Featured

ಡಿ.ಕೆ. ಶಿವಕುಮಾರ್ ಯುವ ಕಾಂಗ್ರೆಸ್ ನಾಯಕರ ಪಾಲಿಗೆ ನೆಚ್ಚಿನ ರಾಜಕೀಯ ಗುರು , ಕಾಂಗ್ರೆಸಿನ ಆಶಾಕಿರಣ , ಡಿಕೆಶಿ ನೇತೃತ್ವದಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತಾಗಲಿ : ಅಶೋಕ್ ಕುಮಾರ್ ಕೊಡವೂರು -Vishwanews24

ಡಿ.ಕೆ. ಶಿವಕುಮಾರ್ ಯುವ ಕಾಂಗ್ರೆಸ್ ನಾಯಕರ ಪಾಲಿಗೆ ನೆಚ್ಚಿನ ರಾಜಕೀಯ ಗುರು , ಕಾಂಗ್ರೆಸಿನ ಆಶಾಕಿರಣ , ತನ್ನ ಹೋರಾಟದ ಮೂಲಕವೇ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಪಣತೊಟ್ಟಿದ್ದಾರೆ : ಅಶೋಕ್ ಕುಮಾರ್ ಕೊಡವೂರು -Vishwanews24

ಡಿಕೆಶಿ ನೇತೃತ್ವದಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತಾಗಲಿ, ಪಕ್ಷ ತಳಮಟ್ಟದಿಂದ ಬೆಳೆಯಲಿ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾದ ನಂತರ ಮೊತ್ತ ಮೊದಲ ಬಾರಿಗೆ ಉಡುಪಿಗೆ ಭೇಟಿ ನೀಡುತ್ತಿರುವ ಡಿ.ಕೆ. ಶಿವಕುಮಾರ್‌ರವರು ಓರ್ವ ನಿಷ್ಠಾವಂತ ಕಾಂಗ್ರೆಸ್ಸಿಗರಾಗಿದ್ದು ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿಯೂ ಕಾಂಗ್ರೆಸ್ ಪಾಲಿಗೆ ಟ್ರಬಲ್ ಶೂಟರ್ ಎಂದೇ ಖ್ಯಾತರಾದವರು.

ಪಕ್ಷವು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲೆಲ್ಲಾ ತನ್ನ ಹಿತವನ್ನು ಬದಿಗಿರಿಸಿ ಪಕ್ಷವನ್ನು ಗೆಲುವಿನ ಪಥದತ್ತ ಮುನ್ನಡೆಸುವ ಧೀಮಂತ ವ್ಯಕ್ತಿತ್ವ ಇವರದ್ದು. ಅಧಿಕಾರ ಇರಲಿ ಇಲ್ಲದಿರಲಿ ಡಿ.ಕೆ. ಶಿವಕುಮಾರ್ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿರುತ್ತಾರೆ. ತನ್ನ ಮೂರುವರೆ ದಶಕಗಳ ರಾಜಕೀಯ ಜೀವನದುದ್ದಕ್ಕೂ ಪಕ್ಷವಹಿಸಿದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದ ಶ್ರೇಯಸ್ಸು ಇವರದ್ದಾಗಿದೆ. ಕಾಂಗ್ರೆಸ್ ಮಟ್ಟಿಗೆ ಡಿಕೆಶಿಯವರು ಎಂದೆಂದೂ ಆಪದ್ಬಾಂದರೆನ್ನಬೇಕು.

ರಾಜ್ಯದ ಕರಾವಳಿ ಪ್ರದೇಶ ಕಾಂಗ್ರೆಸ್ ಪಕ್ಷದ ಭದ್ರ ಬುನಾದಿಯ ನೆಲೆಯಾಗಿತ್ತು ನಾನಾ ಕಾರಣಗಳಿಂದ ಕರಾವಳಿ ಭಾಗದಲ್ಲಿ ಕಾಂಗ್ರೆಸ್‌ನ ಹಿಡಿತ ಕಡಿಮೆಯಾಗತೊಡಗಿತು. ಕರಾವಳಿಯಲ್ಲಿ ಸಾಮರಸ್ಯ ಮೂಡಿಸುವುದರೊಂದಿಗೆ ಮತ್ತೆ ಕಾಂಗ್ರೆಸ್ ಪಕ್ಷವನ್ನು ಗತಕಾಲದ ಉಚ್ಚ್ರಾಯ ಸ್ಥಿತಿಗೆ ಕೊಂಡೊಯ್ಯುವ ಅವಶ್ಯಕತೆಯಿದೆ. ಇದೀಗ ರಾಜ್ಯದ ಚುಕ್ಕಾಣಿಯನ್ನು ಡಿಕೆಶಿ ವಹಿಸಿಕೊಳ್ಳುವ ಮೂಲಕ ಮತ್ತೆ ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿದೆ. ಕಾರ್ಯಕರ್ತರು ಹಾಗೂ ನಾಯಕರ ನಡುವೆ ಕ್ಷೀಣಿಸುವ ಬಾಂಧವ್ಯವನ್ನು ವೃದ್ದಿಸುವ ಸಾಮರ್ಥ್ಯ ಡಿಕೆಶಿ ಅವರಿಗಿದೆ.

ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಡಿ.ಕೆ. ಶಿವಕುಮಾರ್ ಹೊಂದಿರುವ ಸಂಪರ್ಕ ಹಾಗೂ ಅವರು ಗಳಿಸಿದ ಸಾಮರ್ಥ್ಯ ಒಂದು ದಿನದ ಸಾಧನೆಯೇನಲ್ಲ. ವಿದ್ಯಾರ್ಥಿ ದೆಸೆಯಲ್ಲಿದ್ದ ವೇಳೆ ಅವರು ರೂಡಿಸಿಕೊಂಡ ನಾಯಕತ್ವ ಗುಣ ಹಾಗೂ ಕಾರ್ಯಕರ್ತರಾಗಿದ್ದ ಕಾಲದಿಂದಲೂ ತೋರಿದ ಪಕ್ಷ ನಿಷ್ಠೆಯ ಫಲವಾಗಿ ಡಿಕೆಶಿಯವರಿಗೆ ಪಕ್ಷದ ಅಧ್ಯಕ್ಷಗಾಧಿ ಸಿದ್ಧಿಸಿದೆ. ಶ್ರೀಯುತರು ರಾಜ್ಯಾಧ್ಯಕ್ಷರಾಗಿ ನೇಮಕವಾಗುತ್ತಿದ್ದಂತೆ ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ರಾಷ್ಟ್ರೀಯ ನಾಯಕರವರೆಗೂ ಅವರ ನಾಯಕತ್ವದ ಬಗ್ಗೆ ವಿಶ್ವಾಸ ಮೂಡಿದೆ. ಯುವ ಕಾರ್ಯಕರ್ತರ ಸಮೂಹದಲ್ಲೂ ಹೊಸ ಸಂಚಲನ ಆವರಿಸಿದೆ.

ಓರ್ವ ನಿಷ್ಟಾವಂತ ಕಾರ್ಯಕರ್ತನನ್ನು ಒಮ್ಮೆ ಡಿಕೆಶಿಯವರು ಗುರುತಿಸಿದರೆ ಆತ ನಾಯಕನಾಗುವುದು ಖಚಿತ. ಆತನ ಸಾಮರ್ಥ್ಯಕ್ಕೆ ಅನುಗುಣವಾಗಿ ಆತನನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ಆತನಿಗೆ ಜವಾಬ್ದಾರಿ ಹಾಗೂ ಅಧಿಕಾರವನ್ನು ನೀಡುತ್ತಾರೆ. ಇದರಿಂದಾಗಿಯೇ ಯುವ ಕಾಂಗ್ರೆಸ್ ನಾಯಕರ ಪಾಲಿಗೆ ನೆಚ್ಚಿನ ರಾಜಕೀಯ ಗುರು ಎಂದೇ ಗುರುತಿಸಿಕೊಂಡಿದ್ದಾರೆ.

ಕಾಂಗ್ರೆಸ್‌ನ ಆಶಾಕಿರಣ
ಗ್ರಾಮ ಪಂಚಾಯಿತಿನಿಂದ ಹಿಡಿದು ಲೋಕಸಭಾ ಚುನಾವಣೆಗಳವರೆಗೆ ಡಿ.ಕೆ. ಶಿವಕುಮಾರ್‌ರವರು ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿಯೂ ಅಗ್ರಗಣ್ಯ ಪ್ರಚಾರಕ, ತನ್ನ ಹೋರಾಟದ ಮೂಲಕವೇ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಪಣತೊಟ್ಟಿದ್ದಾರೆ. ಕಾಂಗ್ರೆಸಿನ ಆಶಾಕಿರಣವೂ ಹೌದು.
ಈ ಸಂದಿಗ್ಧ ಕಾಲ ಘಟ್ಟದಲ್ಲಿ ಕಾಂಗ್ರೆಸ್ ಹೈಕಮಾಂಡ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಿದೆ. ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿ ನೇಮಕವಾಗಿನಿಂದಲೇ ಪಕ್ಷದ ಸಂಘಟನೆಯ ಕೆಲಸ ಕಾರ್ಯಗಳನ್ನು ಡಿಕೆಶಿಯವರು ಆರಂಭಿಸಿದ್ದು ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟವನ್ನು ನಡೆಸುತ್ತಲೇ ಬಂದಿದ್ದಾರೆ. ತಳಮಟ್ಟದಿಂದಲೇ ಕಾಂಗ್ರೆಸ್ ಬೇರುಗಳನ್ನು ಮತ್ತೆ ಗಟ್ಟಿ ಮಾಡಲು ಹೊರಟಿದ್ದಾರೆ ಮಾತ್ರವಲ್ಲದೆ ಹಿರಿಯ ನಾಯಕರನ್ನು ಮುಖತಃ ಭೇಟಿಯಾಗಿ ಅವರ ಆಶಿರ್ವಾದದೊಂದಿದೆ ಪಕ್ಷ ಸಂಘಟನೆಯ ಸಲಹೆ ಸೂಚನೆಗಳನ್ನು ಪಡೆಯುತ್ತಿದ್ದಾರೆ. ಡಿಕೆಶಿಯವರ ಈ ನಡೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಆಶಾವಾದ ಮೂಡಿಸಿದೆ.

ರಾಜ್ಯದಲ್ಲಿ ಪ್ರಥಮ ಬಾರಿಗೆ ಡಿಜಿಟಲ್ ತಂತ್ರಜ್ಞಾನ ಬಳಸಿ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿರುವ ಡಿ.ಕೆ. ಶಿವಕುಮಾರ್‌ರವರ ಅಧ್ಯಕ್ಷ ಅವಧಿಯಲ್ಲಿ ಪಕ್ಷ ಸಮರ್ಥವಾಗಿ ಸಂಘಟನೆಯಾಗಲಿದ್ದು. ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಮುಂದಿನ ದಿನಗಳಲ್ಲಿ ಡಿಕೆಶಿ ನೇತೃತ್ವದಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತಾಗಲಿ, ಪಕ್ಷ ತಳಮಟ್ಟದಿಂದ ಬೆಳೆಯಲಿ ಎಂಬುದೇ ನಮ್ಮ ಹಾರೈಕೆ.

ಅಶೋಕ್ ಕುಮಾರ್ ಕೊಡವೂರು, ಅಧ್ಯಕ್ಷರು – ಜಿಲ್ಲಾ ಕಾಂಗ್ರೆಸ್ ಸಮಿತಿ

Vishwa News 24

Recent Posts

ಉಡುಪಿ: ನೂತನ ಸಚಿವ ಸಂಪುಟದಲ್ಲಿ ಮಂಜುನಾಥ ಭಂಡಾರಿಗೆ ಸಚಿವ ಸ್ಥಾನ ನೀಡಲು ಆಗ್ರಹ – vishwanews24

ನೂತನ ಸಚಿವ ಸಂಪುಟದಲ್ಲಿ ಮಂಜುನಾಥ ಭಂಡಾರಿಗೆ ಸಚಿವ ಸ್ಥಾನ ನೀಡಲು ಆಗ್ರಹ ಉಡುಪಿ: ನೂತನ ಸಚಿವ ಸಂಪುಟದಲ್ಲಿ ವಿಧಾನ ಪರಿಷತ್…

8 hours ago

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ : ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಕಾರ್ಯದರ್ಶಿಗೆ ಪತ್ರ ಹಸ್ತಾಂತರ – vishwanews24

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ : ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಕಾರ್ಯದರ್ಶಿಗೆ ಪತ್ರ ಹಸ್ತಾಂತರ ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು…

9 hours ago

ಯಕ್ಷಗಾನ ಕಲಾವಿದನ ತಾಯಿಗೆ ನಿಂದನೆ ಆರೋಪ : ತಿಮರೋಡಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು – vishwanews24

ಯಕ್ಷಗಾನ ಕಲಾವಿದನ ತಾಯಿಗೆ ನಿಂದನೆ ಆರೋಪ : ತಿಮರೋಡಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಬೆಂಗಳೂರು: ಯಕ್ಷಗಾನ ಕಲಾವಿದ ದಿನೇಶ್…

10 hours ago

ಅಂದು, ಇಂದು, ಎಂದೆಂದಿಗೂ ಒಗ್ಗಟ್ಟೇ ನಮ್ಮ ಶಕ್ತಿ : ಕಾಂಗ್ರೆಸ್ ಟ್ವೀಟ್ – vishwanews24

ಅಂದು, ಇಂದು, ಎಂದೆಂದಿಗೂ ಒಗ್ಗಟ್ಟೇ ನಮ್ಮ ಶಕ್ತಿ ; ಜನಸೇವೆಯೇ ನಮ್ಮ ಬದ್ಧತೆ : ಕಾಂಗ್ರೆಸ್ ಟ್ವೀಟ್ ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ…

11 hours ago

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್: ಸಭೆಯಲ್ಲಿ ಸಿದ್ದರಾಮಯ್ಯ ಘೋಷಣೆ – vishwanews24

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್: ಸಭೆಯಲ್ಲಿ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ಹೈಕಮಾಂಡ್‌ ಹೇಳಿದಂತೆ ನಡೆಯುತ್ತಿದ್ದೇನೆ. ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಂದು ಬ್ರೇಕ್‌ಫಾಸ್ಟ್‌…

12 hours ago

DCM ಹುದ್ದೆ ಸೇರಿ ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ : ಸಚಿವ ಝಮೀರ್ ಅಹಮ್ಮದ್ – vishwanews24

DCM ಹುದ್ದೆ ಸೇರಿ ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ : ಸಚಿವ ಝಮೀರ್ ಅಹಮ್ಮದ್ ಬೆಂಗಳೂರು: ‘ಉಪಮುಖ್ಯಮಂತ್ರಿ ಸ್ಥಾನವೂ…

12 hours ago