Featured

ಟೀ ಮಾರಿಯೂ ೨೦೦ ಕೋಟಿ ಸಂಪಾದಿಸಬಹುದೆಂದು ತೋರಿಸಿದ ಅಮೇರಿಕಾದ ಈ ಮಹಿಳೆಯ ಬಗ್ಗೆ ನೀವು ಓದಲೇ ಬೇಕು…! Vishwanews24

ಚಹಾವನ್ನು ಭಾರತದ ರಾಷ್ಟ್ರೀಯ ಪಾನೀಯ ಎಂದರೆ ತಪ್ಪಾಗಲಾರದು. ಏಕೆಂದರೆ ಒಂದು ದಿನದಲ್ಲಿ 1 ರಿಂದ ಮೂರು ಕಪ್ ಚಹಾ ಹೀರಿದವರು ಯಾರಿದ್ದಾರೆ ಹೇಳಿ. ಅದರಲ್ಲೂ ಚುಮು ಚುಮ ಚಳಿಯಲ್ಲಿ ಹಾಗೂ ದಿನಚರಿ ಆರಂಭದಲ್ಲಿ ಟೀ ಕಡ್ಡಾಯ ಎಂಬ ಮನೋಭಾವ ಭಾರತೀಯರಲ್ಲಿದೆ. ಹೀಗಾಗಿಯೇ ಗಲ್ಲಿ ಗಲ್ಲಿಗಳಲ್ಲಿ ಚಹಾದಂಗಡಿ ಕಾಣಸಿಗುತ್ತದೆ.

ಆದರೆ ಅದೇ ಚಹಾವನ್ನು ಮಾರಟ ಮಾಡಿ ಕೋಟ್ಯಾಧಿಪತಿ ಆಗಿರುವವರ ಬಗ್ಗೆ ಕೇಳಿದ್ದೀರಾ? ಅದು ಕೂಡ ವಿದೇಶಿ ಮಹಿಳೆ ಅಂದರೆ. ಹೌದು ಅಮೆರಿಕ ಮಹಿಳೊಬ್ಬರು ದೇಸಿ ಟೀ ರುಚಿ ತೋರಿಸಿ ಮಿಲಿಯನೇರ್ ಆಗಿದ್ದಾರೆ ಎಂದರೆ ನಂಬಲೇಬೇಕು.

ಕೊಲೊರಾಡೋದ ಬ್ರೂಕ್ ಎಡ್ಡಿ ಹೀಗೆ ಚಹಾ ಮಾರಿ ಕೋಟಿ ಕೋಟಿ ಸಂಪಾದಿಸಿದವರು. ಚಹಾ ಮಾರಾಟ ಮಾಡುವ ಆಲೋಚನೆ ಹೇಗೆ ಬಂತು?

2002 ರಲ್ಲಿ, ಅಂದರೆ ಸುಮಾರು 17 ವರ್ಷಗಳ ಹಿಂದೆ ಬ್ರೂಕ್ ಎಡ್ಡಿ ಭಾರತಕ್ಕೆ ಬಂದಿದ್ದರು. ಈ ವೇಳೆ ಕುಡಿದ ಚಹಾ ಅವರಿಗೆ ಹೊಸ ಅನುಭವ ನೀಡಿತ್ತು. ವಿಶಿಷ್ಠ ರುಚಿಯಿಂದ ಕೂಡಿದ ಟೀಗೆ ಎಡ್ಡಿ ಫಿದಾ ಆಗಿದ್ದರು.

ಭಾರತದಲ್ಲಿ ನಾಲ್ಕು ವರ್ಷಗಳ ಕಾಲವಿದ್ದ ಎಡ್ಡಿ 2006 ರಲ್ಲಿ ಅಮೆರಿಕಕ್ಕೆ ಮರಳಿದ್ದರು. ಆದರೆ ಭಾರತದ ಚಹಾ ರುಚಿ ಅದಾಗಲೇ ಅವರ ನಾಲಿಗೆಯನ್ನು ಆವರಿಸಿತ್ತು. ಹೀಗಾಗಿಯೇ ಅಮೆರಿಕದಲ್ಲೂ ಅದೇ ಸ್ವಾದದ ಚಹಾ ಸವಿಯಲು ಹಂಬಲಿಸಿದರು.

ಆದರೆ ಆ ರುಚಿಯ ಚಹಾ ಎಲ್ಲೂ ಸಿಗುತ್ತಿರಲಿಲ್ಲ. ಇದೇ ವೇಳೆ ಅಂತಹ ಚಹಾಗಳು ಇಲ್ಲಿ ಯಾಕೆ ಸಿಗುತ್ತಿಲ್ಲ. ಭಾರತೀಯ ಚಹಾದ ರುಚಿಯನ್ನು ಅಮೆರಿಕದ ಜನರಿಗೆ ಏಕೆ ನೀಡಬಾರದು ಎಂಬ ಅಲೋಚನೆ ಎಡ್ಡಿಯ ಮನಸಲ್ಲಿ ಕವಲೊಡೆಯಿತು. ಈ ಐಡಿಯಾ ಹೊಳೆದಿದ್ದೇ ತಡ ಸಣ್ಣ ಸ್ಥಳದಲ್ಲಿ ದೇಸಿ ಚಹಾ ಅಂಗಡಿ ಪ್ರಾರಂಭಿಸಲು ನಿರ್ಧರಿಸಿದರು.

2007 ರಲ್ಲಿ ಟೀ ಅಂಗಡಿ ಪ್ರಾರಂಭಿಸಿದ ಎಡ್ಡಿ ಅಮೆರಿಕದ ಎಲ್ಲಾ ಭಾಗಗಗಳಲ್ಲೂ ಇದು ತಲುಪುವಂತೆ ಮಾಡಲು ಯೋಜನೆ ಹಾಕಿಕೊಂಡರು. ಅದರಂತೆ ಚಹಾ ಮಾರಾಟಕ್ಕೆ ದೇಸಿ ಟಚ್ ನೀಡಿದ ಎಡ್ಡಿ ‘ಭಕ್ತಿ ಚಾಯ್’ ಎಂಬ ಬ್ರ್ಯಾಂಡ್ ಸೃಷ್ಟಿಸಿದರು.

ಟೀ ಅಂಗಡಿಯಲ್ಲಿ ಬಿಸಿನೆಸ್ ಜೋರಾಗಿಯೇ ನಡೆಯುತ್ತಿರುವುದು ಕಂಡ ಎಡ್ಡಿ ಕೆಫೆಗಳನ್ನು ಓಪನ್ ಮಾಡಲು ಪ್ರಾರಂಭಿಸಿದರು. ಅಲ್ಲದೆ ಚಿಲ್ಲರೆ ವ್ಯಾಪಾರಿಗಳ ಮೂಲಕ ಚಹಾವನ್ನು ಇತರೆ ಜನರಿಗೆ ತಲುಪುವಂತೆ ಯೋಜನೆ ರೂಪಿಸಿದರು.

ದಿನ ಕಳೆದಂತೆ ಭಕ್ತಿ ಚಾಯ್​ಗೆ ಟೀ ಪ್ರಿಯರು ಫಿದಾ ಆಗಲು ಪ್ರಾರಂಭಿಸಿದರು. ಇದೇ ವೇಳೆ ವಿಭಿನ್ನ ರುಚಿಗಳ ಚಹಾವನ್ನು ಗ್ರಾಹಕರ ಮುಂದಿಟ್ಟ ಎಡ್ಡಿ ಜನರಿಗೆ ಅಸ್ವಾದಿಸಲು ಅನೇಕ ಆಯ್ಕೆಗಳನ್ನು ನೀಡಿದರು.

ಇತ್ತ ಕಡೆ ಚಿಲ್ಲರೆ ವ್ಯಾಪಾರ ಕೂಡ ಭರ್ಜರಿಯಾಗಿ ನಡೆಯಿತು. ಹಾಗೆಯೇ ಕ್ರಮೇಣ ಮನೆ ಮನೆಗಳಲ್ಲೂ ಭಕ್ತಿ ಚಾಯ್ ಅಡಿಯಿಡಲು ಪ್ರಾರಂಭಿಸಿತು.

ಸಣ್ಣ ಅಂಗಡಿಯಿಂದ ಪ್ರಾರಂಭವಾದ ಕಂಪನಿಯಲ್ಲಿ ಇಂದು ನೂರಾರು ಜನರು ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಭಕ್ತಿ ಚಾಯ್​ ಕಂಪೆನಿಯಿಂದ ಎಡ್ಡಿ 200 ಕೋಟಿ ಒಡೆತಿಯಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಚಹಾ ಪ್ರಿಯರು ಹೆಚ್ಚಾಗುತ್ತಿದ್ದು, ಅದರಂತೆ ಎಡ್ಡಿಯ ಚಹಾ ಬಿಸಿನೆಸ್ ಮತ್ತಷ್ಟು ವ್ಯಾಪಿಸುತ್ತಿದೆ. ಎಲ್ಲಿಯವರೆಗೆ ಅಂದರೆ…

2014 ರಲ್ಲಿ ಎಂಟರ್‌ಪ್ರೆನೂರ್ ನಿಯತಕಾಲಿಕೆಯ ವರ್ಷದ ಉದ್ಯಮಿ ಪಟ್ಟಿಯಲ್ಲಿ ಬ್ರೂಕ್ ಎಡ್ಡಿ ಟಾಪ್ 5 ರಲ್ಲಿ ಸ್ಥಾನ ಪಡೆದಿದ್ದರು.

ಒಟ್ಟಿನಲ್ಲಿ ದೇಸಿ ಚಹಾ ಸ್ವಾದ ಎಡ್ಡಿಯ ಒಟ್ಟಾರೆ ಜೀವನವನ್ನೇ ಬದಲಿಸಿದೆ ಎಂದರೆ ತಪ್ಪಾಗಲಾರದು.

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

2 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

2 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

2 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

2 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

2 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

2 days ago