ಬಾಗಲಕೋಟೆ: ‘ಬಿಜೆಪಿಯವರ ಢೋಂಗಿ ಬೆದರಿಕೆಗೆ ನಾವು ಸೊಪ್ಪು ಹಾಕುವುದಿಲ್ಲ, ಟಿಪ್ಪು ಜಯಂತಿಯನ್ನು ಮತ್ತೆ ಆಚರಿಸಿ ತೋರಿಸುತ್ತೇವೆ’ ಎಂದು ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಸವಾಲು ಹಾಕಿದರು.
ಜಿಲ್ಲೆಯ ಬಾದಾಮಿಯಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಯಿಂದ ಭಾನುವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ‘ಟಿಪ್ಪು ಜಯಂತಿಗೆ ಢೋಂಗಿ ಬಿಜೆಪಿಯವರು ವಿರೋಧ ಒಡ್ಡುತ್ತಾರೆ. ಎಲ್ಲ ಧರ್ಮಗಳ ನಾಯಕರಾಗಿದ್ದ ಟಿಪ್ಪು ಶೃಂಗೇರಿ ಶಾರದಾಂಬೆ ದೇವಾಲಯಕ್ಕೂ ಕೊಡುಗೆ ನೀಡಿದ್ದಾರೆ. ಟಿಪ್ಪು ಆಸ್ಥಾನದಲ್ಲಿ ದಿವಾನರಾಗಿದ್ದ ಪೂರ್ಣಯ್ಯ ಬ್ರಾಹ್ಮಣರು, ಕೃಷ್ಣರಾವ್ ಹಣಕಾಸು ಸಚಿವರಾಗಿದ್ದರು. ಟಿಪ್ಪು ದೇಶ ಹಾಗೂ ಸ್ವಾತಂತ್ರ್ಯ ಪ್ರೇಮಿಯಾಗಿದ್ದಾರೆ. ಯಾರು ಹೇಳಿದರೂ ನಾವು ಕೇಳುವುದಿಲ್ಲ, ಇತರ ಜಯಂತಿಗಳನ್ನು ಆಚರಿಸಿದಂತೆ ಟಿಪ್ಪು ಜಯಂತಿ ನಡೆಸುತ್ತೇವೆ. ಟಿಪ್ಪು ಮತಾಂಧನಲ್ಲ’ ಎಂದು ಸಮರ್ಥಿಸಿಕೊಂಡರು.
ನಾನು ಸಿಎಂ ಆಗಿದ್ದರೆ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ನೆರವು : ‘ನಾನು ಮುಖ್ಯಮಂತ್ರಿಯಿದ್ದಾಗ ಅಲ್ಪಸಂಖ್ಯಾತ ಸಮುದಾಯಕ್ಕೆ 400 ಕೋಟಿ ರೂ.ಗಳಷ್ಟಿದ್ದ ಅನುದಾನವನ್ನು 3, 100 ಕೋಟಿ ರೂ.ಗಳಿಗೆ ಹೆಚ್ಚಿಸಿದೆ. ಇನ್ನೂ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರೆ ಅನುದಾನ 10 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸುತ್ತಿದ್ದೆ. ಶಾದಿ ಭಾಗ್ಯ ಯೋಜನೆ ಜಾರಿಗೊಳಿಸಿದಾಗ ಬಿಜೆಪಿಯವರು ಪ್ರತಿಭಟಿಸಿದರು.
“ಸಿದ್ದರಾಮಯ್ಯ ಮುಸಲ್ಮಾನರ ಪರ ಎಂದು ಬಿಜೆಪಿಯವರು ನನ್ನನ್ನು ಬ್ರ್ಯಾಂಡ್ ಮಾಡಲು ಯತ್ನಿಸಿದರು, ನಾನು ಇದಕ್ಕೆಲ್ಲ ಹೆದರುವುದಿಲ್ಲ. ನಾನು ಹಿಂದು, ಮುಸ್ಲಿಂ ಸೇರಿದಂತೆ ಸಮಾಜದ ಬಡವರ ಪರವಾಗಿದ್ದೇನೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಬಿಜೆಪಿ ಶೇ.14 ರಷ್ಟಿರುವ ಮುಸ್ಲಿಮರು, ಶೇ.2 ರಷ್ಟಿರುವ ಕ್ರಿಶ್ಚಿಯನ್‌ರನ್ನು ಮರೆತಿದೆ. ಒಬ್ಬ ಹಿಂದುವಿಗೆ ಕಾಯಿಲೆ ಬಂದಾಗ ಮುಸ್ಲಿಂ ವ್ಯಕ್ತಿ ರಕ್ತ ನೀಡಿದರೆ ಬೇಡ ಎನ್ನುತ್ತೀವಾ?. ಧರ್ಮಗಳ ಮಧ್ಯೆ ಗೋಡೆ ಕಟ್ಟುವ ಕೆಲಸ ಮಾಡಬಾರದು. ನಾನು ಬದುಕಬೇಕು, ಬೇರೆಯವರೂ ಬದುಕಬೇಕು ಎಂಬ ಭಾವನೆಯಿರಬೇಕು. ದೇಶದ ಸಂಪತ್ತು ಒಂದು ಧರ್ಮದವರಿಗೆ ಸೇರಿಲ್ಲ, ಅದು ಎಲ್ಲ ಧರ್ಮದವರದ್ದಾಗಿದೆ’ ಎಂದರು.
ಉಡುಪಿ: ಮಹಾವೀರ ಜಯಂತಿ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ ಮಾ.31ರ ಮಂಗಳವಾರ ಬದಲಾಗಿ ಮಾ. 30ರ ಸೋಮವಾರ ರಜೆ ಘೋಷಣೆ ಉಡುಪಿ:…
ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ ಬೆಂಗಳೂರು: ಮಾ.30ಕ್ಕೆ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ…
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮದಲ್ಲಿಈ ವರ್ಷವೂ 60 ದಿನಗಳ ವಿನಾಯಿತಿ : ಮಧು ಬಂಗಾರಪ್ಪ ಬೆಂಗಳೂರು:…
ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಹ್ವಾನ ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ…
ಬಂಟ್ವಾಳ: ಯುವತಿ ನಾಪತ್ತೆ; ಪ್ರಕರಣ ದಾಖಲು ಬಂಟ್ವಾಳ: ಕೆಲಸಕ್ಕೆಂದು ಹೊರಟ ಯುವತಿ ಮನೆಗೆ ಮರಳದೇ ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ…
ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜಯ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉಡುಪಿ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡೂ…