ಬೆಳಗಾವಿ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಕಣದಿಂದ ಹಿಂದೆ ಸರಿದಿದ್ದಾರೆ.
ಚನ್ನರಾಜ್ ಹಟ್ಟಿಹೊಳಿ ಡಿಸಿಸಿ ಬ್ಯಾಂಕ್ ಚುನಾವಣೆ ಕಣದಿಂದ ಹಿಂದಕ್ಕೆ ಸರಿದಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಸತೀಶ ಜಾರಕಿಹೊಳಿಯವರ ಮನವೊಲಿಕೆ ಹಿನ್ನೆಲೆಯಲ್ಲಿ ಚುನಾವಣೆ ಕಣದಿಂದ ಚನ್ನರಾಜ್ ಹಿಂದಕ್ಕೆ ಸರಿದಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಅಧಿಕೃತವಾಗಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಡಿಸಿಸಿ ಬ್ಯಾಂಕ್ ನಿರ್ದೇಶಕ ಚುನಾವಣೆಗೆ ಕಳೆದ ನಾಲ್ಕೈದು ತಿಂಗಳಿಂದ ಖಾನಾಪುರ ತಾಲೂಕಿನಿಂದ ಚನ್ನರಾಜ್ ಹಟ್ಟಿಹೊಳಿ ಕಣಕ್ಕಿಳಿಯಲು ತಯಾರಿ ನಡೆಸಿದ್ದರು. ಖಾನಾಪುರದ ಪಿಕೆಪಿಎಸ್ ನಿರ್ದೇಶಕರ ಮನ ಗೆಲ್ಲಲು ಚನ್ನರಾಜ್ ಯಶಸ್ವಿಯಾಗಿದ್ದರು ಜಿಲ್ಲೆಯ ರಾಜಕಾರಣ ಹಾಗೂ ರಾಜಕೀಯ ದೃಷ್ಟಿಯಿಂದ ಚನ್ನರಾಜ್ ಸ್ಪರ್ಧೆಯಿಂದ ಹಿಂಪಡೆಯಲಿದ್ದಾರೆ ಎಂದು ತಿಳಿಸಿದರು.
ಚುನಾವಣೆ ಕಣದಿಂದ ಚನ್ನರಾಜ್ ಹಿಂದೆ ಸರಿದಿದ್ದೇಕೆ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳುವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ವೀಕೆಂಡ್‌ನಲ್ಲಿ ಧರ್ಮಸ್ಥಳ ಹಾಗೂ ಕುಕ್ಕೆಗೆ ಹೋಗುವವರಿಗೆ ಗುಡ್‌ನ್ಯೂಸ್: ವಿಶೇಷ ದರ್ಶನದೊಂದಿಗೆ KSTDC ಹೊಸ ಟೂರ್ ಪ್ಯಾಕೇಜ್ ಬೆಂಗಳೂರು: ಕರಾವಳಿ ಕರ್ನಾಟಕದ…
ಸಾಲವಾಗಿ ನೀಡಿದ್ದ ಹಣ ಮರುಪಾವತಿಯಾಗದೇ ಕಾಲೇಜು ಶುಲ್ಕ ಪಾವತಿಸಲಾಗದೇ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಕಾರವಾರ: ಕಾಲೇಜು ಶುಲ್ಕ ಕಟ್ಟಲು ತಂದೆ…
ಉಡುಪಿ: ತುಳು ಅಭಿವೃದ್ಧಿ ನಿಗಮ ಸ್ಥಾಪನೆ, ತುಳು ಭವನ ನಿರ್ಮಾಣಕ್ಕೆ ಸಿಎಂಗೆ ಉದಯ್ ಶೆಟ್ಟಿ ಮುನಿಯಾಲ್ ಮನವಿ ಉಡುಪಿ: ಪಂಚ ದ್ರಾವಿಡ…
ಒಟ್ಟಾಗಿ ನಿಂತು ವಿರೋಧಿಸಿದರೆ ಬಿಜೆಪಿಯನ್ನು ಸೋಲಿಸುವುದು ಸುಲಭ .. ಬಿಜೆಪಿ ನಡೆಸುತ್ತಿರುವ ಪ್ರಚಾರಕ್ಕೆ ಪಕ್ಷದ ನಾಯಕರು ಬಲಿಯಾಗಬಾರದು :ರಾಹುಲ್ ಗಾಂಧಿ…
ಬೆಂಗಳೂರು ಅಭಿವೃದ್ಧಿ ಖಾತೆ ವಹಿಸಿಕೊಳ್ಳದ ಕೃಷ್ಣ ಬೈರೇಗೌಡ ; ಖಾತೆ ವಿಚಾರಕ್ಕೆ ಸ್ಪಷ್ಟತೆ ಬೇಕು ಎಂದ ಸಚಿವ ಬೆಂಗಳೂರು: ಪ್ರಮಾಣವಚನ…
ಪೆಟ್ರೋಲ್, ಗ್ಯಾಸ್ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಶಾಕ್ : ಗಗನಕ್ಕೇರಿದ ಅಕ್ಕಿ ಬೆಲೆ ; ಕೆಜಿಗೆ 10 ರಿಂದ 20…