Featured

ತಂದೆಯ ಕನಸನ್ನು ಬೆನ್ನಟ್ಟಿ ಸಾಗಿದ ಕುಡ್ಲದ ಹುಡುಗಿ ; ಏರ್‌ಫೋರ್ಸ್‌ಗೆ ಆಯ್ಕೆಯಾದ ರಾಜ್ಯದ ಏಕೈಕ ಧೀರೆ ಮನಿಷಾ – VIshwanews24

ತಂದೆಯ ಕನಸನ್ನು ನನಸಾಗಿಸಿ , ಏರ್‌ಫೋರ್ಸ್‌ಗೆ ನೆಗೆದ ಕುಡ್ಲದ ಧೀರೆ ; ರಾಜ್ಯದಿಂದ ಆಯ್ಕೆಯಾದ ಏಕೈಕ ಯುವತಿ ಮನಿಷಾ – VIshwanews24

ಮಂಗಳೂರು: ಭಾರತೀಯ ಸೇನೆಗೆ ಸೇರಬೇಕು, ದೇಶ ಸೇವೆ ಮಾಡಬೇಕು ಎಂಬ ತಂದೆಯ ಕನಸನ್ನು ಬೆನ್ನಟ್ಟಿ ಸಾಗಿದ ಕುಡ್ಲದ ಹುಡುಗಿ ಮನಿಷಾ ಕೊನೆಗೂ ಕನಸು ನನಸಾಗಿಸಿದ್ದಾಳೆ. ಈ ಮೂಲಕ ಫ್ಲೈಯಿಂಗ್‌ ಬ್ರ್ಯಾಂಚ್‌ಗೆ ಆಯ್ಕೆಯಾದ ರಾಜ್ಯದ ಏಕೈಕ ಧೀರೆ ಎಂಬ ಹೆಗ್ಗಳಿಕೆ ಮಾತ್ರರಾಗಿದ್ದಾರೆ.

ಅಶೋಕನಗರ ನಿವಾಸಿ ಭಾರತೀಯ ಸ್ಟೇಟ್‌ಬ್ಯಾಂಕ್‌ನ ನಿವೃತ್ತ ಅಧಿಕಾರಿ ಮನೋಹರ ಶೆಟ್ಟಿ ಮತ್ತು ಸರಕಾರಿ ಶಾಲೆ ಮುಖ್ಯೋಪಾಧ್ಯಾಯಿನಿ ಮಾಲತಿ ಶೆಟ್ಟಿ ದಂಪತಿಯ ಪುತ್ರಿ. ಭಾರತೀಯ ವಾಯುಪಡೆಯ ಫ್ಲೈಯಿಂಗ್‌ ಬ್ರ್ಯಾಂಚ್‌ಗೆ ಆಯ್ಕೆಯಾದ ಮನಿಷಾ ಜು.9ರಂದು ತರಬೇತಿಗೆ ಹೈದರಾಬಾದ್‌ಗೆ ತೆರಳಲಿದ್ದಾರೆ.

ಬಿಜೈ ಲೂರ್ಡ್ಸ್ ಸೆಂಟ್ರಲ್‌ ಸ್ಕೂಲ್‌ ಮತ್ತು ಸೈಂಟ್‌ ಅಲೋಶಿಯಸ್‌ನಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ವಿದ್ಯಾಭ್ಯಾಸ ಪೂರೈಸಿ ಬೆಂಗಳೂರಿನ ರಾಮಯ್ಯ ಕಾಲೇಜಿನ ಬಿಇ ಪದವಿ ಪಡೆದಿದ್ದಾರೆ. ಇದಾದ ಬಳಿಕ ಮರ್ಸಿಡಿಸ್‌ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು.

ಏರ್‌ಫೋರ್ಸ್‌ಗೆ ಆಯ್ಕೆ 6 ತಿಂಗಳ ಪ್ರಕ್ರಿಯೆಯಾಗಿದ್ದು, ಪ್ರಾರಂಭದಲ್ಲಿ ಏರ್‌ಫೋರ್ಸ್‌ ಕಾಮನ್‌ ಎಂಟ್ರೆಸ್‌ ಎಕ್ಸಾಂ ಬರೆಯಬೇಕು. ದೇಶದ 5 ಕೇಂದ್ರಗಳಲ್ಲಿ (ಮೈಸೂರು, ಗುಜರಾತ್‌, ಗುವಾಹಟಿ, ವಾರಣಾಸಿ, ಡೆಹ್ರಾಡೂನ್‌) ಪರೀಕ್ಷೆ ನಡೆದು, ಇದರಲ್ಲಿ ನಿಯಮಿತ ಅಂಕ ತೆಗೆಯಬೇಕು. ಇದರಲ್ಲಿ 250 ವಿದ್ಯಾರ್ಥಿನಿಯರು ವಾಯುಪಡೆಗೆ ಪರೀಕ್ಷೆ ಬರೆದಿದ್ದು, ಇವರಲ್ಲಿ 59 ಮಂದಿ ಎರಡನೇ ಹಂತಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಒಂದು ವಾರ ನಾನಾ ಪರೀಕ್ಷೆ ನಡೆಸಿ ಮತ್ತೊಂದು ಹಂತಕ್ಕೆ 15 ಮಂದಿ ಆಯ್ಕೆ ಮಾಡಲಾಗಿದೆ. ಇದಾದ ಬಳಿಕ ಕಠಿಣ ದೈಹಿಕಾ ಕ್ಷಮತಾ ಪರೀಕ್ಷೆ (ಮೆಡಿಕಲ್‌ ಟೆಸ್ಟ್‌) ನಡೆಯುತ್ತದೆ. ಇವರಲ್ಲಿ 5 ಮಂದಿ ಪೈಲಟ್‌ ಆಯ್ಕೆ ಮಾಡಿದ್ದು, ಇವರಲ್ಲಿ ಮನಿಷಾ ಸೇರಿದಂತೆ 3 ಮಂದಿ ಆಯ್ಕೆಯಾಗಿದ್ದಾರೆ. ಉಳಿದಿಬ್ಬರು ಲಕ್ನೋ ಮತ್ತು ದಿಲ್ಲಿಯವರು. ಪೈಲಟ್‌ಗೆ ಆಯ್ಕೆಯಾಗುವವರು 24 ವರ್ಷದೊಳಗಿರಬೇಕು ಮತ್ತು ಎಸ್‌ಎಸ್‌ಬಿ ಕ್ಲಿಯರ್‌ ಆದ ಮೇಲೆ ಸಿಪಿಎಸ್‌ಎಸ್‌ (ಕಂಪ್ಯೂಟರೈಸ್ಡ್‌ ಪೈಲಟ್‌ ಸೆಲೆಕ್ಷನ್‌ ಸಿಸ್ಟಂ) ಪರೀಕ್ಷೆಯನ್ನು ಒಂದೇ ಬಾರಿಗೆ ಪಾಸ್‌ ಮಾಡಬೇಕು. ಹೀಗಾದರೆ ಮಾತ್ರ ಪೈಲಟ್‌ ಆಗಲು ಅವಕಾಶ.

ತಂದೆಯ ಕನಸು ನನಸು : ಮನಿಷಾ ಅವರ ತಂದೆ ಮನೋಹರ್‌ ಶೆಟ್ಟಿ ಈ ಹಿಂದೆ ವಾಯುಪಡೆಗೆ ಆಯ್ಕೆಯಾಗಿದ್ದರು. ಆದರೆ ಇವರ ಅಣ್ಣಾ ಏರ್‌ಫೋರ್ಸ್‌ನಲ್ಲಿದ್ದ ಕಾರಣ ತಂದೆ ಇವರಿಗೆ ಅನುಮತಿ ಕೊಡಲಿಲ್ಲ. ಈ ಕಾರಣದಿಂದ ತನ್ನ ಇಬ್ಬರು ಮಕ್ಕಳಲ್ಲಿ ಒಬ್ಬರನ್ನು ಪೈಲಟ್‌ ಮಾಡಬೇಕೆಂಬ ಕನಸು ಅವರದಾಗಿತ್ತು. ಇದಕ್ಕಾಗಿ ಬಾಲ್ಯದಿಂದಲೇ ಇಬ್ಬರು ಮಕ್ಕಳ ಚಲನವಲನ, ಆಸಕ್ತಿ ಗಮನಿಸಿ ಮನಿಷಾರನ್ನು ಸೇನೆಗೆ ಸೇರುವಂತೆ ಪ್ರೋತ್ಸಾಹಿಸಿದರು.

ಸಾಮಾನ್ಯವಾಗಿ ಏರ್‌ಪೋರ್ಸ್‌ ಆಯ್ಕೆಯಾಗಬೇಕಾದರೆ ಕೋಚಿಂಗ್‌ ಪಡೆಯುತ್ತಾರೆ. ಆದರೆ ಮನಿಷಾ ಯಾವುದೇ ತರಬೇತಿ ಪಡೆಯದೆ ತಂದೆಯ ಮಾರ್ಗದರ್ಶನ ಪಡೆದು ಯೂಟ್ಯೂಬ್‌ನಿಂದಲೇ ಮಾಹಿತಿ ಸಂಗ್ರಹಿಸುತ್ತಿದ್ದರು.

 

 

Vishwa News 24

Recent Posts

ಉಡುಪಿ:  ಪ್ರಮೋದ್ ಮಧ್ವರಾಜ್ ಅವರ ಮಾಜಿ ಆಪ್ತ ಸಹಾಯಕ ಗೋವಾದಲ್ಲಿ ಶವವಾಗಿ ಪತ್ತೆ! vishwanews24

ಉಡುಪಿ:  ಪ್ರಮೋದ್ ಮಧ್ವರಾಜ್ ಅವರ ಮಾಜಿ ಆಪ್ತ ಸಹಾಯಕ ಗೋವಾದಲ್ಲಿ ಶವವಾಗಿ ಪತ್ತೆ! ಉಡುಪಿ: ಮಾಜಿ ಸಚಿವ ಮತ್ತು ಬಿಜೆಪಿ…

3 minutes ago

ಮಂಗಳೂರು: ಬೈಕಂಪಾಡಿ ದರೋಡೆ ಪ್ರಕರಣಕ್ಕೆ ಟ್ವಿಸ್ಟ್ –  ವಾಹನವನ್ನು ಬಿಟ್ಟು ಪರಾರಿಯಾದ ಆರೋಪಿಗಳು ; ಕಾರು ಪತ್ತೆ – vishwanews24

ಮಂಗಳೂರು: ಬೈಕಂಪಾಡಿ ದರೋಡೆ ಪ್ರಕರಣಕ್ಕೆ ಟ್ವಿಸ್ಟ್ -  ವಾಹನವನ್ನು ಬಿಟ್ಟು ಪರಾರಿಯಾದ ಆರೋಪಿಗಳು ; ಕಾರು ಪತ್ತೆ ಮಂಗಳೂರು: ಬೈಕಂಪಾಡಿ…

46 minutes ago

ಮಂಗಳೂರು: ಮನೆ ಮೇಲೆ ತಡೆಗೋಡೆ ಕುಸಿತ; ಇಬ್ಬರು ಮಕ್ಕಳು ಸೇರಿ ಮೂವರು ದುರ್ಮರಣ – vishwanews24

ಮಂಗಳೂರು: ಮನೆ ಮೇಲೆ ತಡೆಗೋಡೆ ಕುಸಿತ; ಇಬ್ಬರು ಮಕ್ಕಳು ಸೇರಿ ಮೂವರು ದುರ್ಮರಣ ಮಂಗಳೂರು: ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ…

2 hours ago

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ -vishwanews24

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…

22 hours ago

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ -vishwanews24

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…

22 hours ago

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ -vishwanews24

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…

23 hours ago