Featured

ಜೈಲಿನಲ್ಲಿದ್ದುಕೊಂಡು ಆದಿಲ್ ನನಗೆ ಮೆಸೇಜ್ ಮಾಡಿ ಒಂದು ಅವಕಾಶ ಕೊಡು ಅಂತ ಕೇಳುತ್ತಿದ್ದಾನೆ : ರಾಖಿ ಸಾವಂತ್ – Vishwanews24

ಜೈಲಿನಲ್ಲಿದ್ದುಕೊಂಡು ಆದಿಲ್ ನನಗೆ ಮೆಸೇಜ್ ಮಾಡಿ ಒಂದು ಅವಕಾಶ ಕೊಡು ಅಂತ ಕೇಳುತ್ತಿದ್ದಾನೆ, ನಾನು ಅವನನ್ನು ಕ್ಷಮಿಸೋದಿಲ್ಲ : ರಾಖಿ ಸಾವಂತ್

ರಾಖಿ ಸಾವಂತ್ ಅವರು  ಈಗ ದುಬೈನಲ್ಲಿ ನಟನೆ, ಡ್ಯಾನ್ಸ್ ಹೇಳಿಕೊಡುವ ‘ರಾಖಿ ಸಾವಂತ್ ಅಕಾಡೆಮಿ’ಯನ್ನು ಆರಂಭಿಸಿದ್ದಾರೆ. ಈ ಮೂಲಕ ಸರಿಗಮಪ, ಇಂಡಿಯನ್ ಐಡಲ್ ಶೋಗಳಿಗೆ ಉತ್ತಮ ಸ್ಪರ್ಧಿಯನ್ನು ಕಳಿಸ್ತಾರಂತೆ. ಈ ವಿಚಾರವಾಗಿ ಮಾಧ್ಯಮದ ಜೊತೆ ಮಾತನಾಡುತ್ತ ರಾಖಿ ಸಾವಂತ್ ಅವರು ಆದಿಲ್ ಬಗ್ಗೆಯೂ ಮಾತನಾಡಿದ್ದಾರೆ.

“ನಾನು ತುಂಬ ಸ್ಟ್ರಾಂಗ್. ನನ್ನನ್ನು ನಾನು ಮುಗಿಸಿಕೊಂಡಿದ್ದೆ, ಆದರೆ ಎಲ್ಲ ಅಭಿಮಾನಿಗಳಿಂದ ಗಟ್ಟಿಯಾಗಿದ್ದೇನೆ. ಮೈಸೂರಿನ ಜೈಲಿನಲ್ಲಿದ್ದುಕೊಂಡು ಆದಿಲ್ ನನಗೆ ಮೆಸೇಜ್ ಮಾಡಿ ಒಂದು ಅವಕಾಶ ಕೊಡು ಅಂತ ಕೇಳುತ್ತಿದ್ದಾನೆ. ನಾನು ಅವನಿಗೆ ಕಾಲಿಗೆ ಬಿದ್ದು ಮನೆಗೆ ಬಾ, ಬೇರೆದೆಲ್ಲ ಬಿಡು ಅಂತ ಹೇಳಿದ್ದರೂ ಕೇಳಿಲ್ಲ. ಆದಿಲ್ ಖುರಾನ್‌ನ ಮೇಲೆ ಆಣೆ ಮಾಡಿ ಸರಿಯಾಗಿ ಇರ್ತೀನಿ ಅಂತ ಹೇಳಬೇಕು , ಕೋರ್ಟ್‌ನಲ್ಲಿ ನಾನು ರಾಖಿಯನ್ನು ಚೆನ್ನಾಗಿ ನೋಡಿಕೊಳ್ತೀನಿ, ಮದುವೆಯನ್ನು ನಿಭಾಯಿಸಿಕೊಂಡು ಹೋಗುವೆ ಅಂತ ಬರೆದುಕೊಡಬೇಕು, ಆದರೆ ಅವನು ನನ್ನ ತಾಯಿಯನ್ನು ವಾಪಾಸ್ ತರುತ್ತಾನಾ? ಸಾಧ್ಯವೇ ಇಲ್ಲ. ಹಾಗಾಗಿ ನಾನು ಆದಿಲ್‌ನನ್ನು ಕ್ಷಮಿಸೋದಿಲ್ಲ” ಎಂದು ರಾಖಿ ಸಾವಂತ್ ಹೇಳಿದ್ದಾರೆ.

“ಆದಿಲ್ ಮತ್ತೆ ನನ್ನ ಜೀವನದಲ್ಲಿ ಬರೋಕೆ ಇಷ್ಟಪಡ್ತಿದ್ದಾನೆ. ಅವನು ವಾಪಾಸ್ ಬರೋದು ನನ್ನನ್ನು ಕೊಲ್ಲೋದಿಕ್ಕಾ? ನನ್ನ ಜೀವನ ಹಾಳು ಮಾಡಿದ ಹಾಗೆ ಅವನು ಇನ್ನೊಂದು ಹುಡುಗಿ ಜೀವನ ಹಾಳು ಮಾಡಬಾರದು ಅಂತ ನಾನು ಆದಿಲ್‌ಗೆ ವಿಚ್ಛೇದನ ಕೊಡೋದಿಲ್ಲ. ಜೀವನದಲ್ಲಿ ನಾನು ಇನ್ಮುಂದೆ ಮದುವೆ ಆಗೋದಿಲ್ಲ, ಮಕ್ಕಳ ಬಗ್ಗೆಯೂ ಯೋಚನೆ ಮಾಡೋದಿಲ್ಲ. ನನ್ನ ಅಕಾಡೆಮಿಯ ಮಕ್ಕಳು ನನ್ನ ಮಕ್ಕಳು” ಎಂದು ರಾಖಿ ಸಾವಂತ್ ಹೇಳಿದ್ದಾರೆ.

“ಬಾಲಿವುಡ್ ನನ್ನ ಕರ್ಮಭೂಮಿ, ಮುಂಬೈ ನನ್ನ ಜನ್ಮಭೂಮಿ. ಅಂತೆಯೇ ದುಬೈನಲ್ಲಿಯೂ ನಾನು ಏನಾದರೊಂದು ಮಾಡಬೇಕು. ಬಾಲಿವುಡ್, ಹಾಲಿವುಡ್ ರೀತಿ ದುಬೈನಲ್ಲಿ ದಾಲಿವುಡ್‌ ಮಾಡಬೇಕು. ಭಾರತದಲ್ಲಿರುವ ಪತ್ರಕರ್ತರು, ಪಾಪರಾಜಿಗಳ ರೀತಿ ದುಬೈನಲ್ಲಿ ಕೂಡ ಪತ್ರಕರ್ತರು, ಪಾಪರಾಜಿ ಇರಬೇಕು, ಅದಕ್ಕೆ ಏನು ಬೇಕೋ ಅದನ್ನು ನಾನು ನೀಡುತ್ತೇನೆ” ಎಂದು ರಾಖಿ ಸಾವಂತ್ ಹೇಳಿದ್ದಾರೆ.

Vishwa News 24

Recent Posts

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ – vishwanews24

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ ಸುಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು…

7 hours ago

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆಯನ್ನು ತಿರುಚಲಾಗಿದೆ : ಸಿಎಂ  – vishwanews24

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆ ತಿರುಚಲಾಗಿದೆ : ಸಿಎಂ  ಬೆಂಗಳೂರು: ನನಗೆ ಮದ…

7 hours ago

ಎಚ್ಚರ ತಪ್ಪಿದರೆ ಎಂಆರ್‌ಪಿಎಲ್ ಯಾವತ್ತಿಗೂ ಜೀವಂತ ಜ್ವಾಲಾಮುಖಿ: ಸತ್ಯಜಿತ್ ಸುರತ್ಕಲ್ – vishwanews24

ಎಂಆರ್‌ಪಿಎಲ್‌ ಜೀವಂತ ಜ್ವಾಲಾಮುಖಿಯಾಗದಂತೆ ಎಚ್ಚರ ವಹಿಸಿ: ಸತ್ಯಜಿತ್ ಸುರತ್ಕಲ್ ಮಂಗಳೂರು: ಎಂಆರ್‌ಪಿಎಲ್‌ನಂತಹ ಸಂಸ್ಥೆ ಕರಾವಳಿಯಲ್ಲಿರುವುದು ಹೆಮ್ಮೆಯ ವಿಚಾರವಾದರೂ, ಆಡಳಿತ ವರ್ಗ…

8 hours ago

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ – vishwanews24

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ…

9 hours ago

ಕಾರ್ಕಳ: ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ – vishwanews24

ಕಾರ್ಕಳ: ಉದ್ಯಮಿ ಮಂಜುನಾಥ್ ಪೈ ನೇಣು ಬಿಗಿದು ಆತ್ಮಹತ್ಯೆ ಕಾರ್ಕಳ: ಜೋಡು ರಸ್ತೆಯ ಅಪಾರ್ಟ್‌ಮೆಂಟ್ ಕಟ್ಟಡದ ಕೆಳಭಾಗದಲ್ಲಿ ಉದ್ಯಮಿ ಮಂಜುನಾಥ್…

9 hours ago

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ – vishwanews24

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ ಬೆಂಗಳೂರು:…

9 hours ago