Featured

ಜೇಸಿಐ ವಲಯ ಹದಿನೈದಕ್ಕೆ ಜೇಸಿಐ ಭಾರತದ ಅತ್ಯುತ್ತಮ ವಲಯಾಧ್ಯಕ್ಷ ಪ್ರಶಸ್ತಿ ಸೇರಿದಂತೆ 16 ರಾಷ್ಟ್ರೀಯ ಪ್ರಶಸ್ತಿ..

ಕಾಪು : ರಾಜಸ್ಥಾನದ ಜೈಪುರದಲ್ಲಿ ಜರಗಿದ ೬೩ನೇ ರಾಷ್ಟ್ರೀಯ ಅಧಿವೇಶನದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡಿರುವ ಜೇಸಿಐ ವಲಯ ಹದಿನೈದಕ್ಕೆ ಜೇಸಿಐ ಭಾರತದ ಅತ್ಯುತ್ತಮ ವಲಯಾಧ್ಯಕ್ಷ ಪ್ರಶಸ್ತಿಯೂ ಸೇರಿದಂತೆ ೧೬ ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ ಎಂದು ೨೦೧೮ರ ವಲಯಾಧ್ಯಕ್ಷ ರಾಕೇಶ್ ಕುಂಜೂರು ಮತ್ತು ಜೇಸಿಐ ಇಂಡಿಯಾ ಫೌಂಡೇಷನ್ ನಿರ್ದೇಶಕ ವೈ. ಸುಕುಮಾರ್ ಜಂಟಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಕಾಪು ಪ್ರೆಸ್ ಕ್ಲಬ್‌ನಲ್ಲಿ ಗುರವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಜೇಸಿಐ ಭಾರತದ ವಿವಿಧ ರಾಜ್ಯಗಳ ೨೫ ವಲಯಗಳ ಮೂರು ಸಾವಿರಕ್ಕೂ ಅಧಿಕ ಮಂದಿ ಜೇಸಿ ಪ್ರತಿನಿಧಿಗಳು ಭಾಗವಹಿಸಿದ್ದ ರಾಷ್ಟ್ರೀಯ ಸಮ್ಮೆಳನದಲ್ಲಿ ಜೇಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ಅರ್ಪಿತ್ ಹಾತಿ ಅವರು ಪ್ರಶಸ್ತಿಯನ್ನು ಹಸ್ತಾಂತರಿಸಿದರು ಎಂದರು.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡಿರುವ ವಲಯ ಹದಿನೈದರಲ್ಲಿ ೨೦೧೮ನೇ ಸಾಲಿನಲ್ಲಿ ಜೇಸಿಐ ಇಂಡಿಯಾ ಫೌಂಡೇಷನ್ ಗೆ ೧೪ ಲಕ್ಷ ರೂ. ದೇಣಿಗೆ, ೧೮ ನೂತನ ಘಟಕಗಳ ಸ್ಥಾಪನೆ, ೪೦೦ಕ್ಕೂ ಅಧಿಕ ಸದಸ್ಯರ ಸೇರ್ಪಡೆ, ೩೭೫ ವಿದ್ಯಾರ್ಥಿಗಳಿಗೆ ೨ ಸಾವಿರ ರೂ. ಗಳಂತೆ ವಿದ್ಯಾರ್ಥಿ ವೇತನ ವಿತರಣೆ, ೩೦೦ಕ್ಕೂ ಅಧಿಕ ಇಂಪ್ಯಾಕ್ಟ್ ೨೦೩೦ ಕಾರ್ಯಕ್ರಮಗಳು, ೧೦೦ಕ್ಕೂ ಅಧಿಕ ಶಾಶ್ವತ ಯೋಜನೆಗಳ ಕೊಡಗೆ, ಕೇರಳ – ಕೊಡಗು ಸಂತ್ರಸ್ತರ ನಿದಿಗೆ ೩ ಲಕ್ಷ ರೂ. ಗೂ ಮಿಕ್ಕ ಹಣಕಾಸಿನ ಕೊಡುಗೆ, ಲಕ್ಷಾಂತರ ರೂ. ಮೌಲ್ಯದ ವಸ್ತುಗಳ ಹಸ್ತಾಂತರ, ೨ ಸಾವಿರಕ್ಕೂ ಅಧಿಕ ತರಬೇತಿ ಕಾರ್ಯಕ್ರಮಗಳ ಆಯೋಜನೆ, ೧೦೦೦ಕ್ಕೂ ಅಧಿಕ ಯುನಿಟ್ ರಕ್ತ ಸಂಗ್ರಹಣೆ, ೨೦೦೦ಕ್ಕೂ ಅಧಿಕ ಮಂದಿಯಿಂದ ನೇತ್ರದಾನ ವಾಗ್ದಾನ ಮೊದಲಾದ ಮಹತ್ವಪೂರ್ಣವಾದ ಕಾರ್ಯಕ್ರಮಗಳು ನಡೆದಿದ್ದು ಇದನ್ನು ಆಧರಿಸಿ, ಪ್ರಶಸ್ತಿಗಳು ಲಭಿಸಿವೆ ಎಂದರು.

ಜೇಸಿಐ ಇಂಡಿಯಾ ಫೌಂಡೇಷನ್ ನ ನಿರ್ದೇಶಕ ವೈ. ಸುಕುಮಾರ್ ಮಾತನಾಡಿ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಯುವ ಜನರನ್ನು ತರಬೇತಿಯ ಮೂಲಕ ಸಿದ್ಧ ಪಡಿಸುವ ಅಂತರಾಷ್ಟ್ರೀಯ ಸಂಸ್ಥೆಯಾಗಿರುವ ಜೇಸಿಐ ಸಂಸ್ಥೆಯು ಭಾರತದಾದ್ಯಂತ ಸುಮಾರು ೧೫೦೦ಕ್ಕೂ ಅಧಿಕ ಜೇಸಿಐ ಘಟಕಗಳ ಮೂಲಕವಾಗಿ ೫೦ ಸಾವಿರದಷ್ಟು ಸದಸ್ಯರನ್ನು ಹೊಂದಿದೆ. ವಲಯ ಹದಿನೈದರಲ್ಲಿ ೮೦ ಘಟಕಗಳಿದ್ದು, ೨೬೦೦ಕ್ಕೂ ಅಧಿಕ ಮಂದಿ ಕ್ರಿಯಾಶೀಲ ಸದಸ್ಯರು ಆಂದೋಲನದಲ್ಲಿ ತೊಡಗಿಸಿಕೊಂಡಿದ್ದಾರೆ. ೨೦೧೮ನೇ ಸಾಲಿನಲ್ಲಿ ನಡೆದಿರುವ ಕಾರ್ಯಕ್ರಮಗಳು ವಲಯ ಹದಿನೈದನ್ನು ರಾಷ್ಟ್ರ ಮಟ್ಟದಲ್ಲಿ ನಂಬರ್ ೧ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದೆ ಎಂದರು.

ಪ್ರಶಸ್ತಿಗಳ ವಿವರ : ವಲಯಾಧ್ಯಕ್ಷ ರಾಕೇಶ್ ಕುಂಜೂರು ಅವರಿಗೆ ಅತ್ಯುತ್ತಮ ವಲಯಾಧ್ಯಕ್ಷ ಪ್ರಶಸ್ತಿ, ಚಂದ್ರಶೇಖರ್ ನಾಯರ್ ಅವರಿಗೆ ರಾಷ್ಟ್ರೀಯ ನಿರ್ದೇಶಕ ಪ್ರಶಸ್ತಿ, ಪಶುಪತಿ ಶರ್ಮಾ ಅವರಿಗೆ ವಲಯ ಉಪಾಧ್ಯಕ್ಷ ಪ್ರಶಸ್ತಿ, ಕಾರ್ತಿಕೇಯ ಮಧ್ಯಸ್ಥ ಅವರಿಗೆ ವಲಯ ನಿರ್ದೇಶಕ ಪ್ರಶಸ್ತಿ, ಜೇಸಿಐ ಮಂಗಳೂರು ಲಾಲ್‌ಭಾಗ್‌ನ ಅಧ್ಯಕ್ಷ ಸೌಜನ್ಯ ಹೆಗ್ಡೆ ಅತ್ಯುತ್ತಮ ಘಟಕಾಧ್ಯಕ್ಷೆ ಪ್ರಶಸ್ತಿ, ಜೇಸಿಐ ಗಣೇಶ್ಪುರದ ಅಧ್ಯಕ್ಷೆ ಸ್ಮಿತಾ ಹೊಳ್ಳ ಅತ್ಯುತ್ತಮ ಮಹಿಳಾ ಜೇಸಿಐ ಸದಸ್ಯೆ ಪ್ರಶಸ್ತಿ, ಜೇಸಿಐ ಭಟ್ಕಳ ಸಿಟಿಯ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಸಾಹೇಬ್ ಅವರಿಗೆ ಅತ್ಯುತ್ತಮ ಸೆನೆಟರ್ ಪ್ರಶಸ್ತಿ, ಮಂಗಳೂರು ಲಾಲ್‌ಭಾಗ್‌ಗೆ ಅತ್ಯುತ್ತಮ ಜೇಸಿ ಸಪ್ತಾಹ ಪ್ರಶಸ್ತಿ ಮತ್ತು ಅತ್ಯುತ್ತಮ ಅಭಿವೃದ್ಧಿ -ಬೆಳವಣಿಗೆ ವಿಭಾಗದ ಪ್ರಶಸ್ತಿ, ಜೇಸಿಐ ಕಾಪು ಘಟಕಕ್ಕೆ ಅತ್ಯುತ್ತಮ ಸಾರ್ವಜನಿಕ ಸಂಪರ್ಕ ವಿಭಾಗದ ಪ್ರಶಸ್ತಿ, ಜೇಸಿಐ ಗಣೇಶ್‌ಪುರ ಘಟಕಕ್ಕೆ ಅತ್ಯುತ್ತಮ ಇಂಪ್ಯಾಕ್ಟ್ ೨೦೩೦ ಪ್ರಶಸ್ತಿ, ಜೇಸಿಐ ಮೂಡಬಿದ್ರಿ ಘಟಕಕ್ಕೆ ಅತ್ಯುತ್ತಮ ತರಬೇತಿ ವಿಭಾಗದ ಪ್ರಶಸ್ತಿ, ಜೇಸಿಐ ಮುಂಡ್ಕೂರು ಭಾರ್ಗವ ಘಟಕಕ್ಕೆ ದೀರ್ಘ ಕಾಲೀನ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಶಸ್ತಿ, ಜೇಸಿಐ ಮಂಗಳೂರು ಸಾಮ್ರಾಟ್‌ನ ಅಧ್ಯಕ್ಷ ರಾಘವೇಂದ್ರ ಹೊಳ್ಳ ಅವರಿಗೆ ರಾಷ್ಟಾಧ್ಯಕ್ಷರ ಮನ್ನಣೆ ಪ್ರಶಸ್ತಿ, ಜೇಸಿಐ ಪುತ್ತೂರು ಘಟಕಕ್ಕೆ ರಾಷ್ಟ್ರಾಧ್ಯಕ್ಷರ ಮನ್ನಣೆ ಪ್ರಶಸ್ತಿ ಮತ್ತು ಜೇಸಿಐ ಶೀರೂರು ರೂರಲ್ ನ ವಿಕ್ರಂ ಪ್ರಭು ಅವರಿಗೆ ರಾಷ್ಟ್ರೀಯ ಪ್ರತಿಭಾನ್ವೆಷಣೆಯ ವಿನ್ನರ್ ಪ್ರಶಸ್ತಿ ಲಭಿಸಿದೆ.

ಪತ್ರಿಕಾಗೋಷ್ಟಿಯಲ್ಲಿ ಕಾರ್ಯಕ್ರಮ ವಿಭಾಗದ ರಾಷ್ಟ್ರೀಯ ನಿರ್ದೇಶಕ ಸಂದೀಪ್ ಕುಮಾರ್, ೨೦೧೮ರ ನಿಕಟಪೂರ್ವ ವಲಯಾಧ್ಯಕ್ಷ ಸಂತೋಷ್ ಜಿ., ವಲಯ ನಿರ್ದೇಶಕಿ ಸೌಮ್ಯ ರಾಕೇಶ್, ಜೇಸಿಐ ಕಾಪುವಿನ ಅಧ್ಯಕ್ಷೆ ಶಾರದೇಶ್ವರಿ ಗುರ್ಮೆ ಉಪಸ್ಥಿತರಿದ್ದರು.

Vishwa News 24

Recent Posts

ಉಡುಪಿ: ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ : ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡನೀಯ: ಮಂಜುನಾಥ್ ಭಂಡಾರಿ- vishwanews24

ಉಡುಪಿ: ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ : ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡನೀಯ: ಮಂಜುನಾಥ್ ಭಂಡಾರಿ ಉಡುಪಿ: ಪ್ರಶ್ನೆಪತ್ರಿಕೆ…

1 hour ago

ಉಡುಪಿ: ರಿಕ್ಷಾ ಚಾಲಕ ನೇಣು ಬಿಗಿದು ಆತ್ಮಹತ್ಯೆ – vishwanews24

ಉಡುಪಿ: ರಿಕ್ಷಾ ಚಾಲಕ ನೇಣು ಬಿಗಿದು ಆತ್ಮಹತ್ಯೆ ಉಡುಪಿ: ಆದಿಉಡುಪಿಯ ಮಧ್ವನಗರದ ರಿಕ್ಷಾ ಚಾಲಕ ತನ್ನ ಮನೆಯಲ್ಲಿ ನೇಣು ಬಿಗಿದು…

2 hours ago

ಕೊಂಕಣ ರೈಲ್ವೆಯಲ್ಲಿ ಕಳ್ಳರ ಜಾಲ : ಮತ್ಸ್ಯಗಂಧ, ಮಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಸರಣಿ ಕಳ್ಳತನ ಹಾಗೂ ದರೋಡೆ ಪ್ರಕರಣ  – vishwanews24

ಕೊಂಕಣ ರೈಲ್ವೆಯಲ್ಲಿ ಕಳ್ಳರ ಜಾಲ : ಮತ್ಸ್ಯಗಂಧ, ಮಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಸರಣಿ ಕಳ್ಳತನ ಹಾಗೂ ದರೋಡೆ ಪ್ರಕರಣ  ಉಡುಪಿ: ಮಂಗಳೂರಿನಿಂದ…

2 hours ago

ಆಳ್ವಾಸ್ ಪ್ರಗತಿ – 2026 : ಆ.7 ಮತ್ತು 8ರಂದು ಬೃಹತ್ ಉದ್ಯೋಗ ಮೇಳ – vishwanews24

ಆಳ್ವಾಸ್ ಪ್ರಗತಿ - 2026 : ಆ.7 ಮತ್ತು 8ರಂದು ಬೃಹತ್ ಉದ್ಯೋಗ ಮೇಳ ಉಡುಪಿ: ದೇಶದ ಯುವಜನರ ಉದ್ಯೋಗ…

3 hours ago

ಯುವಕರ ಭವಿಷ್ಯಕ್ಕೆ ಅತಿ ಹೆಚ್ಚು ಹಾನಿ ಮಾಡಿರುವುದು ಪ್ರಧಾನಿ ಮೋದಿ : ರಾಹುಲ್‌ ಗಾಂಧಿ ಆರೋಪ – vishwanews24

ಯುವಕರ ಭವಿಷ್ಯಕ್ಕೆ ಅತಿ ಹೆಚ್ಚು ಹಾನಿ ಮಾಡಿರುವುದು ಪ್ರಧಾನಿ ಮೋದಿ : ರಾಹುಲ್‌ ಗಾಂಧಿ ಆರೋಪ ಹೊಸದಿಲ್ಲಿ: ಪ್ರಶ್ನೆಪತ್ರಿಕೆ ಸೋರಿಕೆ…

3 hours ago

ಪಡುಬಿದ್ರಿ: ಪಾನ್ ಸ್ಟಾಲ್‌ನಲ್ಲಿ ಗಾಂಜಾ ಮಾರಾಟ : ಆರೋಪಿ ಅರೆಸ್ಟ್ – vishwanews24

ಪಡುಬಿದ್ರಿ: ಪಾನ್ ಸ್ಟಾಲ್‌ನಲ್ಲಿ ಗಾಂಜಾ ಮಾರಾಟ : ಆರೋಪಿ ಅರೆಸ್ಟ್ ಪಡುಬಿದ್ರಿ: ಪಾನ್ ಸ್ಟಾಲ್ ಅಂಗಡಿಯಲ್ಲೇ ಅಕ್ರಮವಾಗಿ ಗಾಂಜಾ ಮಾರಾಟ…

3 hours ago