Featured

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ವಿಶ್ವಕಪ್ ತಂಡದಿಂದ ನಿರ್ಗಮನ -Vishwanews24

ನವದೆಹಲಿ: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದು ಅವರು ಚೇತರಿಸಿಕೊಳ್ಳದ ಕಾರಣ ಇದೀಗ ವಿಶ್ವಕಪ್ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಶಿಖರ್ ಧವನ್ ಅವರ ಹೆಬ್ಬೆರಳಿಗೆ ಗಾಯವಾಗಿತ್ತು. ಆದರೆ ಅವರನ್ನು ಸ್ವದೇಶಕ್ಕೆ ಕಳಿಸದೇ ಲಂಡನ್ ನಲ್ಲೇ ಉಳಿಸಿಕೊಂಡು ಬಿಸಿಸಿಐ ವೈದ್ಯಕೀಯ ತಂಡವು ಒಂದು ವಾರದ ನಿಗಾ ವಹಿಸಲು ನಿರ್ಧರಿಸಿತ್ತು.

ಆದರೆ ಶಿಖರ್ ಧವನ್ ಗುಣಮುಖರಾಗಲು ಕನಿಷ್ಠ ಇನ್ನು ಮೂರು ವಾರ ಬೇಕಿದೆ ಎಂಬ ವರದಿಗಳು ಬಂದಿದ್ದವು. ಸದ್ಯ ನಿಗದಿತ ಅವಧಿಯೊಳಗೆ ಧವನ್ ಚೇತರಿಕೆ ಅಸಾಧ್ಯ ಎಂಬುದು ಕಂಡು ಬಂದ ಹಿನ್ನಲೆಯಲ್ಲಿ ವಿಶ್ವಕಪ್ ತಂಡದಿಂದ ನಿರ್ಗಮಿಸಬೇಕಾಗಿದೆ.

‘2019ರ ವಿಶ್ವಕಪ್‌ ತಂಡದ ಭಾಗವಾಗಿರುವುದಿಲ್ಲ ಎಂದು ಹೇಳಲು ಬೇಸರವಾಗುತ್ತಿದೆ. ದೌರ್ಭಾಗ್ಯವಶಾತ್, ನನ್ನ ಹೆಬ್ಬೆರಳ ಗಾಯ ನಿಗದಿತ ಸಮಯದಲ್ಲಿ ಗುಣವಾಗಿಲ್ಲ. ನಿಜವಾಗಿಯೂ ನನ್ನ ದೇಶಕ್ಕಾಗಿ ವಿಶ್ವಕಪ್ ಟೂರ್ನಿಯಲ್ಲಿ ಆಡಬೇಕು ಎಂಬ ಬಯಕೆ ನನ್ನದಾಗಿತ್ತು. ಇದೀಗ ತಂಡದಿಂದ ಹೊರಗುಳಿದು ಗುಣಮುಖನಾಗುವುದರತ್ತ ಮತ್ತು ಮುಂದಿನ ಟೂರ್ನಿಗಳತ್ತ ಗಮನಹರಿಸಬೇಕಿದೆ. ಭಾರತ ತಂಡದ ಎಲ್ಲ ಆಟಗಾರರು ಚೆನ್ನಾಗಿ ಆಡುತ್ತಿದ್ದಾರೆ. ಅವರು ವಿಶ್ವಕಪ್ ಗೆಲ್ಲಲಿದ್ದಾರೆ. ನಮಗಾಗಿ ಪ್ರಾರ್ಥಿಸುತ್ತಿರಿ, ನಮ್ಮನ್ನು ಬೆಂಬಲಿಸುತ್ತಿರಿ. ಸಹ ಆಟಗಾರರು ನೀಡಿದ ಬೆಂಬಲ ಮತ್ತು ಪ್ರೀತಿಗೆ ಋಣಿ. ಹಾಗೆಯೇ ನಿಮ್ಮ ಸಪೋರ್ಟ್‌ ಮತ್ತು ಪ್ರಾರ್ಥನೆ ನಮಗೆ ತುಂಬಾ ಮುಖ್ಯವಾದದ್ದು. ಅದಕ್ಕಾಗಿ ಧನ್ಯವಾದಗಳು. ಜೈ ಹಿಂದ್!’ ಎಂದು ಧವನ್ ಟ್ವೀಟ್ ಮಾಡಿದ್ದಾರೆ. ಜತೆಗೆ, ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೊವನ್ನೂ ಪೋಸ್ಟ್ ಮಾಡಿದ್ದಾರೆ.

ಶಿಖರ್ ಧವನ್ ಬದಲಿಗೆ ರಿಷಬ್ ಪಂತ್ ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಧವನ್ ಬದಲಿಗೆ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ.

Vishwa News 24

Recent Posts

ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ 15 ಲಕ್ಷ ರೂ.ವಂಚನೆ – vishwanews24

ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ 15 ಲಕ್ಷ ರೂ.ವಂಚನೆ ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ…

13 hours ago

ಹಾಸನ : ಡೆತ್ ನೋಟ್ ಬರೆದಿಟ್ಟು ಪ್ಯಾರಾಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ – vishwanews24

ಹಾಸನ : ಡೆತ್ ನೋಟ್ ಬರೆದಿಟ್ಟು ಪ್ಯಾರಾಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ ಹಾಸನ: ಡೆತ್ ನೋಟ್ ಬರೆದಿಟ್ಟು 21 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿಯೋರ್ವ…

13 hours ago

ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ – vishwanews24

ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘ ಸಭೆ ೨೦೨೩-೨೦೨೪ ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ…

13 hours ago

ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ತರಕಾರಿಗಳಿಗೆ ಕೆಮಿಕಲ್‌ ಸ್ಪ್ರೇ ಬಗ್ಗೆ ಕ್ರಮ : ಖಾದರ್‌ – vishwanews24

ಆನ್‌ಲೈನ್‌ನಲ್ಲಿ ಮಾರಾಟ ಮಾಡೋ ತರಕಾರಿಗೆ ಕೆಮಿಕಲ್‌ ಸ್ಪ್ರೇ ಮಾಡುವ ಬಗ್ಗೆ ದೂರು ಬಂದಿದೆ.. ಪರಿಶೀಲನೆ ಮಾಡ್ತಿದ್ದೇವೆ, ಮುಂದಿನ ದಿನಗಳಲ್ಲಿ ಕ್ರಮ…

14 hours ago

ಕಾಸರಗೋಡು : ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದ ಆ್ಯಂಬುಲೆನ್ಸ್ ; ರೋಗಿ ಮೃತ್ಯು, ನಾಲ್ವರಿಗೆ ಗಾಯ – vishwanews24

ಕಾಸರಗೋಡು : ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದ ಆ್ಯಂಬುಲೆನ್ಸ್ ; ರೋಗಿ ಮೃತ್ಯು, ನಾಲ್ವರಿಗೆ ಗಾಯ ಕಾಸರಗೋಡು :…

15 hours ago

ಇನ್ನು ಮುಂದೆ ರಾಜ್ಯ ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಎರಡು ಚರಣ ಮಾತ್ರ ಬಳಕೆ:  CM ಡಿ.ಕೆ. ಶಿ ಸ್ಪಷ್ಟನೆ – vishwanews24

ರಾಜ್ಯ ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ವಂದೇ ಮಾತರಂನ ಎರಡು ಚರಣ ಮಾತ್ರ ಬಳಕೆ:  ಡಿ.ಕೆ. ಶಿ ಸ್ಪಷ್ಟನೆ…

15 hours ago