Featured

ಡಿ.1ರಿಂದ ಹೆಜಮಾಡಿ ಟೋಲ್ ಗೇಟ್ ನೊಂದಿಗೆ ಸುರತ್ಕಲ್ ಟೋಲ್ ವಿಲೀನ  ; ಹೆಜಮಾಡಿ  ಟೋಲ್ ಸುಂಕ ದುಬಾರಿ – Vishwanews24

ಡಿ.1ರಿಂದ ಹೆಜಮಾಡಿ ಟೋಲ್ ಗೇಟ್ ನೊಂದಿಗೆ ಸುರತ್ಕಲ್ ಟೋಲ್ ವಿಲೀನ  ; ಹೆಜಮಾಡಿ  ಟೋಲ್ ಸುಂಕ ದುಬಾರಿ

ಮಂಗಳೂರು: ಸುರತ್ಕಲ್ ಟೋಲ್ ಗೇಟ್ ನ್ನು, ಡಿ.1ರಿಂದ ಹೆಜಮಾಡಿ ಟೋಲ್ ಗೇಟ್ ನೊಂದಿಗೆ ವಿಲೀನ ಮಾಡುವಂತೆ ಸರಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೆಜಮಾಡಿಯಲ್ಲಿ ಟೋಲ್ ಗೇಟ್ ಶುಲ್ಕ ಪರಿಷ್ಕೃರಿಸಿದೆ.ಹೀಗಾಗಿ ನಿರೀಕ್ಷೆಯಂತೆ ಹೆಜಮಾಡಿಯಲ್ಲಿ ಸುಂಕ ದುಬಾರಿಯಾಗಲಿದೆ.

ಹೆಜಮಾಡಿ ಟೋಲ್ ಗೇಟ್‌ನಲ್ಲಿ ಟೋಲ್ ಸಂಗ್ರಹಕ್ಕೆ ಯಾವುದೇ ಅಡ್ಡಿ ಅಥವಾ ತೊಂದರೆ ನೋಡಿಕೊಳ್ಳಬೇಕು ಮತ್ತು ಒಂದು ವೇಳೆ ಹೆಜಮಾಡಿಯಲ್ಲಿ ವಿಲೀನದ ಬಳಿಕ ಏರಿಕೆಯಾದ ಸುಂಕದ ಬಳಿಕ ಯಾವುದೇ ಸಮಸ್ಯೆಯಾಗಿ ಟೋಲ್‌ ಸಂಗ್ರಹದಲ್ಲಿ ವ್ಯತ್ಯಯ ಉಂಟಾದರೆ ಎನ್‌ಎಚ್‌ಎಐ ಜತೆಗಿನ ರಾಜ್ಯ ಸಹಕಾರ ಒಪ್ಪಂದದಂತೆ ನಷ್ಟವನ್ನು ರಾಜ್ಯವೇ ಭರಿಸಬೇಕುಎಂದು ಎನ್‌ಎಚ್‌ಎಐ ಆದೇಶದಲ್ಲಿ ಹೇಳಲಾಗಿದೆ.

ಇದಲ್ಲದೆ ಇದುವರೆಗೆ ಸುರತ್ಕಲ್‌ ಟೋಲ್‌ಗೇಟ್‌ನಲ್ಲಿ ಕೆಎ 19 ನೋಂದಣಿಯ ಕಾರುಗಳಿಗೆ ಇದ್ದ ರಿಯಾಯಿತಿ ರದ್ದಾಗಲಿದೆ.

ಪರಿಷ್ಕೃತ ಟೋಲ್ ಶುಲ್ಕ ಇಂತಿದೆ:

ಏಕಮುಖ ಸಂಚಾರ : ಜೀಪ್, ವ್ಯಾನ್ ಅಥವಾ ಲಘು ಮೋಟಾರು ವಾಹನ:ಸುರತ್ಕಲ್ ನಲ್ಲಿ 60 ರೂ., ಹೆಜಮಾಡಿಯಲ್ಲಿ 40 ರೂ., ಹೆಜಮಾಡಿಯಲ್ಲಿ ಪರಿಷ್ಕೃತ ಟೋಲ್ ಶುಲ್ಕ 100 ರೂ.

ಲಘು ವಾಣಿಜ್ಯ ವಾಹನ ,ಲಘು ಸರಕು ವಾಹನ ಅಥವಾ ಮಿನಿ ಬಸ್: ಸುರತ್ಕಲ್ ನಲ್ಲಿ ರೂ 100 ಮತ್ತು ಹೆಜಮಾಡಿಯಲ್ಲಿ ರೂ 70, ಹೆಜಮಾಡಿಯ ಪರಿಷ್ಕೃತ ಟೋಲ್ ಶುಲ್ಕ 170 ರೂ.

ಬಸ್ ಅಥವಾ ಟ್ರಕ್ (2 ಆಕ್ಸೆಲ್‌ಗಳು)ಸುರತ್ಕಲ್ ನಲ್ಲಿ ರೂ 210 ಮತ್ತು ಹೆಜಮಾಡಿಯಲ್ಲಿ ರೂ 145, ಹೆಜಮಾಡಿ ಪರಿಷ್ಕೃತ ಟೋಲ್ ಶುಲ್ಕ355ರೂ.

ಭಾರೀ ಕನ್ಸ್ಟ್ರಕನ್ ಮೆಶಿನರಿ ಅಥವಾ ಮಲ್ಟಿ ಆಕ್ಸಲ್ ವಾಹನ ಮೂರರಿಂದ ಆರು ಆಕ್ಸೆಲ್‌ಗಳುಸುರತ್ಕಲ್ ನಲ್ಲಿ 325 ರೂ., ಹೆಜಮಾಡಿಯಲ್ಲಿ 225 ರೂ., ಪರಿಷ್ಕೃತ ಶುಲ್ಕ 550 ರೂ.

ಏಳು ಅಥವಾ ಹೆಚ್ಚಿನ ಆಕ್ಸೆಲ್‌ಗಳ ಭಾರೀ ಗಾತ್ರದ ವಾಹನಸುರತ್ಕಲ್ ನಲ್ಲಿ 400 ರೂ., ಹೆಜಮಾಡಿಯಲ್ಲಿ 275 ರೂ., ಪರಿಷ್ಕೃತ ಶುಲ್ಕ 675 ರೂ.

ದ್ವಿಮುಖ ಸಂಚಾರ: ಜೀಪ್, ವ್ಯಾನ್ ಅಥವಾ ಲಘು ಮೋಟಾರು ವಾಹನ ಸುರತ್ಕಲ್ ನಲ್ಲಿ 90 ರೂ., ಹೆಜಮಾಡಿಯಲ್ಲಿ 65 ರೂ., ಹೆಜಮಾಡಿಯಲ್ಲಿ ಪರಿಷ್ಕೃತ ಟೋಲ್ ಶುಲ್ಕ 155 ರೂ.

ಲಘು ವಾಣಿಜ್ಯ ವಾಹನ ಲಘು ಸರಕು ವಾಹನ ಅಥವಾ ಮಿನಿ ಬಸ್ ಸುರತ್ಕಲ್ ನಲ್ಲಿ ರೂ 150 ಮತ್ತು ಹೆಜಮಾಡಿಯಲ್ಲಿ ರೂ 100, ಹೆಜಮಾಡಿ 250 ರಲ್ಲಿ ಪರಿಷ್ಕೃತ ಟೋಲ್ ಶುಲ್ಕ

ಬಸ್ ಅಥವಾ ಟ್ರಕ್ (2 ಆಕ್ಸೆಲ್‌ಗಳು)ಸುರತ್ಕಲ್ ನಲ್ಲಿ 310 ರೂ., ಹೆಜಮಾಡಿಯಲ್ಲಿ 215 ರೂ., ಹೆಜಮಾಡಿಯಲ್ಲಿ ಪರಿಷ್ಕೃತ ಟೋಲ್ ಶುಲ್ಕ 525 ರೂ.

ಭಾರೀ ನಿರ್ಮಾಣ ಯಂತ್ರಗಳು ಅಥವಾ ಭೂಮಿ ಚಲಿಸುವ ಉಪಕರಣಗಳು ಅಥವಾ ಮಲ್ಟಿ ಆಕ್ಸಲ್ ವಾಹನ ಮೂರರಿಂದ ಆರು ಆಕ್ಸೆಲ್‌ಗಳು ಸುರತ್ಕಲ್ ನಲ್ಲಿ 490 ರೂ., ಹೆಜಮಾಡಿಯಲ್ಲಿ 335 ರೂ., ಪರಿಷ್ಕೃತ ಶುಲ್ಕ 825 ರೂ.

ಭಾರೀ ಗಾತ್ರದ ವಾಹನ ಏಳು ಅಥವಾ ಹೆಚ್ಚಿನ ಆಕ್ಸೆಲ್‌ಗಳು ಸುರತ್ಕಲ್ ನಲ್ಲಿ 595 ರೂ., ಹೆಜಮಾಡಿಯಲ್ಲಿ 410 ರೂ., ಪರಿಷ್ಕೃತ ಶುಲ್ಕ 1,005 ರೂ.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

2 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

3 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

3 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

3 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

3 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

3 days ago