Featured

ಡಿ. 1 ರಿಂದ ಹೊಸ ಸಿಮ್ ಕಾರ್ಡ್ ನಿಯಮ ಜಾರಿ ; ಇನ್ನು  ಮುಂದೆ ಈ ನಿಯಮ ಅನುಸರಿಸುವುದು ಅಗತ್ಯ – vishwanews24

ಡಿಸೆಂಬರ್ 1 ರಿಂದ ಹೊಸ ಸಿಮ್ ಕಾರ್ಡ್ ನಿಯಮ ಜಾರಿ, ಏನಿದು?

ಸಿಮ್‌ ಮಾರಾಟಗಾರರು ಮತ್ತು ಖರೀದಿದಾರರು ಇನ್ನು  ಮುಂದೆ ಈ ನಿಯಮ ಅನುಸರಿಸುವುದು ಅಗತ್ಯ..

ದೇಶದಲ್ಲಿ ಸಿಮ್‌ ಕಾರ್ಡ್‌ಗಳನ್ನು ಬಳಸಿ ನಡೆಸುತ್ತಿರುವ ವಂಚನೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಮ್‌ಗಳ ಖರೀದಿ ಮತ್ತು ಮಾರಾಟಕ್ಕೆ ಸರ್ಕಾರ ಕೆಲ ನಿರ್ಬಂಧಗಳನ್ನು ವಿಧಿಸಿದೆ. ಅಲ್ಲದೇ, ನಿಯಮಗಳನ್ನೂ ಕಠಿಣಗೊಳಿಸಿದೆ. ದೂರಸಂಪರ್ಕ ಇಲಾಖೆಯು ಈ ಸಂಬಂಧಿಸಿದಂತೆ ರೂಪಿಸಿರುವ ನಿಯಮಗಳನ್ನು ಡಿಸೆಂಬರ್‌ 1 ರಿಂದ ಜಾರಿಗೊಳಿಸಲಾಗುತ್ತಿದೆ. ಸಿಮ್‌ ಮಾರಾಟಗಾರರು ಮತ್ತು ಖರೀದಿದಾರರು ಇನ್ನುಮುಂದೆ ಈ ನಿಯಮಗಳನ್ನು ಅನುಸರಿಸುವುದು ಅಗತ್ಯವಾಗಿದೆ.

ಹೊಸ ನಿಯಮಗಳಿವು

ಸಮಗ್ರ ಪರಿಶೀಲನೆ ಕಡ್ಡಾಯ: ಸಿಮ್‌ ಕಾರ್ಡ್‌ಗಳನ್ನು ಮಾರಾಟ ಮಾಡುವವರು ಸಮಗ್ರ ಪರಿಶೀಲನೆಗೆ ಒಳಪಡುವ ಅಗತ್ಯವಿದೆ. ಪೊಲೀಸ್‌ ಪರಿಶೀಲನೆ ಜವಾಬ್ದಾರಿಯನ್ನು ಆಯಾ ಟೆಲಿಕಾಮ್‌ ಸಂಸ್ಥೆಗಳು ವಹಿಸಿಕೊಳ್ಳಬೇಕಿದೆ. ಅಲ್ಲದೇ, ಸಿಮ್‌ ಮಾರಾಟ ಮಾಡಿದ ಕ್ಷಣವೇ ನೋಂದಣಿಯನ್ನೂ ಮಾಡಬೇಕಿದ್ದು ಈ ನಿಯಮ ಪಾಲನೆಯಲ್ಲಿ ವಿಫ‌ಲರಾದರೆ 10 ಲಕ್ಷ ರೂ.ಗಳ ದಂಡ ಪಾವತಿಸಬೇಕಾಗುತ್ತದೆ.

ಆಧಾರ್‌ ಸಲ್ಲಿಕೆ: ಅಸ್ತಿತ್ವದಲ್ಲಿರುವ ಮೊಬೈಲ್‌ ಸಂಖ್ಯೆಗೆ ನೂತನ ಸಿಮ್‌ ಕಾರ್ಡ್‌ ಪಡೆಯುವ ಗ್ರಾಹಕರು ಕೂಡ ಆಧಾರ್‌ ಕಾರ್ಡ್‌ ಮತ್ತು ಬಯೋಮೆಟ್ರಿಕ್‌ ಸಲ್ಲಿಸುವುದು ಕಡ್ಡಾಯವಾಗಿದೆ.

ಖರೀದಿಗೆ ಮಿತಿ: ವಾಣಿಜ್ಯ ಉದ್ದೇಶಕ್ಕಾಗಿ ವ್ಯವಹಾರ ಸಂಪರ್ಕದ ಮೂಲಕ ಮಾತ್ರವೇ ವ್ಯಕ್ತಿಗಳು ದೊಡ್ಡ ಪ್ರಮಾಣದಲ್ಲಿ ಸಿಮ್‌ ಕಾರ್ಡ್‌ಗಳನ್ನು ಖರೀದಿಸಬಹುದು. ಅದರ ಹೊರತಾಗಿ ಒಬ್ಬ ವ್ಯಕ್ತಿಯು ತನ್ನ ಐಡಿ ಕಾರ್ಡ್‌ ಆಧಾರದ ಮೇಲೆ ಕೇವಲ 9 ಸಿಮ್‌ಗಳನ್ನು ಮಾತ್ರ ಖರೀದಿಸಬಹುದೆಂಬ ಮಿತಿಯನ್ನು ವಿಧಿಸಲಾಗಿದೆ.

90 ದಿನದ ಅವಧಿ: ಸಿಮ್‌ ಕಾರ್ಡ್‌ ಒಂದು ನಿಷ್ಕ್ರಿಯಗೊಂಡ ತಕ್ಷಣ ಅದೇ ನಂಬರ್‌ ಅನ್ನು ಬೇರೆ ಯಾರಿಗೋ ಹಂಚಿಕೆ ಮಾಡುವಂತಿಲ್ಲ. ಸಿಮ್‌ ನಿಷ್ಕ್ರಿಯಗೊಂಡ 90 ದಿನಗಳ ಒಳಗೆ ಅದೇ ವ್ಯಕ್ತಿ ಬೇಕಿದ್ದರೆ ನವೀಕರಣ ಮಾಡಿಕೊಳ್ಳುವ ಅವಕಾಶವಿದೆ. ಅವಧಿ ಮೀರಿದ ಬಳಿಕ ಬೇಕಿದ್ದರೆ ಮತ್ತದೇ ಸಂಖ್ಯೆಯ ಹಂಚಿಕೆಗೆ ಅವಕಾಶವಿದೆ.

ಇಂದೇ ಕೊನೆ ಅವಕಾಶ: ಸಿಮ್‌ ಕಾರ್ಡ್‌ಗಳನ್ನು ಮಾರಾಟ ಮಾಡುವವರು ಮಾರಾಟಗಾರರ ಸಾಲಿನಲ್ಲಿ ನೋಂದಾಯಿಸಿಕೊಂಡಿರಬೇಕಾಗುತ್ತದೆ. ನವೆಂಬರ್‌ 30 ನೋಂದಣಿಗೆ ಕಡೆಯ ದಿನವಾಗಿದ್ದು ಆ ಬಳಿಕವೂ ನೋಂದಣಿ ಮಾಡಿಕೊಳ್ಳದೇ ಸಿಮ್‌ ಮಾರಾಟ ಮಾಡಿದರೆ ಅಂಥವರು 10 ಲಕ್ಷ ರೂ. ದಂಡಕ್ಕೆ ಗುರಿಯಾಗಲಿದ್ದಾರೆ.

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

18 hours ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

19 hours ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

19 hours ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

20 hours ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

20 hours ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

20 hours ago