ಬೆಂಗಳೂರು: ಮಂಗಳವಾರ ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಬೆಂಬಲಿಗರು, ಶಾಂತಿನಗರ ಶಾಸಕ ಎನ್‌ಎ ಹ್ಯಾರೀಸ್ ಅವರನ್ನು ಕಡೆಗಣಿಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿಯಾಗಿದೆ. ಪದೇಪದೆ ಡಿಕೆ ಡಿಕೆ ಎಂದು ಕೆಲವರು ಘೋಷಣೆ ಕೂಗುತ್ತಿದ್ದರು. ಇನ್ನು ಕೆಲವರು ಜಮೀರ್ ಫೋಟೋ ಹಿಡಿದು ಘೋಷಣೆ ಹಾಕುತ್ತಿದ್ದರು. ಹೀಗಾಗಿ ಸಿಟ್ಟಾದ ಸಿದ್ದರಾಮಯ್ಯ ಅರ್ಧಕ್ಕೆ ಭಾಷಣ ನಿಲ್ಲಿಸಿ ವೇದಿಕೆಯಿಂದ ಕೆಳಗೆ ಇಳಿದಿದ್ದಾರೆ.
ಬಳಿಕ ವೇದಿಕೆಗೆ ಬಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಪಕ್ಷ ನಾಯಕರು ಮಾತನಾಡಬೇಕಾದರೆ ನೀವು ಕೂಗುತ್ತೀರಿ. ನೀವು ಕಾಂಗ್ರೆಸ್ ದ್ರೋಹಿಗಳೆಂದು ಡಿಕೆ ಶಿವಕುಮಾರ್ ಗರಂ ಆದರು.
ಇನ್ನೂ ಶಾಸಕ ಹ್ಯಾರಿಸ್ ಮಾತನಾಡಿ ಖರ್ಗೆ ಮತ್ತು ಶಿವಕುಮಾರ್ ಅವರನ್ನು ಹೊಗಳಿ , ಜಮೀರ್ ವಿರುದ್ಧ ಪರೋಕ್ಷವಾಗಿ ಟೀಕಿಸಿದರು. ಕಾರ್ಯಕ್ರಮಕ್ಕೆ ಸಿಎಂ ಇಬ್ರಾಹಿಂ ಕೂಡ ಆಗಮಿಸಿರಲಿಲ್ಲ. ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಎಂ ಇಬ್ರಾಹಿಂ, ಅವರೆಲ್ಲಾ ಧೀಮಂತ ನಾಯಕರು, ಅವರ ಜೊತೆ ಸೇರುವುದು ಸರಿಯಲ್ಲ ಎಂದು ನಾನು ಕಾರ್ಯಕ್ರಮಕ್ಕೆ ಬರಲಿಲ್ಲ ಎಂದು ವ್ಯಂಗ್ಯವಾಗಿ ತಿಳಿಸಿದ್ದಾರೆ.
ಕುಂದಾಪುರ: ನಿಂತ ಲಾರಿಗಳಿಗೆ ಬಸ್ ಢಿಕ್ಕಿ: ಎರಡು ಸಾವು, ಹಲವರಿಗೆ ಗಾಯ ಕುಂದಾಪುರ: ಮರವಂತೆ ಸಮುದ್ರ ಕಿನಾರೆಯ ಎದುರಿನ ರಾಷ್ಟ್ರೀಯ…
ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋದ ದರ್ಶನ್ ನವದೆಹಲಿ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು…
ದ. ಕ, ಉಡುಪಿ ಸೇರಿದಂತೆ 5 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ; 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ …
ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ನೂತನ ಸರತಿ ಸಾಲು ಹಾಗೂ ಐಡಿ ಆಧಾರಿತ ಪ್ರವೇಶ ವ್ಯವಸ್ಥೆ ಉದ್ಘಾಟನೆ ಉಡುಪಿ : ಶ್ರೀ…
ಮಂಗಳೂರು: ಸ್ಕೂಟರ್ ಸವಾರನಿಗೆ ಖಾರದ ಪುಡಿ ಎರಚಿ ದರೋಡೆ; ಪ್ರಕರಣ ದಾಖಲು ಮಂಗಳೂರು: ಗುರುಪುರ ಬಂಗ್ಲಗುಡ್ಡೆ ಬಳಿ ಸ್ಕೂಟರ್ ಸವಾರರೊಬ್ಬರಿಗೆ…
ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ 8 ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ಬೆಂಗಳೂರು: ನಗರದ ವಿದ್ಯಾರಣ್ಯಪುರ…