ರಾಜ್ಯ ನ್ಯೂಸ್

ಡಿಕೆಶಿ ಸುತ್ತ ಸಿಬಿಐ : ಶಿವಕುಮಾರ್‌-ಸುರೇಶ್‌ ಆಪ್ತರ ಮನೆಗಳ ಮೇಲೆ ದಾಳಿ,ಮೋದಿ ಅಮಿತ್‌ ಶಾ ವಿರುದ್ಧ ಸಹೋದರರ ವಾಗ್ಧಾಳಿ

ಬೆಂಗಳೂರು: ಕಾಂಗ್ರೆಸ್‌ನ ಪ್ರಭಾವಿ ಹಾಗೂ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್‌ ಆಪ್ತರ ಮೇಲೆ ಸಿಬಿಐ ದಾಳಿ ನಡೆದಿದೆ. ನೋಟು ಅಮಾನ್ಯಿಕರಣ ಪ್ರಕರಣದಲ್ಲಿ ಡಿ.ಕೆ.ಸುರೇಶ್‌ರ ಮಾಜಿ ಆಪ್ತ ಸಹಾಯಕ ಪದ್ಮನಾಭಯ್ಯ, ಉಪ ತಹಸೀಲ್ದಾರ್‌ ಶಿವಾನಂದ್‌, ಗುಮಾಸ್ತ ನಂಜಪ್ಪ ಅವರ ನಿವಾಸಗಳ ಮೇಲೆ  ಸರ್ಚ್‌ ವಾರಂಟ್‌ ನೊಂದಿಗೆ ದಾಳಿ ನಡೆಸಲಾಗಿದೆ.

ಬೆಂಗಳೂರು, ಕನಕಪುರ ಮತ್ತು ರಾಮನಗರದ ಒಟ್ಟು ಐದು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಸಿಬಿಐ ಆಧಿಕಾರಿಗಳು ಕೆಲವೊಂದು ದಾಖಲೆಗಳನ್ನು ವಶಪಡಿಸಿ  ಕೊಂಡಿದ್ದಾರೆ. ನೋಟು ಅಮಾನ್ಯ ಸಂದರ್ಭದಲ್ಲಿ ಮತದಾರರಿಗೆ ಗೊತ್ತಿಲ್ಲದೇ ಅವರ ಗುರುತಿನ ಚೀಟಿ ತಯಾರಿಸುವಲ್ಲಿ ಹಾಗೂ ನೋಟು ಬದಲಾವಣೆಯಲ್ಲಿ ಬ್ಯಾಂಕ್‌ ವ್ಯವಸ್ಥಾಪಕ ಸೇರಿ ಅಧಿಕಾರಿಗಳು ಶಾಮೀಲಾಗಿದ್ದರು ಎಂದು 2017 ಏಪ್ರಿಲ್‌ 7ರಂದು ಪ್ರಕರಣ ದಾಖಲಿಸಲಾಗಿತ್ತು. ಮುಂದುವರಿದ ಭಾಗವಾಗಿ ದಾಳಿ ನಡೆಸಲಾಗಿದೆ ಎಂದು ಸಿಬಿಐ ಸ್ಪಷ್ಟಪಡಿಸಿದೆ.ಏನಿದು ಪ್ರಕರಣ?2016ರ ನೋಟು ಅಮಾನ್ಯಿಕರಣ ಬಳಿಕ 2017ರ ಏಪ್ರಿಲ್‌ 7ರಂದು ರಾಮನಗರದ ಕಾರ್ಪೊರೇಷನ್‌ ಬ್ಯಾಂಕ್‌ ಶಾಖೆಯ ಮುಖ್ಯ ವ್ಯವಸ್ಥಾಪಕ ಬಿ.ಪ್ರಕಾಶ್‌ ಆರ್‌ಬಿಐ ಮಾರ್ಗಸೂಚಿ ಪಾಲಿಸದೆ 10ಲಕ್ಷ  ರೂ. ಹಣವನ್ನು ವಿನಿಮಯ ಮಾಡಿದ್ದರು. ಈ ಸಂಬಂಧ ಸಿಬಿಐ ಪ್ರಕರಣ ದಾಖಸಿಕೊಂಡು ತನಿಖೆ ಕೈಗೊಂಡಿತ್ತು. ಈ ವೇಳೆ ಸಂಸದ ಡಿ.ಕೆ.ಸುರೇಶ್‌ ಅವರ ಆಪ್ತ ಸಹಾಯಕ ಪದ್ಮನಾಭಯ್ಯ ಅವರು ಕನಕಪುರ ಉಪ ತಹಶೀಲ್ದಾರ್‌, ಚುನಾವಣಾ ವಿಭಾಗದ ಅಧಿಕಾರಿ ಶಿವಾನಂದ ಹಾಗೂ ಗುಮಾಸ್ತ ನಂಜಪ್ಪ ಹಾಗೂ ಇತರರ ಜತೆ ಸೇರಿ ಅಕ್ರಮ ಎಸಗಿರುವುದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಈ ಮೂವರು ವ್ಯಕ್ತಿಗಳಿಗೆ ಸೇರಿದ ಐದು ಕಡೆಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಡಿ.ಕೆ.ಸುರೇಶ್‌ ಆಪ್ತ ಪದ್ಮನಾಭಯ್ಯ ಹಾಗೂ ಕಾರ್ಪೊರೇಷನ್‌ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಪ್ರಕಾಶ್‌ ಆಪ್ತರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಕನಕಪುರ ತಹಶೀಲ್ದಾರ್‌ ಕಚೇರಿ ಚುನಾವಣಾ ವಿಭಾಗದ ಅಧಿಕಾರಿ ಶಿವಾನಂದ ಮತ್ತು ಗುಮಾಸ್ತ ನಂಜಪ್ಪ ತಮ್ಮ ಅಧಿಕಾರ ಬಳಸಿ ಚುನಾವಣಾ ಗುರುತಿನ ಚೀಟಿಗಳು, ಚಾಲನಾ ಪರವಾನಿಗೆಗಳನ್ನು ಅಕ್ರಮಕ್ಕೆ ಬಳಸಿಕೊಂಡಿದ್ದರು. ಸುಮಾರು 120 ಗುರುತಿನ ಚೀಟಿಗಳನ್ನು ಅಕ್ರಮವಾಗಿ ಮುದ್ರಿಸಿ, 2016 ನ.10 ಮತ್ತು 11ರಲ್ಲಿ ತಹಶೀಲ್ದಾರ್‌ ಅವರ ಲಾಗಿನ್‌ ಐಡಿ ಬಳಸಿ ಹಾಲೋಗ್ರಾಮ್ಸ್‌ ಬಳಸಿದ್ದಾರೆ. ಇದನ್ನು ಪದ್ಮನಾಭಯ್ಯ ಮತ್ತು ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಪ್ರಕಾಶ್‌ಗೆ ನೀಡಿದ್ದರು. ಇದರಿಂದ ಪ್ರಕಾಶ್‌ 250 ನಕಲಿ ರಸೀದಿಗಳನ್ನು ಸೃಷ್ಟಿಸಿ 10 ಲಕ್ಷ ರೂ. ಹಳೇ ನೋಟುಗಳನ್ನು ಬದಲಾಯಿಸಿಕೊಟ್ಟಿದ್ದಾರೆ. ಅಲ್ಲದೆ, ಪದ್ಮನಾಭಯ್ಯ ಅವರು ಶೇಷಗಿರಿ ಹಾಗೂ ಇತರೆ ವ್ಯಕ್ತಿಗಳನ್ನು ಬಳಸಿಕೊಂಡು ನಕಲಿ ಮನವಿ ಸ್ವೀಕರಿಸಿ ಬ್ಯಾಂಕಿಗೆ ಸಲ್ಲಿಸಿ ನೋಟು ಬದಲಾವಣೆ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು.

ಈ ಹಿಂದೆ ಐಟಿ ದಾಳಿನಡೆದಿತ್ತು2017 ಆಗಸ್ಟ್‌ 4 ರಂದು ಡಿ.ಕೆ.ಶಿವಕುಮಾರ್‌ ಅವರ ಬೆಂಗಳೂರಿನ ನಿವಾಸ ಹಾಗೂ ಕನಕಪುರದ ನಿವಾಸ, ಡಿ.ಕೆ.ಸುರೇಶ್‌ ಅವರ ಸದಾಶಿವನಗರ ನಿವಾಸ ಹಾಗೂ ಅವರ ಆಪ್ತರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ದಾಳಿ ನಡೆಸಲಾಗಿತ್ತು. ಸತತ ಐದು ದಿನಗಳ ಕಾಲ ದಾಳಿ ನಡೆದು ಕೋಟ್ಯಂತರ ರೂ. ನಗದು ಹಾಗೂ ಆಸ್ತಿ ದಾಖಲೆ ವಶಕ್ಕೆ ಪಡೆಯಲಾಗಿತ್ತು. ಬುಧವಾರವೂ ಪ್ರಕರಣ ಸಂಬಂಧ ಡಿ.ಕೆ. ಶಿವಕುಮಾರ್‌ ಸಿಬಿಐ ನ್ಯಾಯಾಲಯಕ್ಕೆ  ಹಾಜರಾಗಿದ್ದರು.

ಬೆದರಿಕೆಗೆ ನಾವು ಬಗ್ಗುವುದಿಲ್ಲ 
ನಾವು ಯಾವುದೇ ಕಾರಣಕ್ಕೂ ಬಿಜೆಪಿಗೆ ಶರಣಾಗುವುದಿಲ್ಲ. ನಾವೂ ಕಾನೂನು ಹೋರಾಟ ನಡೆಸುತ್ತೇವೆ ಎಂದರು. ಡಿಕೆ ಸೋದರರ ವಿರುದ್ಧ ಸಿಬಿಐ ವಾರೆಂಟ್‌ ಬಂದಿದೆ ಎಂಬ ಸುದ್ದಿ ತಿಳಿದು, ಕಾಂಗ್ರೆಸ್‌ ನಾಯಕರು ಹಾಗೂ  ಕಾರ್ಯಕರ್ತರು ಅವರ ಮನೆ ಎದುರು ಜಮಾಯಿಸಿದರು.
ಕಾಂಗ್ರೆಸ್‌ ಕಾರ್ಯಕರ್ತರು ಸ್ಥಳದಲ್ಲಿಯೇ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಆದರೆ, ಸಿಬಿಐ ಸರ್ಚ್‌ ವಾರೆಂಟ್‌ ಹೊರಡಿಸಿರುವ ಮಾಹಿತಿ ಸೋರಿಕೆಯಾಗಿದ್ದು, ಹೇಗೆ ಎಂಬುದು ಖುದ್ದು ಸಿಬಿಐ ಅಧಿಕಾರಿಗಳಲ್ಲೇ ಅಚ್ಚರಿ ಮೂಡಿಸಿದೆ. ಏಕೆಂದರೆ, ದಾಳಿಗೆ ಮುನ್ನವೇ ಡಿ.ಕೆ.ಶಿವಕುಮಾರ್‌ ಸರ್ಚ್‌ ವಾರೆಂಟ್‌ನ ನಿಖರ ಮಾಹಿತಿ ಲಭಿಸಿತ್ತು. ಹೀಗಾಗಿ ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿದೆ ಎಂದು ಹೇಳಲಾಗಿದೆ. ಈ ಮಧ್ಯೆ, ಸಂಸದ ಮುದ್ದುಹನುಮೇಗೌಡ ಕೂಡ ಪತ್ರಿಕಾಗೋಷ್ಠಿ ನಡೆಸಿ, ಡಿ.ಕೆ. ಸಹೋದರರು ಕಾಂಗ್ರೆಸ್‌ನ ಶಕ್ತಿಯಾಗಿದ್ದು, ಇಬ್ಬರನ್ನು ಮಣಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಇದೇ ರೀತಿ ತೃಣಮೂಲ ಕಾಂಗ್ರೆಸ್‌ನ ಸುದೀಪ್‌ ಬಂಡೋಪಾಧ್ಯಾಯ ಅವರ ಮೇಲೆ ಕೇಂದ್ರ ಸರ್ಕಾರ ಸಿಬಿಐ ಅಸ್ತ್ರ ಬಳಸಿ, ಮೂರು ತಿಂಗಳು ಕಿರುಕುಳ ನೀಡಿದ್ದರು. ಡಿ.ಕೆ. ಸುರೇಶ್‌ ಹಾಗೂ ಶಿವಕುಮಾರ್‌ ಪ್ರಬಲರಾಗಿದ್ದಾರೆ. ಕೇಂದ್ರದ ಯಾವುದೇ ದಾಳಿಯನ್ನು ಎದುರಿಸುವ ಶಕ್ತಿ ಅವರಿಗಿದೆ. ಅವರು ಯಾವುದೇ ಕಾನೂನು ವಿರೋಧಿ ಕೆಲಸ ಮಾಡಿಲ್ಲ. ಕೇಂದ್ರ ಸರ್ಕಾರ ಪ್ರತಿಪಕ್ಷಗಳ ನಾಯಕರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಸಂಸತ್ತಿನಲ್ಲಿಯೂ ಈ ವಿಷಯ ಪ್ರಸ್ತಾಪಿಸುವುದಾಗಿ ಅವರು ಹೇಳಿದರು.

 

 

 

Vishwa News 24

Recent Posts

ಕಾರವಾರ : ವೀರ ಯೋಧ ಹುತಾತ್ಮ ವಿನೋದ ನಾಯಕ್ ಅವರ 21ನೇ ಪುಣ್ಯತಿಥಿ ಹಾಗೂ ಸ್ಮಾರಕಕ್ಕೆ ನೂತನ ಕಾಂಪೌಂಡ್ ಗೋಡೆ ಉದ್ಘಾಟನೆ – vishwanews24

ಕಾರವಾರ : ವೀರ ಯೋಧ ಹುತಾತ್ಮ ವಿನೋದ ನಾಯಕ್ ಅವರ 21ನೇ ಪುಣ್ಯತಿಥಿ ಹಾಗೂ ಸ್ಮಾರಕಕ್ಕೆ ನೂತನ ಕಾಂಪೌಂಡ್ ಗೋಡೆ…

19 hours ago

ಕಾನ್ಪುರದಲ್ಲಿ ಖಾಸಗಿ ತರಬೇತಿ ವಿಮಾನ ಅಪಘಾತ: ಉಡುಪಿ ಮೂಲದ ಪೈಲಟ್‌ ಅಭಿಷೇಕ್ ಪೂಜಾರಿ ಸಾವು – vishwanews24

ಕಾನ್ಪುರದಲ್ಲಿ ಖಾಸಗಿ ತರಬೇತಿ ವಿಮಾನ ಅಪಘಾತ: ಉಡುಪಿ ಮೂಲದ ಪೈಲಟ್‌ ಸಾವು ಉಡುಪಿ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಗಸ್ಟ್ 27ರಂದು…

20 hours ago

ಅಮೆರಿಕದ ಪ್ರತಿಷ್ಠಿತ  ಗ್ರ್ಯಾಂಡ್ ಚೆಸ್ ಟೂರ್ ಗೆದ್ದು ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ – vishwanews24

ಅಮೆರಿಕದ ಪ್ರತಿಷ್ಠಿತ  ಗ್ರ್ಯಾಂಡ್ ಚೆಸ್ ಟೂರ್ ಗೆದ್ದು ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ ವಾಷಿಂಗ್ಟನ್‌: ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ…

22 hours ago

ಮೈಸೂರು ದಸರಾಕ್ಕೆ ಅದ್ದೂರಿ ಸಿದ್ಧತೆ : ಅರಮನೆ ಪ್ರವೇಶಿಸಿದ ಗಜಪಡೆಗೆ ಭರ್ಜರಿ ಸ್ವಾಗತ – vishwanews24

ಮೈಸೂರು ದಸರಾಕ್ಕೆ ಅದ್ದೂರಿ ಸಿದ್ಧತೆ : ಅರಮನೆ ಪ್ರವೇಶಿಸಿದ ಗಜಪಡೆಗೆ ಭರ್ಜರಿ ಸ್ವಾಗತ ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ…

22 hours ago

ಕುಂದಾಪುರ : ಗಂಗೊಳ್ಳಿ ಸಮುದ್ರದಲ್ಲಿ ಮುಳುಗಿದ್ದ ದೋಣಿಯ ಅವಶೇಷ ಪತ್ತೆ – vishwanews24

ಕುಂದಾಪುರ : ಗಂಗೊಳ್ಳಿ ಸಮುದ್ರದಲ್ಲಿ ಮುಳುಗಿದ್ದ ದೋಣಿಯ ಅವಶೇಷ ಪತ್ತೆ ಕುಂದಾಪುರ : ಗಂಗೊಳ್ಳಿ ನದೀಮುಖದ ಬಳಿ ಬುಧವಾರ ಸಮುದ್ರದಲ್ಲಿ…

22 hours ago

2019 – 2023ರ ವರೆಗೆ ಮುಡಾದಿಂದ ಹಂಚಿಕೆಯಾದ ಎಲ್ಲಾ 50:50 ಸೈಟುಗಳು ರದ್ದು : ಯತೀಂದ್ರ ಸಿದ್ದರಾಮಯ್ಯ – vishwanews24

2019 – 2023ರ ವರೆಗೆ ಮುಡಾದಿಂದ ಹಂಚಿಕೆಯಾದ ಎಲ್ಲಾ 50:50 ಸೈಟುಗಳು ರದ್ದು .. ಅಕ್ರಮ ನಡೆದಿದ್ದರೆ 2018ರ ಹಿಂದೆ…

22 hours ago