ಪಡುಬಿದ್ರಿ :ಪಡುಬಿದ್ರಿ ಹಿಂದೂ ಜಾಗರಣ ವೇದಿಕೆ ಸಹಸಂಚಾಲಕ, ನಂದಿಕೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಪಡುಬಿದ್ರಿ ಭಗವತಿ ಗ್ರೂಪಿನ ಸದಸ್ಯರಾದ ಶ್ರೀ ಸುಹಾಸ್ ಶೆಟ್ಟಿ ನಟವರ್ಯ ಮತ್ತು ಶ್ರೀಮತಿ ಜಯಶ್ರೀ ಇವರ ಸುಪುತ್ರ ಮಾ|ಹರ್ಷಿಲ್ ಇವರ ಒಂದನೇ ವರ್ಷದ ಹುಟ್ಟು ಹಬ್ಬವನ್ನು ವಿಜೇತ ವಿಶೇಷ ಶಾಲೆಯಲ್ಲಿ ದೇವರ ಮಕ್ಕಳೊಂದಿಗೆ ಆಚರಿಸಿ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಿದರು ಮತ್ತು ಶಾಲೆಗೆ ಮಗನ ಹುಟ್ಟುಹಬ್ಬದ ಪ್ರಯುಕ್ತ ರೂ 5000 ದೇಣಿಗೆಯಾಗಿ ನೀಡಿದರು.
ಹಲವಾರು ಸಮಾಜಮುಖಿ ಕಾರ್ಯಗಳೊಂದಿಗೆ ಗುರುತಿಸಿಕೊಂಡಿರುವ ಸುಹಾಸ್ ಶೆಟ್ಟಿಯವರೂ ಹಿಂದಿನಿಂದಲೂ ವಿಜೇತ ವಿಶೇಷ ಶಾಲೆಯ ದೇವರ ಮಕ್ಕಳಿಗೆ ಸಹಾಯಹಸ್ತಿಗಳಾಗಿದ್ದು,ಪ್ರಸ್ತುತ ತಮ್ಮ ಸ್ವಂತ ಮಗನ ಹುಟ್ಟು ಹಬ್ಬವನ್ನು ವಿಶೇಷ ಮಕ್ಕಳೊಂದಿಗೆ ಆಚರಿಸುವ ಮೂಲಕ ಆಡಂಬರದ ಆಚರಣೆಗೆ ವಿಮುಕ್ತಿ ನೀಡಿ ಮಾನವೀಯ ಮೌಲ್ಯಕ್ಕೆ ಮನ್ನಣೆ ನೀಡಿದ್ದು,ಸರ್ವರ ಶ್ಲಾಘನೆಗೆ ಪಾತ್ರರಾಗಿದ್ದರೆ.
ಈ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಭಗವತಿ ಗ್ರೂಪಿನ ಸದಸ್ಯರಾದ ಯುವರಾಜ್ ಕುಲಾಲ್, ಸಂದೇಶ್ ಪಾದೆಬೆಟ್ಟು, ಸಂತೋಷ ನಂದಿಕೂರು, ಸುಜಿತ್ ಕುಲಾಲ್ , ಅಕ್ಷಿತ್ ಭಂಡಾರಿ, ಸಂತೋಷ ಶೆಟ್ಟಿ ಪಾದೆಬೆಟ್ಟು, ದಿಲೀಪ್ ಕುಮಾರ್ ಕಾಸರಗೋಡು, ಮನೋಹರ್ ಬಾಲು ಉಪಸ್ಥಿತರಿದ್ದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…