ಉಡುಪಿ: ಸೌರವ್ಯೂಹದ ಎರಡು ಬೃಹತ್ ಗ್ರಹಗಳಾದ ಗುರು ಮತ್ತು ಶನಿ ಡಿಸೆಂಬರ್ ತಿಂಗಳಿನಲ್ಲಿ ಬಹಳ ಸಮೀಪವಿದ್ದಂತೆ ಕಾಣುತ್ತವೆ. ಸಂಜೆಯ ಪಶ್ಚಿಮ ಆಕಾಶದಲ್ಲಿ ಜೋಡಿ ಗ್ರಹಗಳು ಆಕರ್ಷಣೀಯವಾಗಿ ಕಾಣುತ್ತವೆ ಎಂದು ಪೂರ್ಣಪ್ರಜ್ಞ ಅಮೆಚೂರ್ ಆಸ್ಟ್ರೋನಾಮರ್ಸ್ ಕ್ಲಬ್ನ ಸಂಸ್ಥಾಪಕ ಸಹ ಸಂಚಾಲಕ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.
ಗುರುಗ್ರಹವು ಸೂರ್ಯನನ್ನು ಒಮ್ಮೆ ಸುತ್ತಲು 11.9 ವರ್ಷ ಬೇಕಾಗುತ್ತದೆ. ಶನಿಗ್ರಹಕ್ಕೆ 29.5 ವರ್ಷಗಳು ಬೇಕಾಗುತ್ತದೆ. ಪ್ರತಿ 20 ವರ್ಷಕ್ಕೊಮ್ಮೆ ಈ ಎರಡು ಗ್ರಹಗಳು ಸಮೀಪದಲ್ಲಿ ಕಾಣುತ್ತವೆಯಾದರೂ ಈ ಸಲ ಹೆಚ್ಚು ಸಮೀಪದಲ್ಲಿ ಕಾಣುತ್ತಿವೆ. ಡಿಸೆಂಬರ್ನಲ್ಲಿ ಎರಡೂ ಗ್ರಹಗಳು ಪ್ರತಿದಿನ ಹತ್ತಿರಕ್ಕೆ ಬಂದು 21ರಂದು ಕನಿಷ್ಠ ಅಂತರಕ್ಕೆ ಬರಲಿವೆ.
ಹಿಂದೆ 1,226, ಮಾರ್ಚ್ 4ರಂದು ಗುರು ಹಾಗೂ ಶನಿ ತೀರಾ ಹತ್ತಿರಕ್ಕೆ ಬಂದಿದ್ದವರು. ಮುಂದೆ, 2,080 ಹಾಗೂ 2,400ರಲ್ಲಿ ಈ ಗ್ರಹಮಗಳು ಮತ್ತೆ ಸಮೀಪದಲ್ಲಿ ಕಾಣಲಿವೆ. ಇದೊಂದು ಅಪರೂಪದ ಆಕಾಶದ ವಿದ್ಯಮಾನ ಎಂದು ಎ.ಪಿ.ಭಟ್ ತಿಳಿಸಿದ್ದಾರೆ.
ಗುರು ಗ್ರಹವು ಭೂಮಿಯಿಂದ ಸುಮಾರು 89 ಕೋಟಿ ಕಿ.ಮೀ. ದೂರದಲ್ಲಿದೆ. ಶನಿ ಗ್ರಹವು ಗುರು ಗ್ರಹದಿಂದ ಅಷ್ಟೇ ಆಳದಲ್ಲಿದೆ. ಅಂದರೆ ಭೂಮಿಯಿಂದ ಸುಮಾರು 159 ಕೋಟಿ ಕಿ.ಮೀ. ದೂರದಲ್ಲಿದೆ. ಆದರೂ, ಭೂಮಿಯಿಂದ ನೋಡುವಾಗ ಸಮೀಪ ಬಂದಂತೆ ಭಾಸವಾಗುತ್ತವೆ. ಇದೂ ಆಕಾಶದಲ್ಲಿ ನಡೆಯುವ ಚಮತ್ಕಾರ. ಖಗೋಳ ಆಸಕ್ತರು ಇದನ್ನು ನೋಡಿ ಆನಂದಿಸಬೇಕು ಎನ್ನುತ್ತಾರೆ ಎ.ಪಿ.ಭಟ್ ಅವರು.
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…