Featured

ತಮ್ಮ ದೇಶದಲ್ಲಿ 40 ವಿವಿಧ ಉಗ್ರ ಸಂಘಟನೆಗಳು ಸಕ್ರಿಯವಾಗಿದೆ : ಪಾಕ್ ಪ್ರಧಾನಿ ಇಮ್ರಾನ್ ಖಾನ್ – Vishwanews24

ವಾಷಿಂಗ್ಟನ್ : ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಮ್ಮ ದೇಶದಲ್ಲಿ 40 ವಿವಿಧ ಉಗ್ರ ಸಂಘಟನೆಗಳು ಸಕ್ರಿಯವಾಗಿದೆ ಎಂಬ ಸತ್ಯವನ್ನು ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನ ಕಾಂಗ್ರೆಸ್‍ ನ ಅಧ್ಯಕ್ಷೆ ಶೀಲಾ ಜಾಕ್ಸನ್ ವಾಷಿಂಗ್ಟನ್‍ ನ ಕ್ಯಾಪಿಟಲ್ ಹಿಲ್‍ ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಸೆ.11ರಂದು ನ್ಯೂಯಾಕ್ ಮತ್ತು ವಾಷಿಂಗ್ಟನ್ ಮೇಲೆ ನಡೆದ ಭಯೋತ್ಪಾದಕರ ದಾಳಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ.

ಇದು ಅಫ್ಘಾನಿಸ್ತಾನದ ಅಲ್-ಖೈದಾ ಉಗ್ರರ ಕೃತ್ಯ. ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರಗಾಮಿಗಳು ಇಲ್ಲ. ಆದರೆ ನಾವು ಅಮೆರಿಕಾದ ಹೋರಾಟದ ಭಾಗವಾದೆವು. ದುರದೃಷ್ಟವಶಾತ್ ಎಲ್ಲವೂ ತಪ್ಪಾಗಿ ಹೋದಾಗ, ತಳ ಮಟ್ಟದ ಸತ್ಯವನ್ನು ನಾವು ಅಮೆರಿಕಾಗೆ ಹೇಳಿರಲಿಲ್ಲ ಎಂದು ಹೇಳಿದ್ದಾರೆ. ಹಾಗೇ ಪಾಕಿಸ್ತಾನದ ಸರಕಾರಗಳಿಗೆ ಅವುಗಳ ಮೇಲೆ ಹಿಡಿತವಿರಲಿಲ್ಲ.

40 ವಿವಿಧ ಉಗ್ರ ಸಂಘಟನೆಗಳು ಪಾಕಿಸ್ತಾನದಲ್ಲಿ ಕಾರ್ಯಾಚರಿಸುತ್ತಿದ್ದವು. ಇದರಿಂದ ಬಚಾವ್ ಆಗಬಹುದೇ ಎಂದು ನಮ್ಮಂತಹ ಜನರು ಕಳವಳ ಹೊಂದಿದ್ದೆವು. ನಮ್ಮಿಂದ ಇನ್ನಷ್ಟು ಹೆಚ್ಚಿನದನ್ನು ಅಮೆರಿಕಾ ನಿರೀಕ್ಷಿಸುತ್ತಿದ್ದಾಗ ಪಾಕಿಸ್ತಾನ ಆಗ ತನ್ನದೇ ಅಸ್ತಿತ್ವಕ್ಕಾಗಿ ಹೋರಾಡುತ್ತಿತ್ತು’ ಎಂದು ಸತ್ಯ ಹೇಳದೇ ಇರದಿರುವುದರ ಹಿಂದಿನ ಕಾರಣವೆನೆಂಬುದನ್ನು ಅವರು ಬಿಚ್ಚಿಟ್ಟಿದ್ದಾರೆ.

Vishwa News 24

Recent Posts

ಪ್ರಧಾನಿಯಾಗಿ ಮೋದಿ ಸರ್ಕಾರಕ್ಕೆ 12 ವರ್ಷ: ನೆಹರೂ ದಾಖಲೆ ಮುರಿದ ನಮೋ – vishwanews24

ಪ್ರಧಾನಿಯಾಗಿ ಮೋದಿ ಸರ್ಕಾರಕ್ಕೆ 12 ವರ್ಷ: ನೆಹರೂ ದಾಖಲೆ ಮುರಿದ ನಮೋ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ದೀರ್ಘಕಾಲ ನಿರಂತರ ಅಧಿಕಾರ…

15 minutes ago

ಉಡುಪಿ : ಜೂ.12 ರಂದು ನೇರ ಸಂದರ್ಶನ – vishwanews24

ಉಡುಪಿ : ಜೂ.12 ರಂದು ನೇರ ಸಂದರ್ಶನ ಉಡುಪಿ : ನಗರದ ಮಣಿಪಾಲದ ಮನೋಹರ್ ಭವನ್ ಹೋಟೆಲ್ ಮುಂಭಾಗದ ಮಣಿಪಾಲ್…

21 minutes ago

ಜೂ.12ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ  ತಮಿಳುನಾಡು ಸಿಎಂ ಭೇಟಿ – vishwanews24

ಜೂ.12ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ  ತಮಿಳುನಾಡು ಸಿಎಂ ವಿಜಯ್ ಭೇಟಿ ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಜೂನ್…

28 minutes ago

ಉಡುಪಿ : ಜೂ.11ರಂದು ಖಾಸಗಿ ಬಸ್ ದರ ಏರಿಕೆ ಖಂಡಿಸಿ ಸಿಪಿಎಂ ಪ್ರತಿಭಟನೆ – vishwanews24

ಉಡುಪಿ : ಜೂ.11ರಂದು ಖಾಸಗಿ ಬಸ್ ದರ ಏರಿಕೆ ಖಂಡಿಸಿ ಸಿಪಿಎಂ ಪ್ರತಿಭಟನೆ ಉಡುಪಿ : ರಾಜ್ಯದ ಖಾಸಗಿ ಬಸ್…

50 minutes ago

ಮಲ್ಪೆ ಬಂದರು ಪ್ರವೇಶ ದ್ವಾರ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭ :ಯಶ್ಪಾಲ್ ಸುವರ್ಣ – vishwanews24

ಮಲ್ಪೆ ಬಂದರು ಪ್ರವೇಶ ದ್ವಾರ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭ :ಯಶ್ಪಾಲ್ ಸುವರ್ಣ ಮಳೆಗಾಲದ ಹಿನ್ನೆಲೆಯಲ್ಲಿ ಮಲ್ಪೆ ಮೀನುಗಾರಿಕಾ…

2 hours ago

ಗುರುತಿನ ಚೀಟಿ ಇಲ್ಲದೆ ಪಬ್, ಬಾರ್ ಮತ್ತು ಕ್ಲಬ್‌ಗಳಿಗೆ ಪ್ರವೇಶವಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ – vishwanews24

ಗುರುತಿನ ಚೀಟಿ ಇಲ್ಲದೆ ಪಬ್, ಬಾರ್ ಮತ್ತು ಕ್ಲಬ್‌ಗಳಿಗೆ ಪ್ರವೇಶವಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರು : ಅಪ್ರಾಪ್ತ…

2 hours ago