ಉಗಾಂಡ: ಆಕ್ಸ್‌ಫರ್ಡ್ ವಿದ್ಯಾರ್ಥಿನಿಯೊಬ್ಬಳು ವರನಿಲ್ಲದೇ ತನ್ನನ್ನು ತಾನೇ ಮದ್ವೆ ಮಾಡಿಕೊಂಡಿರುವ ಅಚ್ಚರಿಯ ಘಟನೆ ಉಗಾಂಡದಲ್ಲಿ ನಡೆದಿದೆ.
32 ವರ್ಷದ ಲುಲು ಜೆಮಿಮಾ ತನ್ನನ್ನು ತಾನೇ ವರಿಸಿಕೊಂಡ ವಧು. ಜೆಮಿಮಾ ಅಂತಿಮವಾಗಿ ಪೋಷಕರ ಒತ್ತಡದಿಂದ ಮದುವೆಯಾಗಲು ಒಪ್ಪಿಕೊಂಡರು. ಹಾಗಾಗಿ, ಆಗಸ್ಟ್ 27 ರಂದು ಉಗಾಂಡಾದ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಮದುವೆ ಮಾಡಿಕೊಂಡಿದ್ದಾರೆ.
ಪೋಷಕರ ಒತ್ತಡಕ್ಕೆ ಮಣಿದು ಅವರು ತೋರಿಸಿದ ಹುಡುಗನ ಜೊತೆ ಮದುವೆಯಾಗುವ ನಿರ್ಧಾರವನ್ನು ಹೆಚ್ಚಿನ ಹುಡುಗಿಯರು ತೆಗೆದುಕೊಳ್ಳುತ್ತಾರೆ. ಆಕ್ಸ್‌ಫರ್ಡ್ ವಿದ್ಯಾರ್ಥಿನಿಯಾಗಿ ರುವ ಉಗಾಂಡ ಮೂಲದ ಮಹಿಳೆ ಲುಲು ಜೆಮಿಮ್ಹಾ(32) ಕೂಡ ಪೋಷಕರ ಒತ್ತಡದಿಂದ ಮುಕ್ತಿಪಡೆಯಲು ಮದುವೆಯಾಗಿದ್ದಾರೆ.
ಆದರೆ ಇವರು ಮದುವೆಯಾಗಿರುವುದು ಪೋಷಕರು ತೋರಿಸಿದ ಹುಡುಗನನ್ನಲ್ಲ. ಬದಲಾಗಿ ಅವರನ್ನು ಅವರೇ ಮದುವೆಯಾಗಿದ್ದಾರೆ. ಇತ್ತೀಚೆಗೆ ಇವರ ಮದುವೆ ಸಮಾರಂಭ ನಡೆದಿದೆ.
ತಾನು 16ನೇ ವಯಸ್ಸಿನಲ್ಲಿದ್ದಾಗಿನಿಂದ ನನ್ನ ಪೋಷಕರು, ನನ್ನನ್ನು ಚೆನ್ನಾಗಿ ನೋಡಿಕೊಳ್ಳುವ ಹುಡುಗ ಸಿಗಬೇಕು, ನಾನು ಅವನನ್ನು ಮದುವೆಯಾಗಬೇಕು ಎಂದು ಬಯಸಿದ್ದರು. ನನ್ನನ್ನು ತುಂಬಾ ಪ್ರೀತಿಸುವ ವ್ಯಕ್ತಿ ನಾನೇ. ಆದ್ದರಿಂದ ನನ್ನನ್ನು ನಾನೇ ಮದುವೆಯಾಗಿದ್ದೇನೆ. ಎಂದು ಲುಲು ಹೇಳಿದ್ದಾರೆ.
ಮದುವೆಗೆ ಲುಲು ಜೆಮಿಯಾ ಕೇವಲ 2.62 ಡಾಲರ್(194.97 ರೂ.) ಖರ್ಚು ಮಾಡಿದ್ದಾಳೆ. ಜೆಮಿಯಾ ಸಹೋದರ ಮದುವೆಯ ಕೇಕ್ ನೀಡಿದ್ದು, ಸ್ನೇಹಿತೆ ವಧುವಿನ ಡ್ರೆಸ್‍ನ್ನು ಬಾಡಿಗೆಗೆ ನೀಡಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ತಮ್ಮ ಖರ್ಚನ್ನು ತಾವೇ ನೀಡಿದ್ದಾರೆ ಎಂದು ಜೆಮಿಯಾ ಹೇಳಿದರು.
ಉಡುಪಿ ಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆ ಉಡುಪಿ: ಆಷಾಢ ಶುಕ್ಲ ಪ್ರಥಮ ಏಕಾದಶಿ ಅಂಗವಾಗಿ ಉಡುಪಿ ಜಿಲ್ಲೆಯ ಪ್ರಮುಖ ಮಠಗಳಲ್ಲಿ ತಪ್ತ…
ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ ಘಟನೆ ನಗರದ ಲಾಲ್ ಬಾಗ್ ಸಿಗ್ನಲ್ ಬಳಿ…
ಹವಾಮಾನ ವೈಪರೀತ್ಯದಿಂದಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭ ಅಮರನಾಥ :ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಆರು ದಿನಗಳಿಂದ ನಿರಂತರ ಮಳೆ,…
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನವದೆಹಲಿ: ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳ ಆಕ್ರೋಶ ಭುಗಿಲೆದ್ದ…
ಕಾಮನ್‌ವೆಲ್ತ್ ಗೇಮ್ಸ್ 2026 : ಭಾರತದ ಪದಕದ ಖಾತೆ ತೆರೆದ ಝಂದು ಕುಮಾರ್: ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಕಂಚಿನ ಸಾಧನೆ ಗ್ಲಾಸ್ಕೊ…
ಅಯೋಧ್ಯೆ ಶ್ರೀರಾಮ ಮಂದಿರ ಧಾರ್ಮಿಕ ಸಮಿತಿಯಲ್ಲಿ ಪೇಜಾವರ ಶ್ರೀಗಳಿಗೆ ಸ್ಥಾನ ಅಯೋಧ್ಯೆ: ಶ್ರೀ ರಾಮಮಂದಿರದ ಪೂಜಾ ವಿಧಿವಿಧಾನಗಳು ಹಾಗೂ ಧಾರ್ಮಿಕ…