Featured

ಟಿಕೆಟ್‌ಗೆ ಯಡಿಯೂರಪ್ಪ,ಮತಯಾಚಿಸುವಾಗ ಮೋದಿ ಎನ್ನುತ್ತಾರೆ : ಶೋಭಾ ಕರಂದ್ಲಾಜೆಗೆ ಪ್ರಮೋದ್‌ ಮಧ್ವರಾಜ್ – Vishwanews24

ಮಣಿಪಾಲ :  ಚಿಕ್ಕಮಗಳೂರಿನಲ್ಲಿ ನಡೆದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಶೋಭಾ ಕರಂದ್ಲಾಜೆಯವರು ಟಿಕೆಟಿಗಾಗಿ ಯಡಿಯೂರಪ್ಪ ಎನ್ನುತ್ತಾರೆ. ಮತಯಾಚಿಸುವಾಗ ಮೋದಿ ಎನ್ನುತ್ತಾರೆ. ಕೆಲಸ ಮಾಡುವ ಸಂಸದರು ಬೇಕೇ ಅಥವಾ ಕೆಲಸ ಮಾಡದವರು ಬೇಕೇ ಎಂಬುದನ್ನು ನಿರ್ಧರಿಸುವ ಕಾಲವಿದು. ಕ್ಷೇತ್ರದ ಜನತೆಗೆ ಅಭಿವೃದ್ಧಿ ಪಡಿಸುವ ಓರ್ವ ಸಂಸದ ಬೇಕು, ಕೆಲಸ ಮಾಡುವ ಪ್ರತಿನಿಧಿ ಬೇಕು ಎಂದು ಹೇಳಿದರು.

ಮರಳಿನ ಸಮಸ್ಯೆಗೆ ನಾನು ಕಾರಣ ಎಂಬುದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ನಾನು ಮಂತ್ರಿಯಾಗಿದ್ದ ಸಂದರ್ಭ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ಮಾಡಬಾರದು ಎಂಬ ತಡೆಯಾಜ್ಞೆ ಇತ್ತು. ಆಗ ನಾನು ಕಾನೂನು ಸಚಿವ ಜಯಚಂದ್ರ ಹಾಗೂ ಸರಕಾರದ ವಕೀಲರಾದ ಅಶೋಕ್‌ ದೇವರಾಜ್‌ ಅವರಲ್ಲಿ ಚರ್ಚಿಸಿ ಶೋಭಾ ಕರಂದ್ಲಾಜೆಯವರಲ್ಲಿ ಕೇಂದ್ರ ಸರಕಾರದಿಂದ ಅಫಿದವಿತ್‌ ಸಲ್ಲಿಸುವಂತೆ ಕೇಳಿಕೊಂಡಿದ್ದೆ. ಆದರೆ ಅವರ ನಿರ್ಲಕ್ಷ್ಯದಿಂದಾಗಿ ಅಧಿಕಾರಿಗಳೇ ಹೋಗಿ ಅಫಿದವಿತ್‌ ಸಲ್ಲಿಸಿದರು. ತದನಂತರ ತಡೆಯಾಜ್ಞೆ ತೆರವುಗೊಳಿಸಿ ಹೊಸ ಪರವಾನಿಗೆ ಕೊಡುವಂತೆ ಆದೇಶಿಸಿ ಉಡುಪಿ ಜಿಲ್ಲೆಯಲ್ಲಿ 9 ಲಕ್ಷ ಟನ್‌ ಮರಳನ್ನು ತೆಗೆಯಲು ನಾನು ಅವಕಾಶ ಮಾಡಿಕೊಟ್ಟೆ. ಅದರಲ್ಲಿ 6 ಲಕ್ಷ ಟನ್‌ ಮರಳು ತೆಗೆಯಲು ಸಾಧ್ಯವಾಯಿತು ಎಂದು ತಿಳಿಸಿದರು.

ನನ್ನ ಕಾಲದಲ್ಲಿ 28 ಬ್ಲಾಕಿನಲ್ಲಿ 165 ಜನರಿಗೆ ಮರಳು ತೆಗೆಯಲು ಪರವಾನಿಗೆ ಕೊಡುವ ಕೆಲಸವೂ ಆಯಿತು. ಜಿಲ್ಲೆಯ ಮರಳು ಜಿಲ್ಲೆಗೆ ಮಾತ್ರ ಎಂಬ ಕಾನೂನು ಮಾಡಿದೆ ಎಂದು ಹೇಳಿದರು.

ಕೇಂದ್ರ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇದಿತ ಎಂದಿದೆ. ಈ ತಿದ್ದುಪಡಿಯನ್ನು ಶೋಭಾ ಕರಂದ್ಲಾಜೆ ಮಾಡಿಸಬೇಕಿತ್ತು. ಅದರೆ ಅವರು ಮಾಡಲಿಲ್ಲ. ಹಾಗಾಗಿ ಇದು ನನ್ನ ವೈಫ‌ಲ್ಯ ಅಲ್ಲ, ಬದಲಾಗಿ ಶೋಭಾರ ವೈಫ‌ಲ್ಯ ಎಂದು ಆರೋಪಿಸಿದರು.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago