ತುಮಕೂರು: ಕಳೆದ ವರ್ಷ 45 ವರ್ಷದ ವ್ಯಕ್ತಿ ಜೊತೆಗೆ 25ರ ಯುವತಿ ಮದುವೆಯಾಗಿದ್ದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಆದರೀಗ ಈ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಂಕರಣ್ಣ(45) ಮೃತ ದುರ್ದೈವಿಯಾಗಿದ್ದು, ಕಳೆದ ವರ್ಷ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಬಳಿಯಿರುವ ಅಕ್ಕಿಮರಿಪಾಳ್ಯದ ಶಂಕರಣ್ಣ ಮತ್ತು ಮೇಘನಾ ಅವರ ಮದುವೆ ನಡೆದಿತ್ತು.
ಆದರೆ ಮದುವೆಯಾದ ಐದು ತಿಂಗಳಿನಲ್ಲಿಯೇ ಶಂಕರಣ್ಣ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಮೂರ್ನಾಲ್ಕು ದಿನದಿಂದ ಗಂಡ, ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಹೀಗಾಗಿ ಕೋಪ ಮಾಡಿಕೊಂಡು ಸೋಮವಾರ ಮನೆ ಬಿಟ್ಟು ಹೋಗಿದ್ದ ಶಂಕರಣ್ಣನವರು, ಕುಣಿಗಲ್ ತಾಲೂಕಿನ ಅಕ್ಕಿಮರಿಪಾಳ್ಯದಲ್ಲಿದ್ದ ತಮ್ಮ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
2021ರ ಅಕ್ಟೋಬರ್ 21ರಂದು ಈ ಜೋಡಿ ಮದುವೆಯಾಗಿತ್ತು. ಇಬ್ಬರ ನಡುವೆ 15 ವರ್ಷ ಅಂತರವಿದ್ದರೂ ಮದ್ವೆಯಾಗಿದ್ದರು, ಮೇಘನಾ ಶಂಕರಣ್ಣಗಿಂದಲೂ 15 ವರ್ಷ ಚಿಕ್ಕವರಾಗಿದ್ದು, ಇದೇ ಕಾರಣಕ್ಕೆ ದೇಶಾದ್ಯಂತ ಈ ಜೋಡಿ ವೈರಲ್ ಆಗಿತ್ತು. ಖುದ್ದು ಶಂಕರಣ್ಣ ಬಳಿ ಮೇಘನಾ ಮದ್ವೆ ನಿವೇದನೆ ಮಾಡಿದ್ದರು. ಆವರೆಗೂ ಮದುವೆಯಾಗದ ಶಂಕರಣ್ಣ ಯುವತಿಯನ್ನ ಒಪ್ಪಿದ್ದರು. ಸಮೀಪದ ದೇವಾಲಯದಲ್ಲಿ ಶಂಕರ್-ಮೇಘನಾ ಮದುವೆಯಾಗಿದ್ದರು.
ಮೈಸೂರು: ಕಾಲೇಜು ಕ್ಯಾಂಪಸ್ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…
ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…
ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…
ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ…
ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…
ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…