ಡಿ,20 – ಕಾಪು ತಾಲೂಕು ಪ್ರಪ್ರಥಮಕನ್ನಡ ಸಾಹಿತ್ಯ ಸಮ್ಮೇಳನ-
ಮುದ್ದು ಮೂಡುಬೆಳ್ಳೆ ಸರ್ವಾಧ್ಯಕ್ಷತೆ, ಪ್ರೊ.ಬಿ.ಎಮ್.ಹೆಗ್ಡೆ ಉದ್ಘಾಟನೆ
ಕಾಪು:-ಪುರಾತನ, ಐತಿಹಾಸಿಕ,ಜಾನಪದ ಪರಂಪರೆಯ ಧಾರ್ಮಿಕ,ಶೈಕ್ಷಣಿಕ, ಸಾಂಸ್ಕøತಿಕ, ಸಾಮಾಜಿಕ, ಪ್ರವಾಸೋದ್ಯಮ, ಕನ್ನಡ,ತುಳು, ಕೊಂಕಣಿ, ಬ್ಯಾರಿ ಭಾಷೆಗಳ ಸಮ್ಮಿಳಿತ, 30 ಕಂದಾಯ ಗ್ರಾಮಗಳನ್ನು ಒಳಗೊಂಡ ವೈಶಿಷ್ಠಪೂರ್ಣ ಸಾಮರಸ್ಯದತವರೂರು ಕಾಪು ತಾಲೂಕಿನಕನ್ನಡ ನಾಡು,ನುಡಿ ಸಂಸ್ಕøತಿಯನ್ನು ಪ್ರತಿಬಿಂಬಿಸುವ “ಕಾಪು ತಾಲೂಕು – ಪರಂಪರೆಯ ಪರಿಕಲ್ಪನೆ”ಯಡಿಯಲ್ಲಿ ಪ್ರಪ್ರಥಮಕನ್ನಡ ಸಾಹಿತ್ಯ ಸಮ್ಮೇಳನ, ಐತಿಹಾಸಿಕ ಹಿನ್ನೆಲೆಇರುವ ಶಿರ್ವ ಸಮೀಪದಕುತ್ಯಾರಿನಲ್ಲಿ ಶ್ರೀಪರಶುರಾಮೇಶ್ವರ ಕ್ಷೇತ್ರದ ಶ್ರೀಸೂರ್ಯ ಚೈತನ್ಯಗ್ಲೋಬಲ್ ಅಕಾಡೆಮಿ ಸ್ಕೂಲ್ ಸಭಾಂಗಣದಲ್ಲಿಆಕಾಶವಾಣಿ ರಾಷ್ಟ್ರಪ್ರಶಸ್ತಿ ಪುರಸ್ಕøತ, ಸಾಹಿತಿ,ಕಲಾವಿದ ಮುದ್ದು ಮೂಡುಬೆಳ್ಳೆಯವರ ಸರ್ವಾಧ್ಯಕ್ಷತೆಯಲ್ಲಿಡಿಸೆಂಬರ್ 20 ಗುರುವಾರಜರುಗಲಿದೆ.
ಕುತ್ಯಾರುಯುವಕ ಮಂಡಲದ ಸಮೀಪದಅಂತಾರಾಷ್ಠ್ರೀಯಖ್ಯಾತರೇಖಾಚಿತ್ರಕಲಾವಿದ, ಪದ್ಮಭೂಷಣಕಟ್ಟಂಗೇರಿ ಕೃಷ್ಣ ಹೆಬ್ಬಾರ್ ಸ್ಮರಣಾರ್ಥ ನಿರ್ಮಿಸಿರುವ “ಕೆ.ಕೆ.ಹೆಬ್ಬಾರ್ ಮಹಾದ್ವಾರ”ದಿಂದ ಪ್ರಾರಂಭಗೊಳ್ಳುವ ಶೋಭಾಯಾತ್ರೆಯನ್ನು ಸೈಮನ್‍ಡಿಸೋಜ ಶಿರ್ವ ಉದ್ಘಾಟಿಸಲಿರುವರು.
ಕುತ್ಯಾರುಗ್ರಾಮ ಪಂಚಾಯತ್‍ಅಧ್ಯಕ್ಷ ಧೀರಜ್ ಶೆಟ್ಟಿರಾಷ್ಟಧ್ವಜಾರೋಹಣ, ಕಸಾಪ ಕಾಪು ತಾಲೂಕುಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಪರಿಷತ್‍ಧ್ವಜಾರೋಹಣ ನೆರವೇರಿಸುವರು. ಖ್ಯಾತ ಸಾಹಿತಿ ಬಿ,ಎಸ್,ಕುರ್ಕಾಲ್ ಮಂಟಪದ ಪಾದೂರುಗುರುರಾಜ ಭಟ್ಟ ವೇದಿಕೆಯಲ್ಲಿ ಸಮ್ಮೇಳನದ ಉದ್ಘಾಟನೆಯನ್ನುಖ್ಯಾತ ವೈದ್ಯ ಪದ್ಮಭೂಷಣ ಪ್ರೊ.ಬಿ.ಎಮ್.ಹೆಗ್ಡೆ ನೆರವೇರಿಸಲಿದ್ದು, ನಿವೃತ್ತ ಪ್ರಾಚಾರ್ಯಆಲ್ಬನ್‍ರೊಡ್ರಿಗಸ್,ಕಸಾಪಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರಅಡಿಗ, ಕಸಾಪ ಪೂರ್ವರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು,ಖ್ಯಾತಚಿತ್ರಕಲಾವಿದೆರೇಖಾರಾವ್ ಹೆಬ್ಬಾರ್ ಬೆಂಗಳೂರು, ಪಾದೂರು ವೆಂಕಟೇಶತಂತ್ರಿ, ಶಂಭುದಾಸ್‍ಗುರೂಜಿಕುತ್ಯಾರು, ರೆ,ಫಾ,ಲಾರೆನ್ಸ್ ಬಿ.ಡಿಸೋಜ ಕಳತ್ತೂರು, ಜಿಲ್ಲಾ ಪಂಚಾಯತ್‍ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿ.ಪಂ.ಸದಸ್ಯೆ ಶಿಲ್ಪಾ ಸುವರ್ಣ,ಜಿಲ್ಲಾ ವಿದ್ಯಾಂಗಉಪನಿರ್ದೇಶಕ ಶೇಷಶಯನಕಾರಿಂಜ, ಉಡುಪಿ ಕಸಾಪ ಅಧ್ಯಕ್ಷೆ ವಸಂತಿ ಶೆಟ್ಟಿ, ಪಾದೂರುಅರುಣ್ ಶೆಟ್ಟಿ ಭಾಗವಹಿಸುವರು
ಖ್ಯಾತಜಾನಪದ ವಿದ್ವಾಂಸ /ಪತ್ರಕರ್ತಕೆ.ಎಲ್ .ಕುಂಡಂತಾಯರಅಧ್ಯಕ್ಷತೆಯಲ್ಲಿಜುರುಗುವ “ಕಾಪು ದರ್ಶನ-ಶಿಕ್ಷಣ ಸಾಹಿತ್ಯ-ಧಾರ್ಮಿಕ,ಸಾಂಸ್ಕøತಿಕ/ಜಾನಪದ ಆಯಾಮಗಳು” ಪ್ರಥಮ ಗೋಷ್ಠಿಯಲ್ಲಿ ಪಿ.ದಿನೇಶ್‍ಕುಮಾರ್‍ಕಟಪಾಡಿ, ಡಾ,ವೈ,ಎನ್,ಶೆಟ್ಟಿ ಪಡುಬಿದ್ರೆ, ಗಣೇಶ್‍ರಾವ್‍ಎಲ್ಲೂರು ವಿಷಯ ಮಂಡಿಸುವರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಾಯೋಜಕತ್ವದಲ್ಲಿಖ್ಯಾತಗಾಯಕಿಜಯಲಕ್ಷ್ಮೀ ಮತ್ತು ಬಳಗದ ಕನ್ನಡಗೀತಾಗಾಯನ -ಕಾವ್ಯ ಕುಂಚ ಕಾರ್ಯಕ್ರಮದಲ್ಲಿಖ್ಯಾತಚಿತ್ರಕಲಾವಿದರಮೇಶ್ ಬಂಟಕಲ್‍ರವರಿಂದಚಿತ್ರರಚನೆ.
ಹಿರಿಯ ಸಾಹಿತಿ/ಕವಿ ಮಮ್ತಾಜ್ ಬೇಗಂ ಬೆಳಪು ಇವರಅಧ್ಯಕ್ಷತೆಯಲ್ಲಿಜರುಗುವ ಕವಿಗೋಷ್ಠಿಯಲ್ಲಿಉದಯೋನ್ಮಖ ಕವಿಗಳಾದ ಪ್ರಕಾಶ್ ಸುವರ್ಣಕಟಪಾಡಿ, ಪ್ರೊ.ಯಶೋದಾಎಲ್ಲೂರು, ವೈ. ಶರಾವತಿಯು,ರಾವ್‍ಕಸ್ತೂರಿರಾಮಚಂದ್ರ, ಅನಿಲ್ ಕುಮಾರ್ ಪಾಂಗಾಳ,ಮುರಳಿ ಪಣಿಯೂರು, ದೀಪಕ್ ಕೆ.ಬೀರಾ ಪಡುಬಿದ್ರೆ, ಭಾಗವಹಿಸುವರು.
ಮನರಂಜನಾಕಾರ್ಯಕ್ರಮದಲ್ಲಿ ವೀರಮಾರುತಿಜಾನಪದ ಕಲಾ ಸಂಘ ಬಂಟಕಲ್ಲು, ಶ್ರೀವಿದ್ಯಾದಾಯಿನಿ ಹಿ.ಪ್ರಾ.ಶಾಲೆ, ಕುತ್ಯಾರು, ಶ್ರೀಸೂರ್ಯಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ವೈಭವ,
ಅಪರಾಹ್ನಗಂಟೆ 3.15ರಿಂದ ಜರುಗುವ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಪ್ರಾಚಾರ್ಯ ಪ್ರೊ.ಚಂದ್ರಪ್ರಭಾ ಹೆಗ್ಡೆ ಸಮಾರೋಪ ಭಾಷಣ ಮಾಡಲಿದ್ದು,ಕಾಪುತಾಲೂಕುಕನ್ನಡ ಸಾಹಿತ್ಯ ಪರಿಷತ್ತುಅಧ್ಯಕ್ಷ ಬಿ.ಪುಂಡಲೀಕ ಮರಾಠೆಅಧ್ಯಕ್ಷತೆ ವಹಿಸುವರು. ಎಲ್ಲೂರುಅದಾನಿ ಯುಪಿಸಿಲ್ ಘಟಕದಜಂಟಿಅಧ್ಯಕ್ಷ/ಕಾರ್ಯನಿರ್ವಹಣಾಧಿಕಾರಿಕಿಶೋರ್ ಆಳ್ವ ಸಾಧಕರನ್ನು ಸನ್ಮಾನಿಸಲಿದ್ದು, ಸಮ್ಮೇಳನದ ಸರ್ವಾಧ್ಯಕ್ಷ ಮುದ್ದು ಮೂಡುಬೆಳ್ಳೆ ಪ್ರತಿಸ್ಪಂದನ ಸಂದೇಶ ನೀಡುವರು.
ಅತಿಥಿಗಳಾಗಿ ಬಂಟಕಲ್ಲು ಶ್ರೀಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ತಿರುಮಲೇಶ್ವರ ಭಟ್,ತಾ.ಪಂ.ಸದಸ್ಯ ಮೈಕಲ್‍ರಮೇಶ್‍ಡಿಸೋಜ, ಉದ್ಯಮಿ/ಸಮಾಜಸೇವಕಗುರ್ಮೆ ಸುರೇಶ ಶೆಟ್ಟಿ, ಶಿರ್ವ ಶ್ರೀಮಹಾಲಸಾ ದೇವಳದ ಅರ್ಚಕರಘುರಾಮ ಶೆಣೈ, ರಾಯಚೂರು ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ಪ್ರೊ.ಮುಜಾಫರ್‍ಅಸ್ಸಾದಿ ಶಿರ್ವ, ಬ್ರಹ್ಮಾವರ ಕಸಾಪ ಅಧ್ಯಕ್ಷ ಸೂರಾಲು ನಾರಾಯಣ ಮಡಿ, ಕಾರ್ಕಳ ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ನಿವೃತ್ತ ಬ್ಯಾಂಕ್‍ಅಧಿಕಾರಿ ವಿಜಯ ಶಂಕರಪುರ, ಉದ್ಯಮಿ ವೈ.ಸುಧೀರ್‍ಕುಮಾರ್ ಪಡುಬಿದ್ರೆ, ಕಟಪಾಡಿ ಬೀಡು ವಿನಯ ಬಲ್ಲಾಳ್, ಭಾಗವಹಿಸುವರು.
ಕಸಾಪ ಗೌರವ ಸನ್ಮಾನಿತರು:-ಜಗನ್ನಾಥ ಬಂಗೇರ ಮಟ್ಟು(ಜಾನಪದ ಕಂಗೀಲು),ಸತೀಶ್ ಶೆಟ್ಟಿಕುತ್ಯಾರು,(ಹೊರನಾಡಿನಲ್ಲಿಕನ್ನಡ ಸಾಹಿತ್ಯ),ಕೃಷ್ಣ ಶೆಟ್ಟಿಗಾರ್‍ಇಂದ್ರಪುರ ಶಿರ್ವ(ಪ್ರಗತಿಪರ ಕೃಷಿಕ), ರಾಮಚಂದ್ರಆಚಾರ್ಯ ಪಡುಬಿದ್ರೆ(ಮಾಧ್ಯಮ), ಶ್ರೀಮತಿ ಲತಾತಂತ್ರಿಕುತ್ಯಾರು(ಶಾಸ್ತ್ರೀಯ ಸಂಗೀತ)ವಿ.ಎಸ್.ಕೇಂಜ(ವ್ಯಂಗ್ಯಚಿತ್ರಕಲೆ) ಸಾಧು ಪಾಣರ(ಭೂತಾರಾಧನೆ), ಕುಮಾರಿಜ್ಯೋತಿ ಬೆಳಪು(ಕ್ರೀಡೆ), ಅರುಣ್‍ಡಿಸೋಜ ಪಿಲಾರುಖಾನ(ಧಾರ್ಮಿಕ/ಸಮಾಜಸೇವೆ).
ಚಿತ್ರಕಲಾ ಪ್ರದರ್ಶನ:-ರಾಷ್ಠ್ರಪ್ರಶಸ್ತಿ ವಿಜೇತಚಿತ್ರಕಲಾವಿದಉಪಾಧ್ಯಾಯ ಮೂಡುಬೆಳ್ಳೆ, ಹಿರಿಯಚಿತ್ರಕಲಾವಿದ ಪದ್ಮನಾಭ ನಾಯಕ್, ಬೆಳ್ಳೆ, ಚಿತ್ರಕಲಾ ಶಿಕ್ಷಕ ರಮೇಶ್ ಬಂಟಕಲ್‍ರವರ ಚಿತ್ರಗಳ ಪ್ರದರ್ಶನಜರುಗಲಿದ್ದು, ಅಂತಾರಾಷ್ಠ್ರೀಯಖ್ಯಾತಚಿತ್ರಕಲಾವಿದೆರೇಖಾರಾವ್ ಹೆಬ್ಬಾರ್ ಬೆಂಗಳೂರು ಉದ್ಘಾಟಿಸುವರು.
ಪುಸ್ತಕ ಪ್ರದರ್ಶನ:- ನಾಡಿನಖ್ಯಾತ ಲೇಖಕರ ಗ್ರಂಥಗಳು, ಇತರ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯಲ್ಲಿ ಸಾಹಿತ್ಯಾಸಕ್ತರಿಗೆಉಪಯುಕ್ತ ಸಾಹಿತ್ಯಗಳು ಪ್ರದರ್ಶನಗೊಳ್ಳಲಿವೆ.
ಆಕರ್ಷಕ ಶೋಭಾಯಾತ್ರೆ:-ಕುತ್ಯಾರುಯುವಕ ಮಂಡಲದಅಧ್ಯಕ್ಷ ಹಾಗೂ ಗ್ರಾಮ ಪಂಚಾಯತ್‍ಅಧ್ಯಕ್ಷ ಧೀರಜ್ ಶೆಟ್ಟಿ ನೇತೃತ್ವದಲ್ಲಿಯುವಕ ಮಂಡಲದ ಸಮೀಪ ನಿರ್ಮಿಸಿರುವ “ಕೆ.ಕೆ.ಹೆಬ್ಬಾರ್ ಮಹಾದ್ವಾರ”ದಿಂದ ಸಮ್ಮೇಳನದ ಸರ್ವಾಧ್ಯಕ್ಷರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಸಂಗಮಕೇಂದ್ರವರೆಗೆ ಭಾರತಮಾತೆ,ಕರ್ನಾಟಕ ಮಾತೆ,ಸಹಿತಚಂಡೆ, ನಾಸಿ ಬ್ಯಾಂಡ್, ಎನ್.ಸಿಸಿ, ಸ್ಕೂಲ್ ಸ್ಕೌಟ್,ಗೈಡ್ಸ್, ಭಾರತ ಸೇವಾದಳ,ಜಾನಪದ ಕಂಗೀಲು,ಮಂಗಳವಾದ್ಯಗಳೊಂದಿಗೆ ಆಕರ್ಷಕ ಶೋಭಾಯಾತ್ರೆ ವ್ಯವಸ್ಥೆ ಮಾಡಲಾಗಿದೆ.
ಅತಿಥಿ ಸತ್ಕಾರ:- ಪೂರ್ವಾಹ್ನದಉಪಾಹಾರ, ಪಾನೀಯ ವ್ಯವಸ್ಥೆ, ಮಧ್ಯಾಹ್ನ ಭೋಜನ ಸಂಜೆ, ಲಘು ಉಪಾಹಾರ,ಟೀ,ಪಾನೀಯ ವ್ಯವಸ್ಥೆ ಮಾಡಲಾಗಿದೆ.
ಉಚಿತ ಬಸ್ ವ್ಯವಸ್ಥೆ:- ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರಿಗೆ ಶಿರ್ವ ಮಂಚಕಲ್-ಕುತ್ಯಾರುಕ್ರಾಸ್‍ರಸ್ತೆಯಿಂದ ಸಮ್ಮೇಳನದ ಸ್ಥಳಕ್ಕೆ ಶ್ರೀಸೂರ್ಯಚೈತನ್ಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಶಂಭುದಾಸ್‍ಗುರೂಜಿಯವರು ಶಾಲಾ ವಾಹನವನ್ನು ಬ್ಯಾನರ್ ಸಹಿತಉಚಿತ ನೀಡಿದ್ದಾರೆ,
ಕಾಪು ಪ್ರೆಸ್‍ಕ್ಲಬ್‍ನಲ್ಲಿಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಕಸಾಪ ಕಾಪು ತಾಲೂಕುಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಕುತ್ಯಾರು ಶ್ರೀಸೂರ್ಯಚೈತನ್ಯ ಸ್ಕೂಲ್ ಸಂಚಾಲಕ ಶಂಭುದಾಸ್‍ಗುರೂಜಿ, ಸ್ವಾಗತ ಸಮಿತಿಯ ಉಪಾಧ್ಯಕ್ಷರುಗಳಾದ ಕಟ್ಟಂಗೇರಿದೇವದಾಸ ಹೆಬ್ಬಾರ್, ಹರೀಶ್ ಕಟಪಾಡಿ,ದಯಾನಂದ ಶೆಟ್ಟಿ ಉಪಸ್ಥಿತರಿದ್ದರು.
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…
ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ : ಡಿಕೆಶಿ ಬೆಂಗಳೂರು : ಕೇಂದ್ರ ಸರ್ಕಾರ…