ಮೊಳಗಿಸುವುದರೊಂದಿಗೆ ಏಕಾಂಗಿಯಾಗಿ ಚುನಾವಣಾ ಹೋರಾಟ ನಡೆಸಿ ಗೆಲುವಿನ ಗುರಿ ಮುಟ್ಟುವುದ ರೊಂದಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲೇ ಹೊಸ ದಾಖಲೆಯನ್ನು ಸುಮಲತಾ ನಿರ್ಮಿಸಿದ್ದಾರೆ.
ಲೋಕಸಭಾ ಇತಿಹಾಸದಲ್ಲೇ ಸುಮಲತಾ ಐತಿಹಾಸಿಕ ಗೆಲುವು ಸಾಧಿಸಿದ್ದು ಲೋಕಸಭೆ ಪ್ರವೇಶಿಸಿದ ಮೊದಲ ಪಕ್ಷೇತರ ಮಹಿಳಾ ಸಂಸದೆ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಇದರೊಂದಿಗೆ 2019ರ ಮಂಡ್ಯ ಲೋಕಸಭಾ ಚುನಾವಣೆ ಹೊಸ ಇತಿಹಾಸವನ್ನು ಹುಟ್ಟುಹಾಕಿದೆ.
ದೇವೇಗೌಡರ ಕುಟುಂಬಕ್ಕೆ ಎರಡನೇ ಕಣ್ಣಾಗಿರುವ ಮಂಡ್ಯ ಕ್ಷೇತ್ರದ ಫಲಿತಾಂಶ ಜೆಡಿಎಸ್ ವರಿಷ್ಠರಿಗೆ ದೊಡ್ಡ ಆಘಾತವನ್ನು ನೀಡಿದೆ. ಪುತ್ರನಿಗೆ ರಾಜಕೀಯ ಭವಿಷ್ಯ ಪಟ್ಟಾಭಿಷೇಕ ಮಾಡುವ ಮುಖ್ಯಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಹುದಿನದ ಕನಸು ನುಚ್ಚುನೂರಾಗಿದೆ.
ಕುಂದಾಪುರ: ಹೋಂ ಸ್ಟೇ ಎನ್ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…
ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ :…
ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…
ಉಡುಪಿ: ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…