ಅವರು ನಿನ್ನೆ ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕೆಲವರು ಪಾಕಿಸ್ತಾನ ಪ್ರಧಾನಿ ಉತ್ತಮ ಆಡಳಿತಗಾರ ಎಂದು ಹೇಳುತ್ತಾರೆ. ಅವರು ಅಷ್ಟು ಪ್ರಾಮಾಣಿಕ, ಉದಾರ ಮನಸ್ಸಿನ ವ್ಯಕ್ತಿಯಾಗಿದ್ದರೆ ಜೈಶ್ ಎ ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ನನ್ನು ಭಾರತಕ್ಕೆ ಹಸ್ತಾಂತರಿಸಲಿ. ಆಗ ಅವರ ಪ್ರಾಮಾಣಿಕತೆಯನ್ನು ಒಪ್ಪುತ್ತೇವೆ ಎಂದರು.
ಉಗ್ರವಾದಕ್ಕೆ ಪ್ರೇರಣೆ ನೀಡುತ್ತಲೇ ಮಾತುಕತೆಗೆ ಆಹ್ವಾನಿಸುತ್ತೀರಿ. ಉಗ್ರವಾದ ಹಾಗೂ ಮಾತುಕತೆ ಒಮ್ಮೆಗೇ ಸಾಧ್ಯವಿಲ್ಲ ಎಂದು ಪಾಕ್ ಸರ್ಕಾರವನ್ನು ಕುಟುಕಿದ ಅವರು, ಭಯೋತ್ಪಾದನೆ ನಿರ್ನಾಮಗೊಳಿಸಲು ಪಾಕ್ ಸರ್ಕಾರದ ಜೊತೆಗೆ ಭಾರತ ಕೈಜೋಡಿಸುವುದಾಗಿ ಭರವಸೆ ನೀಡಿದರು.ಶಾಂತಿ ಮಾತುಕತೆ ಒಟ್ಟೊಟ್ಟಿಗೆ ಸಾಗುವುದಿಲ್ಲ ಎಂದು ಹೇಳಿದರು.
ನೀವು ಜೆಇಎಂ ಸಂಘಟನೆಯನ್ನು ನಿಮ್ಮ ಮಣ್ಣಿನಲ್ಲಿ ಸಾಕಿ ಬೆಳೆಸಿ ಪೋಷಿಸುತ್ತಿದ್ದೀರಿ. ಭಾರತ ಅದಕ್ಕೆ ಪ್ರತಿಯಾಗಿ ದಾಳಿ ಮಾಡಿದಾಗ ಭಯೋತ್ಪಾದಕರ ಪರವಾಗಿ ನೀವು ದಾಳಿ ಮಾಡುತ್ತೀರಿ ಎಂದು ಪಾಕಿಸ್ತಾನ ಸರ್ಕಾರದ ಮೇಲೆ ಸುಷ್ಮಾ ಸ್ವರಾಜ್ ಹರಿಹಾಯ್ದರು. ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧವನ್ನು ನಾಶಗೊಳಿಸಲು ಹೊರಟಿರುವ ಐಎಸ್ಐ ಮತ್ತು ಅದರ ಸೇನೆಯನ್ನು ನಿಯಂತ್ರಿಸಬೇಕಾದ ಅಗತ್ಯವಿದೆ ಎಂದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…