Featured

ತುಳುನಾಡ ಕಂಬಳದಲ್ಲಿ ಮಿಂಚುತ್ತಿರುವ ಕಾಪು ಕಲ್ಯಾದ ಯುವಕರ ತಂಡ,ಕಟಪಾಡಿ ಕಂಬಳದಲ್ಲೂ ಭಾಗವಹಿಸುವ ನಿರೀಕ್ಷೆ.

ತುಳುನಾಡ ಕಂಬಳದಲ್ಲಿ ಮಿಂಚುತ್ತಿರುವ ಕಾಪು ಕಲ್ಯಾದ ಯುವಕರ ತಂಡ,ಕಟಪಾಡಿ ಕಂಬಳದಲ್ಲೂ ಭಾಗವಹಿಸುವ ನಿರೀಕ್ಷೆ.

ಕಾಪು: ದೇಶ ವಿದೇಶದಲ್ಲಿ ಹೆಸರು ಪಡೆದಿರುವ ತುಳುನಾಡಿನ‌ ಕಂಬಳ ಕೂಟಗಳಲ್ಲಿ ಒಂದಿಷ್ಟು ಯುವಕರ ತಂಡ ಕೋಣ ಓಡಿಸುವ ಮೂಲಕ‌ ಹೊಸ ಮುನ್ನುಡಿ ಬರೆಯುತ್ತಿದ್ದಾರೆ ಹಾಗದರೇ ಆ ಯುವಕರು ಯಾರು ಎಂಬುದರ ಡೀಟೆಲ್ಸ್ ಇಲ್ಲಿದೆ.

ಹೌದು ಕಾಪು ಕಲ್ಯಾದ ಯುವಕರ ತಂಡವೊಂದು ಹಿರಿಯರ ಮಾರ್ಗದರ್ಶನದೊಂದಿಗೆ ತುಳುನಾಡಿನ‌ ಕಂಬಳ ಕೂಟಗಳಲ್ಲಿ ಭಾಗವಹಿಸಿ ಕೋಣ ಓಡಿಸುವ ಮೂಲಕ ಸಂಪ್ರದಾಯವನ್ನ‌ ಮುಂದುವರಿಸುತ್ತಿರುವುದು ಎಲ್ಲೆಡೆ ಸುದ್ದಿಯಾಗುತ್ತಿದೆ.

ಕಾಪು ಕಲ್ಯಾ ಜವನೆರ್ ನಾಮಾಕಿಂತದೊಂದಿಗೆ ಕಟಪಾಡಿ ಬೀಡು ಮೂಡು-ಪಡು ಕಂಬಳ ಕೂಟದಲ್ಲಿಯೂ ನೇಗಿಲು ಹಿರಿಯ A ಮತ್ತು B  ವಿಭಾಗದಲ್ಲಿ ಕೋಣ ಓಡಿಸುವ ಇರಾದೆಯನ್ನು ಇಟ್ಟುಕೊಂಡಿದ್ದಾರೆ.

ಹದಿಹರೆಯ ಯುವಕರು ಸಾಮಾನ್ಯವಾಗಿ ನಗರದ ಜೀವನಕ್ಕೆ ಹೊಂದಿಕೊಂಡು ಸಾಂಪ್ರದಾಯ ಕ್ರೀಡೆಯನ್ನ ಮರೆಯುತ್ತಿರುವ ಈ ಯುಗದಲ್ಲಿ ತುಳುನಾಡ ಕಂಬಳವನ್ನ‌ ಉಳಿಸಿ ಬೆಳೆಸುವ ನಿರ್ಧಾರದಿಂದ ಈ ರೀತಿಯ ಕಾರ್ಯಗಳು ನಡೆಯುತ್ತಿರುವುದು ಎಲ್ಲೆಡೆ ಶ್ಲಾಘನೀಯವಾಗಿದೆ.

ಈ ಬಗ್ಗೆ ಹಿರಿಯ ಕಂಬಳ ಕೋಣಗಳ ಯಜಮಾನರಾಗಿದ್ದ  ದಿವಂಗತ ಮುಂಡ್ಕೂರು ಯತೀಶ್ ಶೆಟ್ಟಿಯವರ ಪುತ್ರ ನಡಿಕರೆ ಸಚಿನ್ ಶೆಟ್ಟಿ ಹೀಗೆ ಅನ್ನುತ್ತಾರೆ ” ತುಳುನಾಡಿನ ಸಾಂಪ್ರದಾಯಿಕ ಕಂಬಳಕೂಟವು ಮುಂದುವರಿಯಬೇಕು ಮತ್ತು ಯುವಕರಿಗೂ ಅದರ ಬಗ್ಗೆ ಮಾಹಿತಿ ಹಾಗೂ ಆಸಕ್ತಿಮೂಡಬೇಕು ಅನ್ನುವ ಉದ್ದೇಶದಿಂದ ಯುವಕರೆಲ್ಲ ಒಗ್ಗಟ್ಟಾಗಿ ಕಂಬಳ ಕೂಟದಲ್ಲಿ ಭಾಗವಹಿಸುತ್ತಿದ್ದೇವೆ,ಈ ಭಾರಿಯ ಕಟಪಾಡಿ ಕಂಬಳದಲ್ಲಿ ಕೂಡ ಭಾಗವಹಿಸುವ ಇಚ್ಛೆಯನ್ನ ಇಟ್ಟುಕೊಂಡಿದ್ದೇವೆ ಮತ್ತು ಬಹುಮಾನ ಪಡೆಯುವುವ ಗುರಿಯಿದೆ .

ಒಟ್ಟಾರೆಯಾಗಿ ಪೇಟಾ ನಿರ್ಧಾರದಿಂದ ತೂಗುಕತ್ತಿಯಲ್ಲಿರುವ ಕಂಬಳಕೂಟವು ನಿಂತುಹೋಗುವ ಸಮಯದಲ್ಲೂ ಯುವಕರ ಪಡೆ ಕಂಬಳದಲ್ಲಿ ಆಸಕ್ತಿ ತೋರಿಸುತ್ತಿರುವುದು ಮತ್ತು ಸಕ್ರಿಯವಾಗಿ ಭಾಗವಹಿಸುತ್ತಿರುವುದು ಶ್ಲಾಘನೀಯವೆ ಸರಿ.

 


 

 

Add
Vishwa News 24

Recent Posts

ಉಡುಪಿ : ಯುವತಿ ನಾಪತ್ತೆ -vishwanews24

ಉಡುಪಿ : ಯುವತಿ ನಾಪತ್ತೆ ಉಡುಪಿ : ಉಡುಪಿ ಸವೀಸ್ ಬಸ್ ನಿಲ್ದಾಣದ ಬಳಿ ಇರುವ ಹೊಲಿಗೆ ತರಬೇತಿ ಕೇಂದ್ರದಲ್ಲಿ…

5 hours ago

ಪಡುಬಿದ್ರಿ : ವ್ಯಕ್ತಿ ನಾಪತ್ತೆ -vishwanews24

ಪಡುಬಿದ್ರಿ : ವ್ಯಕ್ತಿ ನಾಪತ್ತೆ ಉಡುಪಿ: ಎಲ್ಲೂರು ಗ್ರಾಮ ಅದಮಾರು ಅಂಚೆ ಅಂಬೇಡ್ಕರ್ ರೋಡ್ ಆಶಿರ್ವಾದ ಹೌಸ್ ನಿವಾಸಿ ಹರ್ಷಲ್…

5 hours ago

ತುಳು ಭಾಷೆಯ ಮಾನ್ಯತೆ ಕೇವಲ ಉಡುಪಿ-ದ.ಕ. ಜಿಲ್ಲೆಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ : ಪ್ರಮೋದ್ ಮಧ್ವರಾಜ್ -vishwanews24

ತುಳು ಭಾಷೆಯ ಮಾನ್ಯತೆ ಕೇವಲ ಉಡುಪಿ-ದ.ಕ. ಜಿಲ್ಲೆಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ : ಪ್ರಮೋದ್ ಮಧ್ವರಾಜ್ ಉಡುಪಿ: ತುಳು ಭಾಷೆಗೆ ಅಧಿಕೃತ…

6 hours ago

ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ -vishwanews24

ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ ಉಡುಪಿ: ನೂತನ ಜಿಲ್ಲಾಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಶೀಘ್ರ…

6 hours ago

ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ  , ಪುತ್ರ ನಾಪತ್ತೆ ;  ಪ್ರಕರಣ ದಾಖಲು -vishwanews24

ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ  , ಪುತ್ರ ನಾಪತ್ತೆ ;  ಪ್ರಕರಣ ದಾಖಲು…

9 hours ago

ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ -vishwanews24

ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ ಮಂಗಳೂರು: ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು…

9 hours ago