Featured

ಡಿಕೆ ಶಿವಕುಮಾರ್ ಸಿಎಂ, ಪರಮೇಶ್ವರ್ – ಡಿಸಿಎಂ: ಇಲ್ಲಿದೆ ಹೊಸ ಸಚಿವರ ಅಧಿಕೃತ ಲಿಸ್ಟ್ – vishwanews24

ಡಿಕೆ ಶಿವಕುಮಾರ್ ಸಿಎಂ, ಪರಮೇಶ್ವರ್ – ಡಿಸಿಎಂ: ಇಲ್ಲಿದೆ ಹೊಸ ಸಚಿವರ ಅಧಿಕೃತ ಲಿಸ್ಟ್

ಬೆಂಗಳೂರು : ಡಿಕೆ ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ ಶುರುವಾಗಿದ್ದು, ಅವರೊಂದಿಗೆ ಇನ್ನುಳಿದ 13 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅದರಲ್ಲೂ ಮುಖ್ಯವಾಗಿ ಡಾ. ಜಿ.ಪರಮೇಶ್ವರ್ ಅವರು ಏಕೈಕ ಉಪಮುಖ್ಯಮಂತ್ರಿಯಾಗಿ ಪ್ರದಗ್ರಹ ಮಾಡಲಿದ್ದಾರೆ. ಮೂರು ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ರಾಜ್ಯ ನಾಯಕರು ಬೇಡಿಕೆ ಇಟ್ಟಿದ್ದರು. ಆದ್ರೆ, ಹೈಕಮಾಂಡ್ ಇದಕ್ಕೆ ಬ್ರೇಕ್ ಹಾಕಿದ್ದು, ದಲಿತ ಪರಮೇಶ್ವರ್ ಅವರನ್ನು ಮಾತ್ರ ಡಿಸಿಎಂ ಮಾಡಲು ಗ್ರೀನ್ ಸಿಗ್ನಲ್ ನೀಡಿದೆ. ಇನ್ನುಳಿಂದತೆ 12 ಶಾಸಕರು ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.

ಡಿ.ಕೆ.ಶಿವಕುಮಾರ್​ -ಸಿಎಂ, ಡಾ.ಜಿ.ಪರಮೇಶ್ವರ್-ಡಿಸಿಎಂ, ಸತೀಶ್​​ ಜಾರಕಿಹೊಳಿ, ಕೆ.ಹೆಚ್.ಮುನಿಯಪ್ಪ, ಪ್ರಿಯಾಂಕ್​​ ಖರ್ಗೆ, ಕೃಷ್ಣ ಭೈರೇಗೌಡ, ಯು.ಟಿ.ಖಾದರ್​, ಡಾ.ಯತೀಂದ್ರ ಸಿದ್ದರಾಮಯ್ಯ, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಭೈರತಿ ಸುರೇಶ್​, ಶರಣಪ್ರಕಾಶ್ ಪಾಟೀಲ್ ಹೆಸರು ಮೊದಲ ಪಟ್ಟಿಯಲ್ಲಿ​ದ್ದಾರೆ. ಇನ್ನು ಮೊದಲ ಪಟ್ಟಿಯಲ್ಲಿ ಹಲವು ಘಟಾನುಘಟಿ ನಾಯಕರಿಗೆ ಸ್ಥಾನ ಸಿಕ್ಕಿಲ್ಲ.

ಒಕ್ಕಲಿಗರ ಕೋಟಾದಲ್ಲಿ ಡಿ.ಕೆ.ಶಿವಕುಮಾರ್ ಸೇರಿ ಮೂವರಿಗೆ ಸ್ಥಾನ ನೀಡಲಾಗಿದ್ದರೆ, ಲಿಂಗಾಯತ ಕೋಟಾದಲ್ಲಿ ಮೂವರು, ದಲಿತ ಕೋಟಾದಡಿ ಪರಮೇಶ್ವರ್ ಸೇರಿ ಮೂವರು, ಕುರುಬ ಸಮುದಾಯದಡಿ ಇಬ್ಬರಿಗೆ ಸಚಿವ ಸ್ಥಾನ ಹಂಚಿಕೆ ಮಾಡಲಾಗಿದೆ. ಇನ್ನು ಎಸ್​​ಟಿ, ಮುಸ್ಲಿಮ್, ಕ್ರಿಶ್ಚಿಯನ್​​ ಕೋಟಾದಡಿ ತಲಾ ಒಬ್ಬರಿಗೆ ಸ್ಥಾನ ನೀಡಲಾಗಿದೆ.

Vishwa News 24

Recent Posts

ಉಡುಪಿ : ಜೂ. 6 ರಂದು ನೇರ ಸಂದರ್ಶನ -vishwanews24

ಉಡುಪಿ : ಜೂ. 6 ರಂದು ನೇರ ಸಂದರ್ಶನ ಡುಪಿ: ಉಡುಪಿಯ ಉದ್ಯಾವರದ ಐ.ಒ.ಸಿ.ಎಲ್ ಪೆಟ್ರೋಲ್ ಬಂಕ್ ಬಳಿಯ ಅರವಿಂದ್…

31 minutes ago

ಕರ್ನಾಟಕವನ್ನ ಯಶಸ್ವಿಯಾಗಿ ಮುನ್ನಡೆಸುತ್ತೀರಿ ಎಂಬ ಅದಮ್ಯ ವಿಶ್ವಾಸ ನನಗಿದೆ : ಡಿಕೆಶಿಗೆ ಸೋನಿಯಾ ಗಾಂಧಿ ಶುಭ ಹಾರೈಕೆ – vishwanews24

ಕರ್ನಾಟಕವನ್ನ ಯಶಸ್ವಿಯಾಗಿ ಮುನ್ನಡೆಸುತ್ತೀರಿ ಎಂಬ ಅದಮ್ಯ ವಿಶ್ವಾಸ ನನಗಿದೆ : ಡಿಕೆಶಿಗೆ ಸೋನಿಯಾ ಗಾಂಧಿ ಶುಭ ಹಾರೈಕೆ ಹೊಸ ಜವಾಬ್ದಾರಿಯನ್ನ…

1 hour ago

ಡಿ.ಕೆ.ಶಿವಕುಮಾರ್ ಸಿಎಂ : ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ : ಕೆ. ಕೃಷ್ಣಮೂರ್ತಿ ಆಚಾರ್ಯ – vishwanews24

ಡಿ.ಕೆ.ಶಿವಕುಮಾರ್ ಸಿಎಂ : ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ : ಕೆ. ಕೃಷ್ಣಮೂರ್ತಿ ಆಚಾರ್ಯ ಉಡುಪಿ: ಕಾಂಗ್ರೆಸ್…

2 hours ago

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ -vishwanews24

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಬೆಂಗಳೂರು: ತಳಮಟ್ಟದ ಹೋರಾಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ ಕನಕಪುರ…

2 hours ago

ರಾಜ್ಯಸಭೆ ಟಿಕೆಟ್ ರೇಸ್‌ : ಪ್ರಮುಖ ಆಕಾಂಕ್ಷಿಗಳ ಪಟ್ಟಿಯಲ್ಲಿ ಕರಾವಳಿಯ ನಾಯಕ ಪ್ರಮೋದ್ ಮಧ್ವರಾಜ್ ..!! vishwanews24

ರಾಜ್ಯಸಭೆ ಟಿಕೆಟ್ ರೇಸ್‌ : ಪ್ರಮುಖ ಆಕಾಂಕ್ಷಿಗಳ ಪಟ್ಟಿಯಲ್ಲಿ ಕರಾವಳಿಯ ನಾಯಕ ಪ್ರಮೋದ್ ಮಧ್ವರಾಜ್ ..!! ಕರಾವಳಿ ಭಾಗದ ರಾಜಕೀಯ…

2 hours ago

ಮೋದಿ ಸರಕಾರಕ್ಕೆ ಯಶಸ್ವೀ 12 ವರ್ಷ: ಜೂ.5ರಿಂದ 21ರವರೆಗೆ ಉಡುಪಿ ಜಿಲ್ಲೆಯಾದ್ಯಂತ ಅಭಿಯಾನ – vishwanews24

ಮೋದಿ ಸರಕಾರಕ್ಕೆ ಯಶಸ್ವೀ 12 ವರ್ಷ: ಜೂ.5ರಿಂದ 21ರವರೆಗೆ ಉಡುಪಿ ಜಿಲ್ಲೆಯಾದ್ಯಂತ ಅಭಿಯಾನ ಉಡುಪಿ : ಪ್ರಧಾನಿ ನರೇಂದ್ರ ಮೋದಿ…

3 hours ago