Featured

ಜೈ ಶ್ರೀರಾಮ್ ಎಂದು 1000 ಬಾರಿ ಹೇಳುತ್ತೇನೆ , ಅದರಿಂದ ಯಾವುದೇ ನಷ್ಟವಿಲ್ಲ : ಮೊಹಮ್ಮದ್ ಶಮಿ – Vishwanews24

ಜೈ ಶ್ರೀರಾಮ್ ಎಂದು 1000 ಬಾರಿ ಹೇಳುತ್ತೇನೆ , ಅದರಿಂದ ಯಾವುದೇ ನಷ್ಟವಿಲ್ಲ : ಮೊಹಮ್ಮದ್ ಶಮಿ

ಹೊಸದಿಲ್ಲಿ: ಜನರು ಜೈ ಶ್ರೀರಾಮ್ ಎಂಬ ಘೋಷಣೆ ಕೂಗುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಟೀಮ್ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ ಹೇಳಿದ್ದಾರೆ. ಜೈ ಶ್ರೀರಾಮ್ ಅಥವಾ ಅಲ್ಲಾಹು ಅಕ್ಬರ್ ಎಂದು ಸಾವಿರ ಬಾರಿ ಹೇಳುವುದರಿಂದ ಯಾವುದೇ ಹಾನಿಯಾಗುವುದಿಲ್ಲ ಎಂದು ಹೇಳುವ ಮೂಲಕ ಶಮಿ ರಾಷ್ಟ್ರೀಯತೆ ಮೆರೆದಿದ್ದಾರೆ.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ್ದರು. ಈ ಸಂದರ್ಭದಲ್ಲಿ ದೇಶದೆಲ್ಲೆಡೆ ಭಗವಾನ್ ಶ್ರೀ ರಾಮನ ಘೋಷಣೆಗಳು ಮೊಳಗಿದ್ದವು. ಈ ಕುರಿತು ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಪ್ರತಿಕ್ರಿಯಿಸಿದ್ದಾರೆ.

ಸಂವಾದ ಕಾರ್ಯಕ್ರಮದಲ್ಲಿ ದೇಶದಲ್ಲಿ ಪ್ರಚಲಿತದಲ್ಲಿರುವ ಧಾರ್ಮಿಕತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಟೀಮ್ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ ಉತ್ತರಿಸಿದ್ದಾರೆ.

“ಪ್ರತಿ ಧರ್ಮದಲ್ಲಿ ನೀವು ವಿರುದ್ಧ ಧರ್ಮದ ವ್ಯಕ್ತಿಯನ್ನು ಇಷ್ಟಪಡದ 5 ರಿಂದ 10 ಜನರನ್ನು ನೋಡುತ್ತೀರಿ. ಆದರ ವಿರುದ್ಧ ನನಗೆ ಯಾವುದೇ ಆಕ್ಷೇಪಣೆ ಇಲ್ಲ. ವಿಷಯ ಹೇಗೆ ಬರುತ್ತದೋ ಅದಕ್ಕೆ ನಾನು ನಮಿಸುತ್ತೇನೆ. ರಾಮಮಂದಿರ ನಿರ್ಮಾಣದ ಸಮಯದಲ್ಲಿ ಶ್ರೀ ರಾಮನ ಹೆಸರನ್ನು ಜಪಿಸಿದರೆ ಅದರಿಂದ ಆಗುವ ಹಾನಿ ಏನು? 1000 ಬಾರಿ ಹೇಳುತ್ತೇನೆ. ನಾನು ಕೂಡ ಅಲ್ಲಾಹು ಅಕ್ಬರ್ ಎಂದು ಹೇಳಲು ಬಯಸಿದರೆ 1000 ಬಾರಿ ಹೇಳುತ್ತೇನೆ. ಅದರಿಂದ ಏನು ವ್ಯತ್ಯಾಸವಾಗುತ್ತದೆ?” ಎಂದು ಅನುಭವಿ ವೇಗಿ ಪ್ರಶ್ನಿಸಿದ್ದಾರೆ.

Vishwa News 24

Recent Posts

ಪಾಟ್ನಾ: ಪ್ಯಾಸೆಂಜರ್​​​​ ರೈಲಿನಲ್ಲಿ ಆಕಸ್ಮಿಕ ಬೆಂಕಿ ಅವಘಡ : ತಪ್ಪಿದ ಭಾರೀ ಅನಾಹುತ – vishwanews24

ಪ್ಯಾಸೆಂಜರ್​​​​ ರೈಲಿನಲ್ಲಿ ಆಕಸ್ಮಿಕ ಬೆಂಕಿ ಅವಘಡ :ತಪ್ಪಿದ ಭಾರೀ ಅನಾಹುತ ಪಾಟ್ನಾ: ಬಿಹಾರದ ಸಸಾರಾಮ್ ರೈಲು ನಿಲ್ದಾಣದಲ್ಲಿ ಪಾಟ್ನಾಗೆ ತೆರಳಲು…

2 hours ago

ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿಡಿ ಸತೀಶನ್ ಪ್ರಮಾಣವಚನ ಸ್ವೀಕಾರ – vishwanews24

ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿಡಿ ಸತೀಶನ್ ಪ್ರಮಾಣವಚನ ಸ್ವೀಕಾರ ತಿರುವನಂತಪುರಂ: ಕೇರಳಂ ಸರಕಾರದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್ ಪ್ರಮಾಣವಚನ ಸ್ವೀಕರಿಸಿದರು.…

2 hours ago

ಕಾಂಗ್ರೆಸ್‌ ಸರ್ಕಾರದ ಸಾಧನಾ ಸಮಾವೇಶ : ನಾಳೆ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಪರಮೇಶ್ವರ್‌ – vishwanews24

ಕಾಂಗ್ರೆಸ್‌ ಸರ್ಕಾರದ ಸಾಧನಾ ಸಮಾವೇಶ : ನಾಳೆ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಪರಮೇಶ್ವರ್‌ ಬೆಂಗಳೂರು: ತುಮಕೂರಿನಲ್ಲಿ ನಾಳೆ…

2 hours ago

ಪಡುಬಿದ್ರಿ : ಚಿನ್ನಾಭರಣವಿದ್ದ ಬ್ಯಾಗ್ ವಾರೀಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ – vishwanews24

ಪಡುಬಿದ್ರಿ : ಚಿನ್ನಾಭರಣವಿದ್ದ ಬ್ಯಾಗ್ ವಾರೀಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ ಪಡುಬಿದ್ರಿ: ಬಸ್ ನಿಲ್ದಾಣದಲ್ಲಿ ದೊರೆತ ಸಾವಿರಾರು…

2 hours ago

ಉಡುಪಿ: ಬಿಜೆಪಿ ಯುವ ಮೋರ್ಚಾದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗೋಬ್ಯಾಕ್ ಪ್ರತಿಭಟನೆ – vishwanews24

ಉಡುಪಿ: ಬಿಜೆಪಿ ಯುವ ಮೋರ್ಚಾದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗೋಬ್ಯಾಕ್ ಪ್ರತಿಭಟನೆ ಉಡುಪಿ: ಉಡುಪಿ ಜಿಲ್ಲೆಯನ್ನು ರಾಜ್ಯ ಕಾಂಗ್ರೆಸ್…

2 days ago

ಮಂಗಳೂರು : ಹಿಜಾಬ್ ನಿಷೇಧ ಹಿಂಪಡೆಯುವ ನಿರ್ಧಾರವನ್ನು ಸ್ವಾಗತಿಸಿದ ವಿಮೆನ್ ಇಂಡಿಯಾ ಮೂವ್ಮೆಂಟ್ – vishwanews24

ಹಿಜಾಬ್ ನಿಷೇಧ ಹಿಂಪಡೆಯುವ ನಿರ್ಧಾರವನ್ನು ಸ್ವಾಗತಿಸಿದ ವಿಮೆನ್ ಇಂಡಿಯಾ ಮೂವ್ಮೆಂಟ್.. ಸುಪ್ರೀಂ ಕೋರ್ಟ್‌ನಲ್ಲಿ ಅಧಿಕೃತ ಕ್ರಮಗಳನ್ನು ಪೂರ್ಣಗೊಳಿಸಲು ಸರ್ಕಾರಕ್ಕೆ ಮನವಿ…

2 days ago