ಮಣಿಪಾಲ : ಚಿಕ್ಕಮಗಳೂರಿನಲ್ಲಿ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಶೋಭಾ ಕರಂದ್ಲಾಜೆಯವರು ಟಿಕೆಟಿಗಾಗಿ ಯಡಿಯೂರಪ್ಪ ಎನ್ನುತ್ತಾರೆ. ಮತಯಾಚಿಸುವಾಗ ಮೋದಿ ಎನ್ನುತ್ತಾರೆ. ಕೆಲಸ ಮಾಡುವ ಸಂಸದರು ಬೇಕೇ ಅಥವಾ ಕೆಲಸ ಮಾಡದವರು ಬೇಕೇ ಎಂಬುದನ್ನು ನಿರ್ಧರಿಸುವ ಕಾಲವಿದು. ಕ್ಷೇತ್ರದ ಜನತೆಗೆ ಅಭಿವೃದ್ಧಿ ಪಡಿಸುವ ಓರ್ವ ಸಂಸದ ಬೇಕು, ಕೆಲಸ ಮಾಡುವ ಪ್ರತಿನಿಧಿ ಬೇಕು ಎಂದು ಹೇಳಿದರು.
ಮರಳಿನ ಸಮಸ್ಯೆಗೆ ನಾನು ಕಾರಣ ಎಂಬುದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ನಾನು ಮಂತ್ರಿಯಾಗಿದ್ದ ಸಂದರ್ಭ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ಮಾಡಬಾರದು ಎಂಬ ತಡೆಯಾಜ್ಞೆ ಇತ್ತು. ಆಗ ನಾನು ಕಾನೂನು ಸಚಿವ ಜಯಚಂದ್ರ ಹಾಗೂ ಸರಕಾರದ ವಕೀಲರಾದ ಅಶೋಕ್ ದೇವರಾಜ್ ಅವರಲ್ಲಿ ಚರ್ಚಿಸಿ ಶೋಭಾ ಕರಂದ್ಲಾಜೆಯವರಲ್ಲಿ ಕೇಂದ್ರ ಸರಕಾರದಿಂದ ಅಫಿದವಿತ್ ಸಲ್ಲಿಸುವಂತೆ ಕೇಳಿಕೊಂಡಿದ್ದೆ. ಆದರೆ ಅವರ ನಿರ್ಲಕ್ಷ್ಯದಿಂದಾಗಿ ಅಧಿಕಾರಿಗಳೇ ಹೋಗಿ ಅಫಿದವಿತ್ ಸಲ್ಲಿಸಿದರು. ತದನಂತರ ತಡೆಯಾಜ್ಞೆ ತೆರವುಗೊಳಿಸಿ ಹೊಸ ಪರವಾನಿಗೆ ಕೊಡುವಂತೆ ಆದೇಶಿಸಿ ಉಡುಪಿ ಜಿಲ್ಲೆಯಲ್ಲಿ 9 ಲಕ್ಷ ಟನ್ ಮರಳನ್ನು ತೆಗೆಯಲು ನಾನು ಅವಕಾಶ ಮಾಡಿಕೊಟ್ಟೆ. ಅದರಲ್ಲಿ 6 ಲಕ್ಷ ಟನ್ ಮರಳು ತೆಗೆಯಲು ಸಾಧ್ಯವಾಯಿತು ಎಂದು ತಿಳಿಸಿದರು.
ನನ್ನ ಕಾಲದಲ್ಲಿ 28 ಬ್ಲಾಕಿನಲ್ಲಿ 165 ಜನರಿಗೆ ಮರಳು ತೆಗೆಯಲು ಪರವಾನಿಗೆ ಕೊಡುವ ಕೆಲಸವೂ ಆಯಿತು. ಜಿಲ್ಲೆಯ ಮರಳು ಜಿಲ್ಲೆಗೆ ಮಾತ್ರ ಎಂಬ ಕಾನೂನು ಮಾಡಿದೆ ಎಂದು ಹೇಳಿದರು.
ಕೇಂದ್ರ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇದಿತ ಎಂದಿದೆ. ಈ ತಿದ್ದುಪಡಿಯನ್ನು ಶೋಭಾ ಕರಂದ್ಲಾಜೆ ಮಾಡಿಸಬೇಕಿತ್ತು. ಅದರೆ ಅವರು ಮಾಡಲಿಲ್ಲ. ಹಾಗಾಗಿ ಇದು ನನ್ನ ವೈಫಲ್ಯ ಅಲ್ಲ, ಬದಲಾಗಿ ಶೋಭಾರ ವೈಫಲ್ಯ ಎಂದು ಆರೋಪಿಸಿದರು.
ಬೆಳ್ತಂಗಡಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ; ಪ್ರಯಾಣಿಕರು ಅಪಾಯದಿಂದ ಪಾರು ಬೆಳ್ತಂಗಡಿ: ತಾಲೂಕಿನ ಸುಲ್ಕೇರಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೀಕರ…
ನನ್ನ ಮಗಳು ತಪ್ಪಿತಸ್ಥೆ ಎಂದು ಸಾಬೀತಾದರೆ ಅವಳನ್ನು ಗಲ್ಲಿಗೇರಿಸಿ : ಸಿಯಾ ಪೋಷಕರ ಆಕ್ರೋಶ ಮುಂಬೈ: ನನ್ನ ಮಗಳು ತಪ್ಪು…
ದರ್ಶನ್ ಪುತ್ರನಿದ್ದ ಕಾರು ಅಪಘಾತ : ವಿನೀಶ್ ವಾಹನ ಚಲಾಯಿಸಿಲ್ಲ: ವಿಜಯಲಕ್ಷ್ಮಿ ಸ್ಪಷ್ಟನೆ ಬೆಂಗಳೂರು: ನಟ ದರ್ಶನ್ ಅವರ ಪುತ್ರ…
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಧರ್ಮಸ್ಥಳ: ದೆಹಲಿ ಪ್ರವಾಸ ಮುಗಿಸಿ ನೇರವಾಗಿ ಧರ್ಮಸ್ಥಳಕ್ಕೆ…
ಆಗುಂಬೆ ಘಾಟಿ : ಭಾರಿ ವಾಹನಗಳ ಸಂಚಾರ ನಿಷೇಧ ಉಡುಪಿ : ರಾಷ್ಟ್ರೀಯ ಹೆದ್ದಾರಿ 169ಎ ರ ತೀರ್ಥಹಳ್ಳಿ –…
ಉಡುಪಿ : ಗ್ಯಾರಂಟಿ ಯೋಜನೆಯ ಸೌಲಭ್ಯಗಳು ಅರ್ಹರಿಗೆ ತಲುಪಲು ಪರಿಣಾಮಕಾರಿ ಕೆಲಸ ಮಾಡಿ : ರಮೇಶ್ ಕಾಂಚನ್ ಉಡುಪಿ :…