Featured

ತಮಿಳುನಾಡಿನಲ್ಲಿ ಕಮಲ ಅರಳಿಸಲಿದ್ದಾರೆ ರಜನಿಕಾಂತ್..

ತಮಿಳುನಾಡಿನಲ್ಲಿ ಡಿಎಂಕೆ ಪಕ್ಷದ ನಾಯಕ ಕರುಣಾ ನಿಧಿ ಸಾವನ್ನಪ್ಪಿದ ಬೆನ್ನಲ್ಲೇ ಅಲ್ಲಿನ ರಾಜಕೀಯ ಚಿತ್ರಣಗಳ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗಳಾಗುತ್ತಿದೆ. ಕರುಣಾನಿಧಿ ಸಾವಿನಿಂದ ತಮಿಳುನಾಡಿನ ರಾಜಕೀಯ ಅವಕಾಶಗಳಿಂದ ತುಂಬಿ ತುಳುಕುತ್ತಿವೆ. ಈವರೆಗೂ ತಮಿಳುನಾಡಿನಲ್ಲಿ ಒಂದು ಹಂತದ ಹವಾ ಸೃಷ್ಟಿಸಿದ್ದ ಕಲೈಗ್ನರ್ ಈಗ ಅಸ್ತಂಗತರಾಗಿದ್ದು ಈಗ ಅನೇಕ ರಾಜಕೀಯ ಪಕ್ಷಗಳಿಗೆ ಬಾಗಿಲು ತೆರೆದಂತಾಗಿದೆ.

ತಮಿಳು ನಾಡಿನ ಜನತೆ ಅಮ್ಮಾ ಎಂದು ಕರೆಯುತ್ತಿದ್ದ ಜಯಲಲಿತಾನೂ ಇಲ್ಲ ಅಯ್ಯ ಎಂದು ಕರೆಯುತ್ತಿದ್ದ ಕರುಣಾ ನಿಧಿನೂ ಇಲ್ಲ. ಹೀಗಾಗಿ ಹಿರಿತಲೆಗಳು ಯಾವುದೂ ಇಲ್ಲವಾಗಿದ್ದು ಹೊಸ ತಲೆಮಾರಿನ ನಾಯಕತ್ವಗಳು ಉದಯಗೊಳ್ಳುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ. ಹೀಗಾಗಿ ಮುಂದಿನ ರಾಜಕೀಯದ ಕಿಂಗ್ ಮೇಕರ್ ಯಾರು ಎಂಬ ಪ್ರಶ್ನೆಯೂ ಮೂಡಿದೆ.

ಈ ಹಿಂದಿನ ಎಲ್ಲಾ ರಾಜಕೀಯ ಸ್ಥಿತಿಗತಿಗಳನ್ನು ಕಂಡಾಗ ತಮಿಳುನಾಡಿನಲ್ಲಿ ಸಿನಿಮಾ ರಂಗದ ದಿಗ್ಗಜರೇ ಆಡಳಿತದ ಚುಕ್ಕಾಣಿ ಹಿಡಿದಿದ್ದು ಅನೇಕ ದಶಕಗಳಿಂದ ಸಿನಿ ನಾಯಕರೇ ಮುಖ್ಯಮಂತ್ರಿಗಳೂ ಆಗಿದ್ದಾರೆ. ಕುರುಣಾ ನಿಧಿ, ಎಮ್.ಜಿ.ಆರ್., ಜಯಲಲಿತಾ ಸೇರಿದಂತೆ ಅನೇಕ ಸಿನಿ ನಾಯಕರು ತಮಿಳುನಾಡನ್ನು ಆಳಿದ್ದಾರೆ. ಇದೀಗ ಮುಂದಿನ ಸರದಿ ಯಾರದ್ದು ಎಂಬ ಪ್ರಶ್ನೆಯೂ ತಮಿಳು ಮಾತ್ರವಲ್ಲದೆ ರಾಷ್ಟ್ರೀಯ ರಾಜಕೀಯದಲ್ಲೂ ಮೂಡುತ್ತಿದೆ.

ಇದೀಗ ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ನಟ ರಜನಿ ಕಾಂತ್ ಅವರ ಹವಾ ಸಖತ್ತಾಗಿಯೇ ವರ್ಕೌಟ್ ಆಗುತ್ತಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ರಜನೀ ಪಾತ್ರ ತುಂಬಾನೇ ಮುಖ್ಯವಾಗಿದೆ. ಅಮ್ಮನಿಲ್ಲದೆ ಅಲ್ಲೋಲ ಕಲ್ಲೋಲವಾಗಿರುವ ಎ.ಐ.ಡಿ.ಎಂ.ಕೆ. ಪಕ್ಷ ಇದೀಗ ರಜನಿಕಾಂತ್ ಗಾಗಿ ಮುಕ್ತ ಅವಕಾಶ ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಎ.ಐ.ಡಿ.ಎಂ.ಕೆ. ಈಗಾಗಲೇ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡುವ ಕುರಿತು ಚರ್ಚಿಸಿದ್ದೂ ಹಾಗೂ ಇದು ಸಫಲವಾಗುವ ಲಕ್ಷಣಗಳೂ ಎದ್ದುಕಾಣುತ್ತಿದೆ. ರಜನಿ ಕಾಂತ್ ಈಗಾಗಲೇ ರಾಜಕೀಯ ಪ್ರವೇಶದ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಹೊಸ ಪಕ್ಷವನ್ನೂ ಕಟ್ಟುವ ಸೂಚನೆ ನೀಡಿದ್ದರು. ಆದರೆ ಹಿಂದಿನಿಂದಲೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಹತ್ತಿರವಾಗಿದ್ದ ರಜನಿ ತಮಿಳು ನಾಡಿನ ರಾಜಕೀಯ ರಂಗದಲ್ಲೂ ಮೋದಿಗೆ ಜೈ ಎನ್ನುವ ಸಾಧ್ಯತೆಗಳೂ ಹೆಚ್ಚಾಗಿದೆ.

2004ರಲ್ಲಿ ತಾನು ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕುತ್ತೇನೆ ಎಂದು ತಮಿಳು ತಲೈವಾ ರಜನಿಕಾಂತ್ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಅಂದಿನಿಂದ ಇಂದಿನವರೆಗೂ ಭಾರತೀಯ ಜನತಾ ಪಕ್ಷದ ವಿಚಾರದಲ್ಲಿ ರಜನಿ ಒಮ್ಮತವನ್ನು ಸೂಚಿಸುತ್ತಲೇ ಬಂದಿದ್ದರು. 2014ರಲ್ಲಿ ತನ್ನ ಆತ್ಮೀಯ ಸ್ನೇಹಿತ ಮೋದಿ ಪ್ರಧಾನಿಯಾದ ನಂತರವಂತೂ ಬಿಜೆಪಿ ಕಡೆ ಆಕರ್ಷಣೆ ಹೆಚ್ಚಾಗಿತ್ತು. ಆದರೆ ತಮಿಳುನಾಡಿನಲ್ಲಿ ಬಿಜೆಪಿ ಅಸ್ತಿತ್ವ ಕಡಿಮೆಯಾಗಿದ್ದರಿಂದ ರಾಜಕೀಯ ಪ್ರವೇಶದ ಅಧಿಕೃತ ಘೋಷಣೆ ಮಾಡಿ ನಂತರ ಯಾವ ಪಕ್ಷ ಎಂದು ಘೋಷಿಸದೆ ತಟಸ್ಥರಾಗಿದ್ದರು.

ಜಯಲಲಿತಾ ಇರುವವರೆಗೂ ತಮಿಳುನಾಡಿನಲ್ಲಿ ಎಲ್ಲವೂ ಅಮ್ಮನದ್ದೇ ಲೀಲೆ. ಆದರೆ ಈಗ ಹಾಗಿಲ್ಲ. ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ 39ರಲ್ಲಿ 37 ಸ್ಥಾನಗಳನ್ನು ಎ.ಐ.ಡಿ.ಎಂ.ಕೆ. (ಜಯಲಲಿತಾ ಪಕ್ಷ) ಹೊಂದಿತ್ತು. ಹಾಗೂ ಭಾರತೀಯ ಜನತಾ ಪಕ್ಷ ಒಂದು ಹಾಗೂ ಇತರೆ ಒಂದು ಸ್ಥಾನಗಳನ್ನು ಹೊಂದಿತ್ತು. ಆ ಚುನಾಣೆಯಲ್ಲಿ ಡಿಎಂಕೆ ಪಕ್ಷ ಒಂದೂ ಸ್ಥಾನಗಳನ್ನು ಗೆಲ್ಲಲು ಅಶಕ್ತವಾಗಿತ್ತು. ಮತ್ತೆ ಮತ್ತೆ ಸೋಲಿನಿಂದ ಡಿಎಂಕೆ ಪಕ್ಷ ಕಂಗೆಟ್ಟು ಹೋಗಿತ್ತು. ಎ.ಐ.ಡಿ.ಎಂ.ಕೆ. ಪಕ್ಷ ಮೇಲುಗೈ ಸಾಧಿಸಿತ್ತು. ಆದರೆ ಇದೀಗ ಎ.ಐ.ಡಿ.ಎಂ.ಕೆ. ಸಮರ್ಥವಾಗಿಲ್ಲ. ಮನೆಯೊಂದು ಮೂರು ಬಾಗಿಲಿನಂತಾಗಿರುವ ಈ ಪಕ್ಷ ದಾರಿ ತಪ್ಪಿದೆ. ಈ ಪಕ್ಷ ಇನ್ನಷ್ಟು ಸಧೃಢವಾಗಿರಬೇಕು ಹಾಗೂ ಮುಂದಿನ ಬಾರಿಯೂ ಅಧಿಕಾರ ಹಿಡಿಯಬೇಕೆಂದರೆ ಭಾರತೀಯ ಜನತಾ ಪಕ್ಷದ ಬೆಂಬಲ ಬೇಕಾಗುತ್ತದೆ. ಹಾಗೂ ಇದಕ್ಕೆ ರಜನಿಕಾಂತ್ ಅವರೂ ಬೆಂಬಲ ನೀಡಿದ್ದೇ ಆದಲ್ಲಿ ಮೋದಿ ಅಲೆ ತಮಿಳುನಾಡಿನಲ್ಲೂ ಮೋಡಿ ಮಾಡೋದ್ರಲ್ಲಿ ಅಚ್ಚರಿಯಿಲ್ಲ.

ತನ್ನದೇ ಪಕ್ಷದ ಸೈನ್ಯವನ್ನು ಕಮಲ ಪಾಳಯ ಸಂಘಟಿಸುತ್ತಿದೆ. ತಮಿಳುನಾಡಿನ ಪುದುಚೇರಿಯಲ್ಲಿ ಈಗಾಗಲೇ 10000 ಕಾರ್ಯಕರ್ತರನ್ನು ಸಂಘಟಿಸಿ ಬೂತ್ ಸಬಲೀಕರಣದತ್ತ ಬಿಜೆಪಿ ಪಕ್ಷವನ್ನು ಸಂಘಟಿಸುತ್ತಿದೆ. ಡಿಎಂಕೆ ಪಕ್ಷದ ನಾಯಕ, ಕರುಣಾ ನಿಧಿಯವರ ಮಗ ಸ್ಟಾಲಿನ್ ಇದ್ದರೂ ಬಿಜೆಪಿ ಹಾಗೂ ರಜನಿಕಾಂತ್ ಒಂದಾದರೆ ಅವರನ್ನು ಎದುರಿಸೋದು ಕಷ್ಟ. ರಜನಿಕಾಂತ್‍ಗೂ ಒಬ್ಬಂಟಿಯಾಗಿ ಪಕ್ಷವನ್ನು ಗೆಲ್ಲಿಸೋದು ಸುಲಭದ ಮಾತಲ್ಲ. ಅತ್ತ ಕಮಲ್ ಹಸನ್ ಪಕ್ಷ ಸಂಘಟಿಸುತ್ತಿದ್ದರೂ ಅವರ ಮೇಲೆ ಜನರಿಗೆ ಉತ್ತಮ ಅಭಿಪ್ರಾಯವಿಲ್ಲ. ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಕಮಲ್ ಹಸನ್ ಜನರಿಂದ ದೂರವಾಗಿದ್ದಾರೆ. ಆದರೆ ರಜನಿಕಾಂತ್ ಮಾತ್ರ ನರೇಂದ್ರ ಮೋದಿ ರೀತಿಯ ನಡವಳಿಕೆಯಿಂದ ಹೆಸರಾಗಿದ್ದಾರೆ. ಹೀಗಾಗಿ ಇಂತಹಾ ನಾಯಕ ಬೇಕು ಎಂದು ಜನರೂ ಅಪೇಕ್ಷಿಸುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ಹಾಗೂ ರಜನಿಕಾಂತ್ ಒಂದಾದರೆ ತಮಿಳುನಾಡಿನಲ್ಲಿ ಮತ್ತೊಂದು ರಾಜಕೀಯ ಕ್ರಾಂತಿಗೂ ಒಳಗಾಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿದೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

4 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

4 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

4 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

4 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

4 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

4 days ago