ಚೆನ್ನೈ : 2021ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆ ರಣಾಂಗಣ ರಂಗೇರಿದೆ. ಇತ್ತ ಚುನಾವಣಾ ಪ್ರಚಾರ ಆರಂಭಿಸಿರುವ ಮಕ್ಕಳ್ ನೀಧಿ ಮೈಯ್ಸಮ್ ಮುಖಂಡ ನಟ ಕಮಲ್ ಹಾಸನ್ ಅವರ ಪ್ರಣಾಳಿಕೆ ಈಗ ಎಲ್ಲರ ಕುತೂಹಲ ಕೆರಳಿಸಿದೆ.
ಕಮಲ್ ಹಾಸನ್ ಅವರ ಪ್ರಣಾಳಿಕೆಯಲ್ಲಿ ಭರವಸೆಗಳ ಮಹಾಪೂರವೇ ಇದ್ದು, ತಮ್ಮ ಪಕ್ಷ ಗೆದ್ದರೆ ಗೃಹಿಣಿಯರ ಮನೆಗೆಲಸಕ್ಕೂ ವೇತನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಕಮಲ್ ಅವರ ಈ ಘೋಷಣೆ ತಮಿಳುನಾಡು ಸೇರಿದಂತೆ ದೇಶದಾದ್ಯಂತ ಭಾರಿ ಸದ್ದು ಮಾಡುತ್ತಿದೆ.
ಚುನಾವಣೆ ಹಿನ್ನೆಲೆಯಲ್ಲಿ ಏಳು ಅಂಶಗಳುಳ್ಳ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಕಮಲ್ ಹಾಸನ್ ಬಿಡುಗಡೆ ಮಾಡಿದ್ದಾರೆ.ಅದರಲ್ಲಿ ಒಂದು ವೇಳೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಜಯಗಳಿಸಿದ್ರೆ ಮನೆಯ ಜವಾಬ್ದಾರಿ ನಿರ್ವಹಿಸುವ ಮಹಿಳೆಯರಿಗೂ ಭತ್ಯೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಇದಲ್ಲದೆ ಮನೆಯ ಎಲ್ಲಾ ಮಂದಿಗೆ ಕಂಪ್ಯೂಟರ್ ಜೊತೆ ಅತಿ ವೇಗದ ಇಂಟರ್ ನೆಟ್ ಆಶ್ವಾಸನೆ ನೀಡಿದ್ದಾರೆ.
ಇಷ್ಟು ವರ್ಷಗಳಿಂದ ಮಹಿಳೆಯರು ನಿತ್ಯದ ಅಗತ್ಯ ಮನೆಗೆಲಸಗಳನ್ನು ಮಾಡುತ್ತಿದ್ದರೂ ಅದನ್ನು ಸರಿಯಾಗಿ ಗುರುತಿಸಿ ಗೌರವಿಸಲಾಗಿಲ್ಲ. ಗೌರವಧನ ರೂಪದಲ್ಲಿ ವೇತನ ನೀಡುವ ಮೂಲಕ ಅವರಿಗೆ ಸಲ್ಲತಕ್ಕ ಘನತೆಯನ್ನು ಎಂಎನ್‌ಎಂ ಕೊಡಿಸಲಿದೆ. ಅಲ್ಲದೆ ಪ್ರತಿ ಮನೆಗೆ ಆಪ್ಟಿಕಲ್ ಫೈಬರ್ ಮೂಲಕ ಹೈಸ್ಪೀಡ್ ಅಂತರ್ಜಾಲವನ್ನು ಒದಗಿಸಲಾಗುವುದು. ಈ ಮೂಲಕ ಮಹಿಳಾ ಸಬಲೀಕರಣಕ್ಕೆ ತಮ್ಮ ಪಕ್ಷ ಆಡಳಿತಕ್ಕೆ ಬಂದಾಗಿನಿಂದ ಶ್ರಮಿಸಲಿದೆ,” ಎಂದು ಹಾಸನ್ ತಿಳಿಸಿದ್ದಾರೆ. ಒಟ್ಟು 7 ಸೂತ್ರಗಳ ಅಜೆಂಡಾಗಳನ್ನು ಹೊಂದಿರುವ ಅವರ ಘೋಷಣಾ ಪತ್ರದ ಜತೆಗೆ ಹಾಸನ್ ಅವರು ಉತ್ತರ ಭಾಗದ ತಮಿಳುನಾಡಿನಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದೊಂದು ಮಿನಿ ಪ್ರಣಾಳಿಕೆ ಇದ್ದಂತೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುಳ್ಯ: ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ ಸುಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು…
ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆ ತಿರುಚಲಾಗಿದೆ : ಸಿಎಂ ಬೆಂಗಳೂರು: ನನಗೆ ಮದ…
ಎಂಆರ್‌ಪಿಎಲ್ ಜೀವಂತ ಜ್ವಾಲಾಮುಖಿಯಾಗದಂತೆ ಎಚ್ಚರ ವಹಿಸಿ: ಸತ್ಯಜಿತ್ ಸುರತ್ಕಲ್ ಮಂಗಳೂರು: ಎಂಆರ್‌ಪಿಎಲ್‌ನಂತಹ ಸಂಸ್ಥೆ ಕರಾವಳಿಯಲ್ಲಿರುವುದು ಹೆಮ್ಮೆಯ ವಿಚಾರವಾದರೂ, ಆಡಳಿತ ವರ್ಗ…
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ…
ಕಾರ್ಕಳ: ಉದ್ಯಮಿ ಮಂಜುನಾಥ್ ಪೈ ನೇಣು ಬಿಗಿದು ಆತ್ಮಹತ್ಯೆ ಕಾರ್ಕಳ: ಜೋಡು ರಸ್ತೆಯ ಅಪಾರ್ಟ್‌ಮೆಂಟ್ ಕಟ್ಟಡದ ಕೆಳಭಾಗದಲ್ಲಿ ಉದ್ಯಮಿ ಮಂಜುನಾಥ್…
ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ ಬೆಂಗಳೂರು:…