ನವದೆಹಲಿ: ಡಿಸಿಎಂ ಆಗಿ ಸಂಘದ ಪ್ರಾರ್ಥನೆ ಹೇಳುವುದರಲ್ಲಿ ಅಭ್ಯಂತರ ಇಲ್ಲ. ಆದರೇ ಕೆಪಿಸಿಸಿ ಅಧ್ಯಕ್ಷರಾಗಿ ಆರ್‌ಎಸ್‌ಎಸ್ ಪ್ರಾರ್ಥನೆ ಹಾಡಿದ್ದು ತಪ್ಪು. ಅಧ್ಯಕ್ಷರಾಗಿ ಹೇಳಿದ್ರೆ ಡಿಕೆ ಶಿವಕುಮಾರ್ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಎಂಎಲ್‌ಸಿ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಡಿಕೆಶಿ ಆರ್‌ಎಸ್‌ಎಸ್ ಗೀತೆ ಹೇಳಿದ ಕುರಿತು ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಇಂತಹ ಹೇಳಿಕೆ ಸಹಜವಾಗಿ ಸಮರ್ಥಿಸಿಕೊಳ್ಳುತ್ತಾರೆ. ಆರ್‌ಎಸ್‌ಎಸ್‌ನ ದೇಶದಲ್ಲಿ ಈಗಾಗಲೇ ಮೂರು ಬಾರಿ ನಿಷೇಧ ಮಾಡಲಾಗಿತ್ತು. ಡಿಸಿಎಂ ಆಗಿ ಹೇಳಿದ್ರೆ ನಮ್ಮದು ಅಭ್ಯಂತರ ಇಲ್ಲ. ಸರ್ಕಾರ ಎಲ್ಲರ ಸ್ವತ್ತು. ಅದರಲ್ಲಿ ಒಳ್ಳೆಯವರು ಎಲ್ಲಾರೂ ಇರುತ್ತಾರೆ. ಆರ್‌ಎಸ್‌ಎಸ್, ತಾಲಿಬಾನ್‌ಗಳು ಇರುತ್ತಾರೆ. ಕಾಂಗ್ರೆಸ್ ಅಧ್ಯಕ್ಷರಾಗಿ ಹೇಳುವಂತಿಲ್ಲ, ಹೇಳಿದ್ರೆ ಕ್ಷಮೆ ಕೇಳಬೇಕು ಎಂದು ಮನವಿ ಮಾಡಿದರು.
ಮಹಾತ್ಮ ಗಾಂಧಿ ಕೊಂದವರು ಆರ್‌ಎಸ್‌ಎಸ್‌ನವರು. ಹೀಗಾಗಿ ಪಕ್ಷದ ನೆಲೆಗಟ್ಟಿನಲ್ಲಿ ಹಾಗೆ ಹೇಳಿದ್ರೆ ಕ್ಷಮೆ ಕೇಳಬೇಕು. ಯಾರಿಗೆ ಸಂದೇಶ ಕೊಡಲು ಆರ್‌ಎಸ್‌ಎಸ್ ಪ್ರಾರ್ಥನೆ ಮಾಡಿದ್ದಾರೋ ಗೊತ್ತಿಲ್ಲ. ಅವರಿಗೆ ಹಲವು ಮುಖಗಳು ಇವೆ. ಕೃಷಿಕರು, ವ್ಯಾಪಾರಸ್ಥರು, ಉದ್ಯೋಗಸ್ಥರು, ರಾಜಕರಣಿ ಅಂತಾ ಹಲವು ಮುಖಗಳಿವೆ. ಗಾಂಧಿ ಕೊಂದ ಸಂಘಟನೆ ಬಗ್ಗೆ ಹೀಗೆ ಹೇಳಿದ್ದಾರೆ. ಇದು ಯಾರಿಗಾದ್ರು ಸಂದೇಶ ಕೊಡುತ್ತಿರಬಹುದು ಎಂದರು.
ಪ್ರಧಾನಿಯಾಗಿ ಮೋದಿ ಸರ್ಕಾರಕ್ಕೆ 12 ವರ್ಷ: ನೆಹರೂ ದಾಖಲೆ ಮುರಿದ ನಮೋ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ದೀರ್ಘಕಾಲ ನಿರಂತರ ಅಧಿಕಾರ…
ಉಡುಪಿ : ಜೂ.12 ರಂದು ನೇರ ಸಂದರ್ಶನ ಉಡುಪಿ : ನಗರದ ಮಣಿಪಾಲದ ಮನೋಹರ್ ಭವನ್ ಹೋಟೆಲ್ ಮುಂಭಾಗದ ಮಣಿಪಾಲ್…
ಜೂ.12ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಸಿಎಂ ವಿಜಯ್ ಭೇಟಿ ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಜೂನ್…
ಉಡುಪಿ : ಜೂ.11ರಂದು ಖಾಸಗಿ ಬಸ್ ದರ ಏರಿಕೆ ಖಂಡಿಸಿ ಸಿಪಿಎಂ ಪ್ರತಿಭಟನೆ ಉಡುಪಿ : ರಾಜ್ಯದ ಖಾಸಗಿ ಬಸ್…
ಮಲ್ಪೆ ಬಂದರು ಪ್ರವೇಶ ದ್ವಾರ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭ :ಯಶ್ಪಾಲ್ ಸುವರ್ಣ ಮಳೆಗಾಲದ ಹಿನ್ನೆಲೆಯಲ್ಲಿ ಮಲ್ಪೆ ಮೀನುಗಾರಿಕಾ…
ಗುರುತಿನ ಚೀಟಿ ಇಲ್ಲದೆ ಪಬ್, ಬಾರ್ ಮತ್ತು ಕ್ಲಬ್‌ಗಳಿಗೆ ಪ್ರವೇಶವಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರು : ಅಪ್ರಾಪ್ತ…