Featured

ಡಿಸೆಂಬರ್ 25 ರಂದು ಬಂಗ್ರಕೂಳೂರಿನಲ್ಲಿ ಪ್ರಕಾಶಾಭಿನಂದನೆ ಕಾರ್ಯಕ್ರಮ,

ಮಂಗಳೂರು:  ಬಂಗ್ರ ಕೂಳೂರಿನಲ್ಲಿ `ಪ್ರಕಾಶಾಭಿನಂದನೆ’
ಉದ್ಘಾಟನೆಗೆ ಸಿಎಂ ಯಡಿಯೂರಪ್ಪ, ತಾರಾಮೇಳ
ಮಂಗಳೂರು: ಎಂಆರ್‌ಜಿ ಗ್ರೂಫ್‌ನ ಅಧ್ಯಕ್ಷ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರಿಗೆ ೬೦ ವರ್ಷ ತುಂಬಿದ ಹಿನ್ನೆಲೆಯಲ್ಲಿ ಡಿ.೨೫ರಂದು ಬುಧವಾರ ಬಂಗ್ರಕೂಳೂರಿನಲ್ಲಿರುವ ಗೋಲ್ಡ್ಪಿಂಚ್ ಮೈದಾನದಲ್ಲಿ ಪ್ರಕಾಶಾಭಿನಂದನ ೬೦ರ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.
ಪ್ರಕಾಶಾಭಿನಂದನಾ ಕಾರ್ಯಕ್ರಮದಂಗವಾಗಿ ಡಿ.೧೯ರಂದು ಬಂಗ್ರಕೂಳೂರಿನಲ್ಲಿರುವ ಗೋಲ್ಡ್ಪಿಂಚ್ ಮೈದಾನದಲ್ಲಿ ಅಶಕ್ತರು ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು ನೀಡುವ ಕಾರ್ಯಕ್ರಮ ನಡೆದಿತ್ತು. ೧೦೦ಕ್ಕೂ ಮಿಕ್ಕಿ ಅಶಕ್ತರಿಗೆ ಮತ್ತು ೬೬ ವಿದ್ಯಾರ್ಥಿಗಳಿಗೆ ಒಟ್ಟು ಒಂದು ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ನೆರವು ವಿತರಿಸಲಾಗಿತ್ತು.

ಕೆ. ಪ್ರಕಾಶ್ ಶೆಟ್ಟಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಬಹಳಷ್ಟಿದೆ. ಹೀಗಾಗಿ ಸಮಾಜವು ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಪ್ರಕಾಶಾಭಿನಂದನೆ ಕಾರ್ಯಕ್ರಮ ಆಯೋಜಿಸಿದ್ದು ಸಮಾರಂಭವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.
ಸಮಾರಂಭದಲ್ಲಿ ದೇಶ ವಿದೇಶಗಳ ವಿವಿಧ ಸಮುದಾಯಗಳ ೨೫೦೦೦ಕ್ಕೂ ಮಿಕ್ಕಿ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಂಜೆ ೪ ಗಂಟೆಗೆ ಪಟ್ಲ ಸತೀಶ್ ಶೆಟ್ಟಿ, ಸುರೇಶ್ ಶೆಟ್ಟಿ ಶಂಕರನಾರಾಯಣ, ಜನ್ಸಾಲೆ ರಾಘವೇಂದ್ರ ಆಚಾರ್ ಮತ್ತು ಕಾವ್ಯಶ್ರೀ ಆಜೇರು ಅವರ ಪಾಲ್ಗೊಳ್ಳುವಿಕೆಯಲ್ಲಿ ಯಕ್ಷಗಾನ ವೈಭವ ಜರಗಲಿದೆ. ಸಂಜೆ ೫ರಿಂದ ೬ರವರೆಗೆ ಆಳ್ವಾಸ್ ಸಾಂಸ್ಕೃತಿಕ ವೈಭವ ಜರಗಲಿದೆ.

ಸಂಜೆ ೬ ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ.

ಆ ಬಳಿಕ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕ ವಿಜಯ್ ಪ್ರಕಾಶ್ ಅವರ ಪಾಲ್ಗೊಳ್ಳುವಿಕೆಯಲ್ಲಿ ಸಂಗೀತ ರಸಸಂಜೆ ನಡೆಯಲಿದೆ. ವಿಶೇಷ ಅತಿಥಿಗಳಾಗಿ ಚಲನಚಿತ್ರ ನಟರಾದ ರವಿಚಂದ್ರನ್ ಮತ್ತು ಯಶ್ ಪಾಲ್ಗೊಳ್ಳಲಿದ್ದಾರೆ.

ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೇಂದ್ರ ರಾಸಾಯಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಬಂದರು, ಮೀನುಗಾರಿಕೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ಶೋಭಾ ಕರಂದ್ಲಾಜೆ, ಸುಮಲತಾ ಅಂಬರೀಷ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ನಿಟ್ಟೆ ವಿವಿ ಕುಲಪತಿ ಎನ್ ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.

ಅತಿಥಿಗಳಾಗಿ ವಿಧಾನಸಭೆಯ ಮುಖ್ಯ ಸಚೇತಕ ಸುನೀಲ್ ಕುಮಾರ್, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರ, ಕೆ. ರಘುಪತಿ ಭಟ್ ಉಡುಪಿ, ಬಿ.ಎಂ. ಸುಕುಮಾರ ಶೆಟ್ಟಿ ಬೈಂದೂರು, ಲಾಲಾಜಿ ಆರ್. ಮೆಂಡನ್ ಕಾಪು, ಯು.ಟಿ. ಖಾದರ್ ಉಳ್ಳಾಲ, ಎಸ್. ಅಂಗಾರ ಸುಳ್ಯ, ಯು. ರಾಜೇಶ್ ನಾಯ್ಕ್ ಬಂಟ್ವಾಳ, ಸಂಜೀವ ಮಠಂದೂರು ಪುತ್ತೂರು, ವೇದವ್ಯಾಸ ಕಾಮತ್ ಮಂಗಳೂರು, ಎ. ಉಮಾನಾಥ ಕೋಟ್ಯಾನ್ ಮೂಡಬಿದ್ರೆ, ಹರೀಶ್ ಪೂಂಜಾ ಬೆಳ್ತಂಗಡಿ, ಡಾ. ವೈ ಭರತ್ ಶೆಟ್ಟಿ ಸುರತ್ಕಲ್, ಐವನ್ ಡಿ’ಸೋಜಾ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಶ್ರೀದೇವಿ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಎ.ಜೆ. ಹಾಸ್ಪಿಟಲ್ ಮತ್ತು ರೀಸರ್ಚ್ ಸೆಂಟರ್‌ನ ಚೇರ್ಮನ್ ಎ.ಜೆ. ಶೆಟ್ಟಿ, ಮಾಜಿ ಸಚಿವ ಬಿ. ರಮಾನಾಥ ರೈ, ಮೂಡಬಿದ್ರೆ ಆಳ್ವಾಸ್‌ಎಜುಕೇಶನ್ ಫೌಂಡೇಶನ್‌ನ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಉಡುಪಿಯ ಅಧ್ಯಕ್ಷ ಡಾ. ಜಿ. ಶಂಕರ್, ಮಾಜಿ ಸಚಿವ ಅಭಯಚಂದ್ರ ಜೈನ್, ಯೇನೆಪೋಯ ಗ್ರೂಪ್‌ನ ಚೇರ್ಮನ್ ಯೇನೆಪೋಯ ಅಬ್ದುಲ್ಲ ಕುಂಞ, ಅಖಿಲ ಭಾರತೀಯ ಬಿಲ್ಲವ ಯೂನಿಯನ್‌ನ ಅಧ್ಯಕ್ಷ ನವೀನಚಂದ್ರ ಡಿ. ಸುವರ್ಣ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಭಂಡಾರಿ ಮಹಾ ಮಂಡಲ ವಿಶ್ವ ಭಂಢಾರಿ ಸಂಘದ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಅಖಿಲಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಕಚ್ಚೂರು ಶ್ರೀ ನಾಗೇಶ್ವÀರ ದೇವಸ್ಥಾನ ಬಾರ್ಕೂರು ಆಡಳಿತ ಮೊಕ್ತೇಸರ ಸುರೇಶ್ ಭಂಡಾರಿ ಕಡಂದಲೆ ಭಾಗವಹಿಸಲಿದ್ದಾರೆ.

ಸಾಧಕರಿಗೆ ಸಮ್ಮಾನ
ವಿವಿಧ ಕ್ಷೇತ್ರಗಳ ಸಾಧಕರಾದ ಡಾ. ಅಮೃತ ಸೋಮೇಶ್ವರ, ಡಾ. ಬಿ.ಎಂ. ಹೆಗ್ಡೆ, ಡಾ. ಚಂದ್ರಶೇಖರ ಶೆಟ್ಟಿ ಬೆಂಗಳೂರು, ಡಾ. ಸುನೀತಾ ಶೆಟ್ಟಿ ಮುಂಬೈ, ಅಪ್ಪಣ್ಣ ಹೆಗ್ಡೆ ಬಸ್ರೂರು, ಜಯ ಸುವರ್ಣ, ಆರ್.ಎನ್. ಶೆಟ್ಟಿ, ಜಗನ್ನಾಥ್ ಶೆಟ್ಟಿ ಪುಣೆ, ಎಂ.ಎನ್. ರಾಜೇಂದ್ರ ಕುಮಾರ್, ಎಲ್.ಜಿ. ಸೋನ್ಸ್, ಶಿಮಂತೂರು ನಾರಾಯಣ ಶೆಟ್ಟಿ, ಕೆ. ಗೋವಿಂದ ಭಟ್ ಸೂರಿಕುಮೇರು, ಬನ್ನಂಜೆ ಸಂಜೀವ ಸುವರ್ಣ, ಕೋಟೇಶ್ವರ ಲಕ್ಷಿö್ಮÃನಾರಾಯಣ ಆಚಾರ್ಯ, ಬೋಳ ಸುಬ್ಬಯ್ಯ ಶೆಟ್ಟಿ, ಸಾರಾಅಬೂಬಕರ್, ನಾರಾಯಣ ರಾವ್ ಪಡುಬಿದ್ರಿ, ನಗರ ನಾರಾಯಣ ಶೆಣೈ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು.

ಪ್ರಕಾಶಾಭಿನಂದನೆಯಲ್ಲಿ ತಾರಾ ಮೆರುಗು
ಪ್ರಕಾಶಾಭಿನಂದನೆ ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ನಟರಾದ ರವಿಚಂದ್ರನ್, ಯಶ್, ಹರಿಪ್ರಿಯ, ಮಾನ್ವಿತಾ ಹರೀಶ್, ಕಾವ್ಯ ಶೆಟ್ಟಿ, ಅರ್ಜುನ್ ಜನ್ಯ, ವಿಜಯಪ್ರಕಾಶ್ ಸಹಿತ ಅನೇಕ ಸಿನಿಮಾ ಕಲಾವಿದರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಅನುಶ್ರೀ, ನಿತೇಶ್ ಶೆಟ್ಟಿ ಎಕ್ಕಾರ್, ರೂಪೇಶ್ ಶೆಟ್ಟಿ ನಿರೂಪಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಗುರ್ಮೆ ಸುರೇಶ್ ಶೆಟ್ಟಿಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರಕಾಶಾಭಿನಂದನ ಸಮಿತಿ ಮಂಗಳೂರು ಸಂತೋಷ್ ವಿ ಶೆಟ್ಟಿ ಪುಣೆ, ಜಯಕರ ಶೆಟ್ಟಿ ಇಂದ್ರಾಳಿ ಪ್ರಧಾನ ಕಾರ್ಯದರ್ಶಿ, ಸುರೇಶ್ ಶೆಟ್ಟಿ ಪಡುಬಿದ್ರೆ ಕೋಶಾಧಿಕಾರಿ, ಸುರೇಶ್ಚಂದ್ರ ಶೆಟ್ಟಿ ಸಂಚಾಲಕರು ದ.ಕ ಜಿಲ್ಲೆ, ಮನೋಹರ ಎಸ್ ಶೆಟ್ಟಿ ಸಂಚಾಲಕರು ಉಡುಪಿ ಜಿಲ್ಲೆ, ಪುರುಷೋತ್ತಮ ಪಿ ಶೆಟ್ಟಿ, ಜಿ. ಸುಧೀರ್ ಹೆಗ್ಡೆ ಬೈಲೂರು, ಅರವಿಂದ ಪೂಂಜ ಮುಲ್ಕಿ, ನಿಟ್ಟೆ ರವಿರಾಜ್ ಶೆಟ್ಟಿ ಉಪಾಧ್ಯಕ್ಷರು,ಐಕಳ ಹರೀಶ್ ಶೆಟ್ಟಿ ,ಸುರೇಶ್ ಶೆಟ್ಟಿ ಪಡುಬಿದ್ರಿ,ಜಗನ್ನಾಥ್ ಶೆಟ್ಟಿ ಬಾಳ ಪ್ರಚಾರ ಸಮಿತಿ ಸಂಚಾಲಕ, ನಿತೇಶ್ ಶೆಟ್ಟಿ ಎಕ್ಕಾರ್,  ಉಪಸ್ಥಿತಿತರಿದ್ದರು.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago