Featured

ತನ್ನ ಪರಿಶ್ರಮದಿಂದ ಉನ್ನತ ಮಟ್ಟಕ್ಕೆ ಏರಬಹುದೆಂದು ತೋರಿಸಿದವರು ಪ್ರಕಾಶ್ ಶೆಟ್ಟಿ: ಬಿಎಸ್ ಯಡಿಯೂರಪ್ಪ.

ತನ್ನ ಪರಿಶ್ರಮದಿಂದ ಉನ್ನತ ಮಟ್ಟಕ್ಕೆ ಏರಬಹುದೆಂದು ತೋರಿಸಿದವರು ಪ್ರಕಾಶ್ ಶೆಟ್ಟಿ: ಬಿಎಸ್ ಯಡಿಯೂರಪ್ಪ.

ಮಂಗಳೂರು: ತನ್ನ ಪರಿಶ್ರಮದಿಂದ ಉನ್ನತ ಮಟ್ಟಕ್ಕೆ ಏರಬಹುದೆಂದು ತೋರಿಸಿದವರು ಪ್ರಕಾಶ್ ಶೆಟ್ಟಿಯವರು. ಕೆವಲಾ ಕನಸು ಕಂಡರೆ ಸಾಲದು. ಕನಸಿನ ಜೊತೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ ಛಲಗಾರ ಎಂದು ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಅವರು ಬುಧವಾರ ಎಂಆರ್‍ಜಿ ಗ್ರೂಫ್‍ನ ಅಧ್ಯಕ್ಷ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರಿಗೆ 60 ವರ್ಷ ತುಂಬಿದ ಹಿನ್ನೆಲೆಯಲಿ ಬಂಗ್ರಕೂಳೂರಿನಲ್ಲಿರುವ ಗೋಲ್ಡ್‍ಪಿಂಚ್ ಮೈದಾನದಲ್ಲಿ ಪ್ರಕಾಶಾಭಿನಂದನ 60ರ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಎಂಆರ್‍ಜಿ ಸಂಸ್ಥೆ ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದವರು ಪ್ಕಕಾಶ್ರವರು.ದುಡಿಮೆಯಲ್ಲಿ ದಣಿವಾಯಿತೆಂದು ವಿರಮಿಸದೆ ಮುಂದಡಿ ಇಟ್ಟು ಯಶ ಸಾಧಿಸಿದ ಛಲಗಾರ ಎಂದೂ ಯಡಿಯೂರಪ್ಪ ಹೇಳಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಕರಾವಳಿಯ ಈ ನಾಡಿನ ಪರಂಪರೆಯಂತೆ ಪ್ರಕಾಶರವರು ಈ ರಾಜ್ಯದ ಗಡಿಯನ್ನು ಮೀರಿ ಸಾಧಿಸಿದ ಧೀಮಂತ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಶುಭ ಹಾರೈಸಿದರು.
ರಾಜ್ಯ ಬಿಜೆಪಿ ನಳಿನ್‍ಕುಮಾರ್ ಕಟೀಲು ಮಾತನಾಡಿ, ಕೆರದು ಸಹಾಯ ಮಾಡುವ ಗುದ ಧೀಮಂತ ವ್ಯಕ್ತಿ ಹಾಗೂ ಸಾರ್ಥಕ ಹೊಟೇಲು ಉದ್ಯಮಿ ಪ್ರಕಾಶ್ ಶೆಟ್ಟಿ ಎಂದರು.
ಸಂಸದೆ ಶೋಭಾ ಕರಾಂದ್ಲಜೆ ಮಾತನಾಡಿ, ಹೋಟೇಲು ಉಧ್ಯಮವು ಅತ್ಯಂತ ಕಷ್ಠದ ಉದ್ಯಮ. ಪ್ರಕಾಶ್ ಶೆಟ್ಟಿಯವರ ನೈಪುಣ್ಯತೆಯಿಂದ ಸಾಕಾರಗೊಂಡಿದೆ ಎಂದರು.
ಚಿತ್ರ ನಟ ಯಶ್ ಮಾನಾಡಿ, ಕರೆದು ಸಹಾಯ ನೀಡುವ ಗುಣದವರು ಪ್ರಕಾಶಣ್ಣ. ಮುಖ ನೋಡಿ ಕಷ್ಠದಲ್ಲಿರುವವರಿಗೆ ಸಹಾಯ ನೀಡುವ ಇವರಿಗೆ ಜನರ ಆಶೀರ್ವಾದ ಎಂದಿಗೂ ಇದೆ ಎಂದರು.
ನಿಟ್ಟೆ ವಿವಿ ಕುಲಪತಿ ಎನ್ ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ದೇಶ ವಿದೇಶಗಳ ವಿವಿಧ ಸಮುದಾಯಗಳ 25000ಕ್ಕೂ ಮಿಕ್ಕಿ ಜನರು ಪಾಲ್ಗೊಂಡಿದ್ದು ವಿಶೇಷವಾಗಿದೆ.
ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ, ಸುರೇಶ್ ಶೆಟ್ಟಿ ಶಂಕರನಾರಾಯಣ, ಜನ್ಸಾಲೆ ರಾಘವೇಂದ್ರ ಆಚಾರ್ ಮತ್ತು ಕಾವ್ಯಶ್ರೀ ಆಜೇರು ಅವರ ಪಾಲ್ಗೊಳ್ಳುವಿಕೆಯಲ್ಲಿ ಯಕ್ಷಗಾನ ವೈಭವ ಮನಸೂರೆಗೊಂಡಿದೆ. ನಂತರ ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ವೈಭವ ಕಾರ್ಯಕ್ರಮ ಜರಗಿತು.

ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕ ವಿಜಯ್ ಪ್ರಕಾಶ್ ಅವರ ಪಾಲ್ಗೊಳ್ಳುವಿಕೆಯಲ್ಲಿ ಸಂಗೀತ ರಸಸಂಜೆ ಜನಾಕರ್ಷಣೆಗೊಂಡಿದೆ.
ವಿಶೇಷ ಅತಿಥಿಗಳಾಗಿ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು, ಕನ್ನಡ ಮತ್ತು ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಬಂದರು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಅತಿಥಿಗಳಾಗಿ ವಿಧಾನಸಭೆಯ ಮುಖ್ಯ ಸಚೇತಕ ಸುನೀಲ್ ಕುಮಾರ್, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರ, ಕೆ. ರಘುಪತಿ ಭಟ್ ಉಡುಪಿ, ಬಿ.ಎಂ. ಸುಕುಮಾರ ಶೆಟ್ಟಿ ಬೈಂದೂರು, ಎಸ್. ಅಂಗಾರ ಸುಳ್ಯ, ಯು. ರಾಜೇಶ್ ನಾಯ್ಕ್ ಬಂಟ್ವಾಳ, ಸಂಜೀವ ಮಠಂದೂರು ಪುತ್ತೂರು, ವೇದವ್ಯಾಸ ಕಾಮತ್ ಮಂಗಳೂರು, ಎ. ಉಮಾನಾಥ ಕೋಟ್ಯಾನ್ ಮೂಡಬಿದ್ರೆ, ಹರೀಶ್ ಪೂಂಜಾ ಬೆಳ್ತಂಗಡಿ, ಡಾ. ವೈ ಭರತ್ ಶೆಟ್ಟಿ ಸುರತ್ಕಲ್, ಐವನ್ ಡಿ’ಸೋಜಾ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಶ್ರೀದೇವಿ ಎಜುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಎ.ಜೆ. ಹಾಸ್ಪಿಟಲ್ ಮತ್ತು ರೀಸರ್ಚ್ ಸೆಂಟರ್‍ನ ಚೇರ್ಮನ್ ಎ.ಜೆ. ಶೆಟ್ಟಿ, ಮೂಡಬಿದ್ರೆ ಆಳ್ವಾಸ್‍ಎಜುಕೇಶನ್ ಫೌಂಡೇಶನ್‍ನ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಮಾಜಿ ಸಚಿವ ಅಭಯಚಂದ್ರ ಜೈನ್, ಯೇನೆಪೋಯ ಗ್ರೂಪ್‍ನ ಚೇರ್ಮನ್ ಯೇನೆಪೋಯ ಅಬ್ದುಲ್ಲ ಕುಂಞ, ಭಂಡಾರಿ ಮಹಾ ಮಂಡಲ ವಿಶ್ವ ಭಂಢಾರಿ ಸಂಘದ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಅಖಿಲಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಆಡಳಿತ ಮೊಕ್ತೇಸರ ಸುರೇಶ್ ಭಂಡಾರಿ ಕಡಂದಲೆ ಭಾಗವಹಿಿಿಿಿಸಿದರು.
ಸಾಧಕರಿಗೆ ಸಮ್ಮಾನ
ವಿವಿಧ ಕ್ಷೇತ್ರಗಳ ಸಾಧಕರಾದ ಡಾ. ಅಮೃತ ಸೋಮೇಶ್ವರ, ಡಾ. ಬಿ.ಎಂ. ಹೆಗ್ಡೆ, ಡಾ. ಚಂದ್ರಶೇಖರ ಶೆಟ್ಟಿ ಬೆಂಗಳೂರು, ಡಾ. ಸುನೀತಾ ಶೆಟ್ಟಿ ಮುಂಬೈ, ಅಪ್ಪಣ್ಣ ಹೆಗ್ಡೆ ಬಸ್ರೂರು, ಎಲ್.ಜಿ. ಸೋನ್ಸ್, ಶಿಮಂತೂರು ನಾರಾಯಣ ಶೆಟ್ಟಿ, ಕೆ. ಗೋವಿಂದ ಭಟ್ ಸೂರಿಕುಮೇರು, ಬನ್ನಂಜೆ ಸಂಜೀವ ಸುವರ್ಣ, ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯ, ಬೋಳ ಸುಬ್ಬಯ್ಯ ಶೆಟ್ಟಿ, ಸಾರಾಅಬೂಬಕರ್, ನಾರಾಯಣ ರಾವ್ ಪಡುಬಿದ್ರಿ, ನಗರ ನಾರಾಯಣ ಶೆಣೈ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು.
ತಾರಾ ಮೆರುಗು : ಖ್ಯಾತ ಚಲನಚಿತ್ರ ನಟರಾದ ರವಿಚಂದ್ರನ್, ಯಶ್, ಹರಿಪ್ರಿಯ, ಮಾನ್ವಿತಾ ಹರೀಶ್, ಕಾವ್ಯ ಶೆಟ್ಟಿ, ಅರ್ಜುನ್ ಜನ್ಯ, ವಿಜಯಪ್ರಕಾಶ್ ಸಹಿತ ಅನೇಕ ಸಿನಿಮಾ ಕಲಾವಿದರು ಭಾಗವಹಿಸದರು.

ಪ್ರಕಾಶಾಭಿನಂದನ ಸಮಿತಿಯ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಖ್ಯಾತ ಕಿರುತೆರೆ ನಿರುಪಕಿ ಅನುಶ್ರೀ, ಖ್ಯಾತ ತುಳು ಚಿತ್ರ ನಟ ರೂಪೇಶ್ ಶೆಟ್ಟಿ ಹಾಗೂ ನಿತೇಶ್ ಶೆಟ್ಟಿ ಎಕ್ಕಾರ್ ನಿರೂಪಿಸಿದ್ದಾರೆ. ಇಂದ್ರಾಳಿ ಜಯಕರ ಶೆಟ್ಟಿ ವಂದಿಸಿದರು.
Vishwanews24

ವರದಿ: ಪುರುಷೋತ್ತಮ ಸಾಲಿಯಾನ್

Vishwa News 24

Recent Posts

ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ -vishwanews24

ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ ಹಿಟ್ಲರ್ ಕಲ್ಯಾಣ’ ಧಾರವಾಹಿ ಖ್ಯಾತಿಯ ನಟ ದಿಲೀಪ್ ರಾಜ್ ಇಂದು ಬೆಳಗಿನ…

16 hours ago

ಉಡುಪಿ : ಮಲಬಾರ್ ಗೋಲ್ಡ್‌ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ  -vishwanews24

ಉಡುಪಿ : ಮಲಬಾರ್ ಗೋಲ್ಡ್‌ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ  ಉಡುಪಿ : ಮಲಬಾರ್…

1 day ago

ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ – vishwanews24

ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ  ಬಿಜೆಪಿ ನಾಯಕ, ನೂತನ ಮುಖ್ಯಮಂತ್ರಿ…

2 days ago

ಭಸ್ಮಾಸುರ ಆಗಿರುವ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವ ಸಂವಿಧಾನದ ಮೇಲೆ ಕೈ ಇಡದಿದ್ದರೆ ಸಾಕು : ಬಿ.ಕೆ ಹರಿಪ್ರಸಾದ್ ವಾಗ್ದಾಳಿ – vishwanews24

ಪ್ರಧಾನಿ  ಮೋದಿಯವರು ತಮ್ಮ ಕುರ್ಚಿ ಗಟ್ಟಿಯಾಗಿದೆಯೇ ನೋಡಿಕೊಳ್ಳಲಿ  .. ಪಂಚಾಯತಿ ಮೇಂಬರ್ ರೀತಿ ರಾಜಕಾರಣ ಮಾಡೋದು ಬಿಡಬೇಕು.. ಇಂದಿರಾ ಗಾಂಧಿ…

2 days ago

ಮಂಗಳೂರು : ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು, ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ: ಮಂಜುನಾಥ ಭಂಡಾರಿ – vishwanews24

ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು, ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ: ಮಂಜುನಾಥ ಭಂಡಾರಿ ಮಂಗಳೂರು…

2 days ago

ಮೂಳೂರು ಪರಿಸರದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಿಸದಂತೆ ಅಧಿಕಾರಿಗಳಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿ – vishwanews24

ಮೂಳೂರು: ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಪ್ರತಿಭಟನೆ.. STP ತಕ್ಷಣವೇ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಸಂಬಂದಿಸಿದ ಅಧಿಕಾರಿಗಳಿಗೆ…

2 days ago