Featured

ತನ್ನ ಮದುವೆಗೆ ಮಸೀದಿಯೊಳಗೆ ಹಾಜರಾಗಿ ಹೊಸ ಇತಿಹಾಸ ಸೃಷ್ಟಿಸಿದ ಮದುಮಗಳು – Vishwanews24

ತನ್ನ ಮದುವೆಗೆ ಮಸೀದಿಯೊಳಗೆ ಹಾಜರಾಗಿ ಹೊಸ ಇತಿಹಾಸ ಸೃಷ್ಟಿಸಿದ ಮದುಮಗಳು

ಮಹಲ್ ಸಮಿತಿಗೆ ಕ್ಷಮೆಯಾಚಿಸುವಂತೆ ಮುಸ್ಲಿಂ ಮುಖಂಡರ ಆಗ್ರಹ

ತಿರುವನಂತಪುರಂ: ಮುಸ್ಲಿಂ ಸಂಪ್ರದಾಯದ ಪ್ರಕಾರ ಯಾವುದೇ ವಧು ತನ್ನ ಮದುವೆಗೆ ಹಾಜರಾಗಬಾರದು. ಆದರೆ ವಧುವೊಬ್ಬಳು ತನ್ನ ಮದುವೆಗೆ ತಾನೇ ಹಾಜರಾಗುವ ಮೂಲಕ ಇತಿಹಾಸವನ್ನು ಸೃಷ್ಟಿ ಮಾಡಿದ್ದಳು. ಆದರೆ ಇದನ್ನು ವಿರೋಧಿಸಿ ಮಹಲ್ ಸಮಿತಿಗೆ ಕ್ಷಮೆಯಾಚಿಸುವಂತೆ ಕೆಲವು ಮುಸ್ಲಿಂ ಮುಖಂಡರು ಆಗ್ರಹಿಸಿದ್ದಾರೆ.

ಇಸ್ಲಾಮಿಕ್ ವಿವಾಹದ ನಿರ್ಣಾಯಕ ಹಂತವಾದ ನಿಕಾಹ್ ಕಾರ್ಯಕ್ರಮದಲ್ಲಿ ವಧು ಬಂದಿದ್ದಳು. ಈ ಫೋಟೋ, ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಫುಲ್ ವೈರಲ್ ಆಗಿದೆ. ವಧು ಬಹಿಜಾ ದಲೀಲಾ ತಮ್ಮ ವಿವಾಹದಲ್ಲಿ ಉಪಸ್ಥಿತಿ ಇರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ಕುರಿತು ಪರ-ವಿರೋಧ ಚರ್ಚೆ ನಡೆಯುತ್ತಿದೆ.

ವಧುವಿನ ಸಹೋದರ ಫಾಸಿಲ್ ಷಹಜಹಾನ್ ಈ ಕುರಿತು ಮಾಹಿತಿ ನೀಡಿದ್ದು, ವಧು ಸ್ಥಳದಲ್ಲಿ ಕುಳಿತುಕೊಳ್ಳಬಹುದೇ ಎಂದು ನಾವು ಮದುವೆ ನಡೆದ ಮಹ ಬಳಿ ಕೇಳಿದ್ದೆವು. ಮಹಲ್ ಕಮಿಟಿಯಲ್ಲಿ ಇವರೆಲ್ಲ ನಮಗೆ ಬಹಳ ವರ್ಷಗಳಿಂದ ಗೊತ್ತು ಎಂದು ಹೇಳಿ ಮಹಲ್ ಕಾರ್ಯದರ್ಶಿ ನಮಗೆ ಅನುಮತಿ ನೀಡಿದರು. ಮದುವೆಯಲ್ಲಿ 400 ಜನರು ಭಾಗವಹಿಸಿದ್ದರು. ಎಲ್ಲರಿಗೂ ಮದುವೆ ಸಂತೋಷವಾಯಿತು. ಆ ಸಮಯದಲ್ಲಿ ಯಾವುದೇ ವಿವಾದ ಅಥವಾ ಪ್ರಶ್ನೆ ಇರಲಿಲ್ಲ. ನಂತರ ಕೆಲವರು ಫೇಸ್‍ಬುಕ್‍ನಲ್ಲಿ ಮದುವೆಯ ಬಗ್ಗೆ ಮೆಚ್ಚುಗೆಯಿಂದ ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ವೀಡಿಯೋಗಳನ್ನು ಸಹ ಮಾಡಿದರು. ಇದಾದ ಬಳಿಕ ಈ ಕುರಿತು ಚರ್ಚೆ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.

ಕೆಲವರು ಈ ಮದುವೆಗೆ ಅನುಮತಿ ನೀಡಿದ ಮಹಲ್ ಸಮಿತಿಯನ್ನು ಪ್ರಶ್ನಿಸಿದ್ದಾರೆ. ವಧು ಹಾಜರಾಗಿದ್ದು ತಪ್ಪು. ಮಹಲ್ ಸಮಿತಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ನಡೆದಿದ್ದೇನು?
ಕೇರಳದ ಪರಕಡವು ಮೂಲದ ಕೆ.ಎಸ್.ಉಮ್ಮರ್ ಎಲ್ಲ ತಂದೆಯಂತೆ ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕು ಎಂಬ ಕನಸನ್ನು ಕಂಡಿದ್ದರು. ಆದರೆ ಅವರಿಗೆ ಮಗಳ ಮದುವೆಯಂದು ಆಕೆಯೇ ಹಾಜರು ಇಲ್ಲದಿದ್ದರೆ ಹೇಗೆ ಎಂದು ಭಾವಿಸಿ ಮಗಳನ್ನು ಕಲ್ಯಾಣ ಮಂಟಪಕ್ಕೆ ಕರೆ ತಂದಿದ್ದರು.

ತಮ್ಮ ಸಂಪ್ರದಾಯದಲ್ಲಿ ಮದುಮಗಳು ತನ್ನ ಮದುವೆಗೆ ಹೋಗುವ ಅವಕಾಶ ಇಲ್ಲ ಎನ್ನುವುದು ಅವರನ್ನು ಬೇಸರಕ್ಕೆ ತಳ್ಳಿತ್ತು. ಆದರೂ ಅವರು ಗಟ್ಟಿ ಮನಸ್ಸು ಮಾಡಿ, ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅವರ ಮಗಳು ಬಹಾಜಾ ಕೂಡ ಈ ಮದುವೆಯನ್ನು ತುಂಬಾ ಖುಷಿಯಿಂದ ಒಪ್ಪಿಕೊಂಡಿದ್ದಾಳೆ.

ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಉಮ್ಮರ್, ಇಸ್ಲಾಂನಲ್ಲಿ ಯಾವುದೇ ಸ್ಥಾನವಿಲ್ಲದ ಕೆಟ್ಟ ಆಚರಣೆಗಳನ್ನು ನಾವು ತಿರಸ್ಕರಿಸುವ ಕಾಲ ಬಂದಿದೆ. ನನ್ನ ಮಗಳು ಸೇರಿದಂತೆ ವಧುಗಳಿಗೆ ಅವರ ಮದುವೆಗೆ ಭಾಗಿಯಾಗುವುದು ಅವರ ಹಕ್ಕು. ಅದಕ್ಕೆ ನಾವೇ ಮೊದಲು ಈ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ನಮ್ಮ ಈ ನಿರ್ಧಾರಕ್ಕೆ ವರನ ಮನೆಯವರೂ ಒಪ್ಪಿಕೊಂಡರು. ಈ ಹಿನ್ನೆಲೆಯಲ್ಲಿ ನಾವು ಮಹಲ್ ಸಮಿತಿಯನ್ನು ಸಂಪರ್ಕಿಸಿದೆವು. ಅವರ ಜೊತೆ ಚರ್ಚಿಸಿದ ಬಳಿಕ ನಮ್ಮ ಈ ವಿಭಿನ್ನ ಯೋಚನೆಗೆ ಅವರೂ ಅಭಿನಂದಿಸಿದರು. ಎಲ್ಲರ ಸಹಕಾರದಿಂದ ಸಂಪ್ರದಾಯ ಮೀರಿ ಮದುವೆ ಮಾಡಲು ಅನುಕೂಲವಾಯಿತು ಎಂದು ಬರೆದುಕೊಂಡಿದ್ದರು.

Vishwa News 24

Recent Posts

ಉಡುಪಿ : ನೇರ ಸಂದರ್ಶನ -vishwanews24

ಉಡುಪಿ : ನೇರ ಸಂದರ್ಶನ ಉಡುಪಿ : ನಗರದ ಮಣಿಪಾಲದ ಮನೋಹರ್ ಭವನ್ ಹೋಟೆಲ್ ಮುಂಭಾಗದ ಮಣಿಪಾಲ್ ಪೇಮೆಂಟ್ ಐಡೆಂಟಿಟಿ…

1 hour ago

ಚಾ.ನಗರ: ಗ್ರೈಂಡರ್‌ನಿಂದ ವಿದ್ಯುತ್ ಶಾಕ್ : ನಾಲ್ಕು ವರ್ಷದ ಬಾಲಕಿ ದುರ್ಮರಣ -vishwanews24

ಚಾ.ನಗರ: ಗ್ರೈಂಡರ್‌ನಿಂದ ವಿದ್ಯುತ್ ಶಾಕ್ – ನಾಲ್ಕು ವರ್ಷದ ಬಾಲಕಿ ದುರ್ಮರಣ ಚಾಮರಾಜನಗರ: ಗ್ರೈಂಡರ್‌ನಿಂದ ವಿದ್ಯುತ್ ಶಾಕ್ ಹೊಡೆದು ನಾಲ್ಕು…

1 hour ago

ಉಡುಪಿ : ಎಸ್‌ಐಆರ್ ಹೆಸರಿನಲ್ಲಿ ಅವರ ಮತದಾನದ ಹಕ್ಕನ್ನು ಕಸಿಯುವ ಕೆಲಸವಾಗುತ್ತಿದೆ :ವಿನಯ ಕುಮಾರ್ ಸೊರಕೆ ಆರೋಪ – vishwanews24

ಉಡುಪಿ : ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ: ಜೂ. 23ರಿಂದ ಜಿಲ್ಲೆಯ ಮನೆಮನೆಗೆ ತೆರಳಿ ಜನಜಾಗೃತಿ: ಕೆ.ಜಯಪ್ರಕಾಶ್ ಹೆಗ್ಡೆ ಉಡುಪಿ:…

2 hours ago

ಆರ್‌ಎಸ್‌ಎಸ್​ ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ – vishwanews24

ಆರ್‌ಎಸ್‌ಎಸ್​ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ ಮೈಸೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಂತರ ಸಚಿವ ಯತೀಂದ್ರ…

19 hours ago

ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ – vishwanews24

ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ ಮಂಗಳೂರು: ಧರ್ಮಸ್ಥಳ  ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಎಸ್ಪಿ ಪ್ರಯಾಣಿಸುತ್ತಿದ್ದ…

20 hours ago

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ – vishwanews24

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ ನವದೆಹಲಿ:…

20 hours ago