ಮಂಗಳೂರು,: ಗೋಕಳ್ಳರಿಗೆ ಪೊಲೀಸರು ನೆರವು ನೀಡುತ್ತಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆರೋಪಿಸಿದ್ದು, ತಲವಾರು ಹಿಡಿದ ಗೋಕಳ್ಳರಿಗೆ ಅದೇ ತಲವಾರಿನಿಂದ ಉತ್ತರ ಕೊಡಲು ನಮಗೆ ಗೊತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಬಂದಾರು ಬಳಿ ಅಕ್ರಮ ಗೋಸಾಗಟದಲ್ಲಿ ಮೂರು ಹಸುಗಳನ್ನು ಅಮಾನುಷ ರೀತಿಯಲ್ಲಿ ಕಟ್ಟಿ ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದ ಗೋಕಳ್ಳರನ್ನು ಉಪ್ಪಿನಂಗಡಿಯ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಖಚಿತ ಮಾಹಿತಿಯ ಮೇರೆಗೆ ಗೋಕಳ್ಳರ ವಾಹನ ತಡೆದು ಗೋಕಳ್ಳರನ್ನು ಹಿಡಿದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಗೋಕಳ್ಳರನ್ನು ಹಿಡಿದುಕೊಟ್ಟರು ಹಿಂದೂ ಸಂಘಟನೆಯ ಕಾರ್ಯಕರ್ತರನ್ನೇ ವಶಕ್ಕೆ ಪಡೆದು ಬಂಧಿಸಿ ಕೇಸು ದಾಖಲು ಮಾಡಿದ್ದಾರೆ.
ಹಲ್ಲೆಗೈದವರ ಬಂಧನ ವಿರೋಧಿಸಿ ಸಂಘಪರಿವಾರ ಕಾರ್ಯಕರ್ತರು ಉಪ್ಪಿನಂಗಡಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ, ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಸ್ಥಳಕ್ಕಾಗಮಿಸಿದ ಶಾಸಕ ಹರೀಶ್ ಪೂಂಜಾ ಮಾತನಾಡಿ, ಇಂತಹ ಘಟನೆ ನಡೆದಾಗ ಸಾರ್ವಜನಿಕರು ಸೇರುವುದು ಸಹಜ. ಪೊಲೀಸರು ಸಾರ್ವಜನಿಕರಿಗೆ ಲಾಠಿಚಾರ್ಜ್ ಮಾಡಿದ್ದಾರೆ. ಅಲ್ಲಿದ್ದ ವಾಹನಗಳನ್ನು ಯಾವುದೇ ಸುರಕ್ಷತೆಯಿಲ್ಲದೆ ಲಾರಿಯಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ. ಪ್ರಧಾನ ಆರೋಪಿಯನ್ನು ಬಿಟ್ಟು ಸ್ಥಳದಲ್ಲಿದ್ದ ಮೂವರನ್ನು ಶರ್ಟ್ ಪ್ಯಾಂಟ್ ಬಿಚ್ಚಿಸಿ ನಿಲ್ಲಿಸಿದ್ದಾರೆ ಎಂದು ಆರೋಪಿಸಿದರು.
‘ಪೊಲೀಸ್ ಇಲಾಖೆಯ ಮಾನಸಿಕತೆ ಏನು ಎಂದು ನಾನು ಪ್ರಶ್ನಿಸುತ್ತಿದ್ದೇನೆ. ಗೋಕಳ್ಳರನ್ನು ಪೊಲೀಸರು ರಕ್ಷಿಸುತ್ತಿದ್ದಾರೆ. ಗೋಕಳ್ಳತನ ತಡೆದ ಜನರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ನಾವು ಗೋವಿನ ವಿಚಾರದಲ್ಲಿ ಹಿಂದುತ್ವದ ವಿಚಾರದಲ್ಲಿ ಪ್ರಾಣಕ್ಕೆ ಪ್ರಾಣ ಕೊಡಲು ಸಿದ್ಧವಿದ್ದೇವೆ. ಶಾಸಕ ಎನ್ನುವುದಕ್ಕೆ ಮೊದಲು ನಾನು ಹಿಂದೂ. ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ‘ಎಲ್ಲದಕ್ಕೂ ಸಿದ್ಧ’ವಾಗಿದ್ದೇವೆ. ತಲವಾರು ಹಿಡಿದು ಗೋಕಳ್ಳತನ ಮಾಡುವವರಿಗೆ ಅದೇ ತಲವಾರಿನಿಂದ ಉತ್ತರ ಕೊಡಲು ನಮಗೆ ಗೊತ್ತಿದೆ’ ಎಂದವರು ಹೇಳಿದರು.
ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…
ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…
ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…
ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ…
ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…
ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…