Featured

ಜ್ಯೋತಿಷಿ-ಪುರೋಹಿತರು ಈ ದೇಶದ ಉಗ್ರವಾದಿಗಳು ವಿವಾದಾತ್ಮಕ ಹೇಳಿಕೆ ನೀಡಿದ ಜ್ಞಾನಪ್ರಕಾಶ್ ಸ್ವಾಮೀಜಿ

ಬೆಂಗಳೂರು, : ಧಾರ್ಮಿಕ ಭಾವನೆಗಳನ್ನು ಬಂಡವಾಳ ಮಾಡಿಕೊಂಡು ಭಯದ ವಾತಾವರಣ ನಿರ್ಮಿಸಿರುವ ಜ್ಯೋತಿಷಿಗಳು, ಪುರೋಹಿತರೇ ಈ ದೇಶದ ಉಗ್ರವಾದಿಗಳು ಎಂದು ಮೈಸೂರಿನ ಉರಿಲಿಂಗ ಪೆದ್ದಮಠದ ಪೀಠಾಧ್ಯಕ್ಷ ಜ್ಞಾನಪ್ರಕಾಶ್ ಸ್ವಾಮೀಜಿ ಟೀಕಿಸಿದ್ದಾರೆ.

ಸೋಮವಾರ ನಗರದ ಕಬ್ಬನ್ ಪಾರ್ಕ್‌ನ ಎನ್‌ಜಿಒ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ(ಸಮತಾವಾದ) ಏರ್ಪಡಿಸಿದ್ದ, ದ್ರಾವಿಡ ಸಂಸ್ಕೃತಿ ಚಿಂತಕ ಪೆರಿಯಾರ್ ರಾಮಸ್ವಾಮಿ ಅವರ 139ನೆ ಜನ್ಮದಿನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಧರ್ಮದ ನಂಬಿಕೆಯನ್ನು ಪ್ರಮುಖವಾಗಿಸಿಕೊಂಡು, ದಿನನಿತ್ಯ ಮುಗ್ಧ ಜನರನ್ನು ಶೋಷಣೆ ಮಾಡಿ ಭಯದ ವಾತಾವರಣ ನಿರ್ಮಿಸುತ್ತಿರುವ ಜ್ಯೋತಿಷಿಗಳು, ಪುರೋಹಿತರು ನಿಜವಾದ ಭಯೋತ್ಪಾದಕರು. ಅಷ್ಟೇ ಮಾತ್ರವಲ್ಲದೆ, ಭಾರತ್ ಮಾತಾ ಕೀ ಜೈ ಎಂದು ಘೋಷಣೆಯನ್ನಿಟ್ಟುಕೊಂಡು ದೇಶವನ್ನು ಛಿದ್ರಗೊಳಿಸಲಾಗುತ್ತಿದೆ ಎಂದರು.

ಮೋಸದ ಮಂತ್ರಗಳು: ಮದುವೆ ಸಂದರ್ಭದಲ್ಲಿ ತಾಳಿಯನ್ನು ಕಷ್ಟಪಟ್ಟು ತಯಾರಿಸಿಕೊಳ್ಳುವುದು ನಾವು. ಆದರೆ, ಪುರೋಹಿತರು, ‘ಮಾಗಲ್ಯಂ ತಂತುನಾನೇನ’ ಎನ್ನುತ್ತಾರೆ. ಇದರ ಅರ್ಥ, ತಾಳಿಯನ್ನು ವಧುವಿಗೆ ಪುರೋಹಿತ ಕಟ್ಟುತ್ತಾನೆ ಎಂದು ಹೇಳುವುದು. ಅದೇ ರೀತಿ, ತಾಳಿ ಕಟ್ಟಿದ ಬಳಿಕ, ಸಂಸ್ಕೃತದ ಮಂತ್ರವೊಂದು, ಪತ್ನಿಯನ್ನು ಇಂದ್ರ, ಅಗ್ನಿ, ವರುಣ, ಕುಬೇರನ ಬಳಿ ಮಲಗಿಸಿದ ನಂತರ ನೀವು ಮಲಗಿ ಎಂದು ಹೇಳುತ್ತದೆ. ಇದೆಲ್ಲವನ್ನೂ, ಮನುಶಾಸ್ತ್ರದ ವಿವಾಹ ಸಂಹಿತೆಯಿಂದ ಪಡೆಯಲಾಗಿದ್ದು, ಎಲ್ಲದರಲ್ಲೂ ಮೋಸ ಅಡಗಿದೆ ಎಂದು ಅವರು ಹೇಳಿದರು.

ವಿವೇಕಾನಂದರು, ದೇವರನ್ನು ಹುಡುಕಿಕೊಂಡು ದೇವಸ್ಥಾನಕ್ಕೆ ಹೋಗಬೇಡಿ. ಮನುಷ್ಯನ, ಬಡವನ ಹೃದಯದಲ್ಲಿ ದೇವರಿದ್ದಾನೆ ಎಂದಿದ್ದಾರೆ. ಆದರೆ, ಧರ್ಮದ ಹೆಸರಿನಲ್ಲಿ ರಾಜಕಾರಣ, ಜಾತಿ ಹೆಸರಿನಲ್ಲಿ ಶೋಷಣೆ ನಡೆಸಲಾಗುತ್ತಿದೆ. ಸಮಾಜ ಸುಧಾರಕರು ಹೇಳಿದ ತತ್ವಕ್ಕೆ ವಿರುದ್ಧವಾದ ವಾತಾವರಣ ದೇಶದಲ್ಲಿಂದು ನಿರ್ಮಾಣವಾಗಿದೆ ಎಂದು ತಿಳಿಸಿದರು.

ದೇವರ ಮೇಲಿನ ನಂಬಿಕೆಯನ್ನು ಬಂಡವಾಳ ಮಾಡಿಕೊಂಡು ದುರುಪಯೋಗಪಡಿಸಿಕೊಳ್ಳುತ್ತಿದ್ದವರನ್ನು ಪೆರಿಯಾರ್ ಪ್ರಶ್ನಿಸುತ್ತಿದ್ದರು. ಅಷ್ಟೇ ಅಲ್ಲದೆ, ವೈಜ್ಞಾನಿಕತೆಯ ಆಧಾರದ ಮೇಲೆ ವಿಚಾರ ಧಾರೆಯನ್ನು ಪ್ರತಿಪಾದಿಸಿದರು ಎಂದ ಅವರು, ಕುವೆಂಪು ಅವರ ವಾಕ್ಯದಂತೆ ನಾವು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಬೇಕು ಎಂದರು ಹೇಳಿದರು.

ದೇವರು ಬಂದು ಶೋಷಿತರನ್ನು ರಕ್ಷಿಸುತ್ತಾನೆ ಎಂದು ತಿಳಿದು ದೇವಸ್ಥಾನವನ್ನು ನಿರ್ಮಿಸಿದರೆ ಪ್ರಯೋಜನವಿಲ್ಲ. ಡಾ.ಅಂಬೇಡ್ಕರ್, ಪೆರಿಯಾರ್, ಫುಲೆ, ಬಸವಣ್ಣ ಇನ್ನಿತರರು ಶೋಷಿತರ ವಿಮೋಚನೆಗೆ ಶ್ರಮಿಸಿದವರು. ಅವರು ಶಿಕ್ಷಣ, ಮೀಸಲಾತಿ ಹಾಗೂ ಸ್ವಾಭಿಮಾನವನ್ನು ತಂದುಕೊಟ್ಟವರು. ಹೀಗಾಗಿ, ಅವರ ಅನುಯಾಯಿಗಳು ಆಗಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಹೈಕೋರ್ಟ್‌ನ ಹಿರಿಯ ವಕೀಲ ಸಿ.ಜಗದೀಶ್, ಪೆರಿಯಾರ್ ಚಿಂತಕಿ ಕಲೈ ಸೆಲ್ವಿ, ದಸಂಸ(ಸಮತಾವಾದ) ಎಚ್.ಮಾರಪ್ಪ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ದೇವರಿದ್ದರೂ ಸಿರಿವಂತಿಕೆಯಿಲ್ಲ

ವರಮಹಾಲಕ್ಷ್ಮೀ ಹಬ್ಬವನ್ನು ಭಾರತದಲ್ಲಿ ಮಾತ್ರ ಆಚರಿಸುತ್ತಾರೆ. ಬೇರೆ ದೇಶಗಳಲ್ಲಿ ಆಚರಿಸುವುದಿಲ್ಲ. ಆದರೂ, ಅಲ್ಲಿ ಸಿರಿವಂತಿಕೆ ಹೆಚ್ಚಿದೆ. ನಮ್ಮಲ್ಲಿ ನಾಯಿಯನ್ನು ನಾರಾಯಣ, ದೇವರು ಎನ್ನುತ್ತಾರೆ. ಈ ದೇವರು ಕಚ್ಚಿದಾಗ ಚುಚ್ಚುಮದ್ದು ಏಕೆ ಹಾಕಿಸಿಕೊಳ್ಳುತ್ತಾರೆ. ದೇವರು ಕಚ್ಚಿದರೆ ಒಳ್ಳೆಯದಲ್ಲವೇ?

-ಜ್ಞಾನಪ್ರಕಾಶ್ ಸ್ವಾಮೀಜಿ, ಪೀಠಾಧ್ಯಕ್ಷ, ಉರಿಲಿಂಗ ಪೆದ್ದಮಠದ

 

ಜಾಹಿರಾತು

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago