ಮಂಗಳೂರು: ಮಂಗಳೂರಿನ ಸರಕಾರಿ ಕಛೇರಿ ಹಾಗೂ ಬಸ್ಸುಗಳಲ್ಲಿ ಕನ್ನಡ ಕಡ್ಡಾಯ ಮಾಡಿ ತುಳು ಭಾಷೆಯ ಮೇಲೆ ಸವಾರಿ ಮಾಡಿದ್ದಲ್ಲದೆ ದ.ಕ ಜಿಲ್ಲೆ ಸೇರಿ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಎಂದು ಸಚಿವ ಸುನೀಲ್ ಕುಮಾರ್‌ರವರು ಹೇಳಿಕೆ ನೀಡಿದ ವಿರುದ್ಧ ಇಂದು ಮಂಗಳೂರಿನ ಕ್ಲಾಕ್ ಟವರ್ ಎದುರುಗಡೆ ತುಳು ಭಾಷೆ ಸಂರಕ್ಷಣಾ ಸಮಿತಿಯವರು ಪ್ರತಿಭಟನೆ ನಡೆಸಿದರು.
ಈ ವೇಳೆ ಅದೇ ದಾರಿಯಲ್ಲಿ ಸಾಗುತ್ತಿದ್ದ ಶಾಸಕರಾದ ವೇದವ್ಯಾಸ ಕಾಮತ್‌ರವರು ಭೇಟಿ ಕೊಟ್ಟು ತುಳು ಪರವಾಗಿ ಹೋರಾಟ ಮಾಡುವವರಿಗೆ ಸಾಂತ್ವನ ಹೇಳಿ ನವರಾತ್ರಿ ಉತ್ಸವ ಮುಗಿದ ಕೂಡಲೇ ತುಳು ಅಧಿಕೃತ ಹಾಗೂ ೮ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ತುಳು ಸಂಘಟನೆಗಳನ್ನು ಒಟ್ಟು ಸೇರಿಸಿ ಮಹತ್ತರವಾದ ನಿರ್ಣಯವನ್ನು ತೆಗೆದು ಕೊಳ್ಳುವ ಹಾಗೆ ಸಚಿವರಾದ ಸುನೀಲ್ ಕುಮಾರ್ ಅವರಲ್ಲಿ ಮಾತನಾಡಿ, ಅವರು ಸಿಗುವ ದಿನಾಂಕವನ್ನು ನಿಗದಿ ಪಡಿಸಿ ತುರ್ತು ಮೀಟಿಂಗನ್ನು ಮಾಡುವ ಬಗೆ ಭರವಸೆ ನೀಡಿದರು.
ಇದನ್ನೂ ಓದಿ: ಎಚ್ಚರಿಕೆಯ ನಡೆ ಅಗತ್ಯ.. ನೋಡಿ ಇಂದಿನ ದಿನ ಭವಿಷ್ಯ.. ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564
ಮಂಗಳೂರಿನಲ್ಲಿ ತುಳುಲಿಪಿ ಬೋರ್ಡು ಹಾಕುವ ಬಗ್ಗೆ ಯಾರು ಅಡ್ಡಿ ಮಾಡುವುದಿಲ್ಲ. ಬಸ್ಸಿಗೆ ಬೇಕಾದವರು ಹಾಕ ಬಹುದು. ನನ್ನ ಕಛೇರಿಯಲ್ಲಿ ಕೂಡ ತುಳುಲಿಪಿ ಬೋರ್ಡ್ ಇದೆ ಎಂದು ಹೇಳಿ ಹೋರಾಟಗಾರರನ್ನು ಸಮದಾನ ಮಾಡಿದರು.
ಈ ಹೊತ್ತಿಗೆ ಇವರ ಜೊತೆ ರಾಜಕಾರಣಿ ಸಂತೋಷ್ ಕುಮಾರ್ ಬೋಳಿಯಾರ್ ಹಾಗೂ ಕಾರ್ಪೊರೇಟರ್ ಜಗದೀಶ್ ಅವರು ಭಾಗಿಯಾಗಿದ್ದರು.
ಅದಾದ ಮೇಲೆ ತುಳು ಸಂರಕ್ಷಣಾ ಸಮಿತಿಯವರು ”ಒರಿಪುಲೆ ಒರಿಪುಲೆ ತುಳು ಭಾಷೆ ಒರಿಪುಲೆ” ಘೋಷಣೆ ಕೂಗಿ ಬಸ್ಸಿಗೆ ತುಳು ಲಿಪಿ ಚಾರ್ಟ್ ಅಂಟಿಸಿದರು.
ಇದನ್ನೂ ಓದಿ: ಐಸಿಸಿ ಕಿವುಡರ ಟಿ20 ಟ್ರೋಫಿ : ಭಾರತ ತಂಡದಲ್ಲಿ ಸ್ಥಾನ ಪಡೆದ ಕುಂದಾಪುರದ ಪೃಥ್ವಿರಾಜ್ ಶೆಟ್ಟಿ – Vishwanews24
ಸರ್ಕಾರಿ ನೌಕರರ ಬಡ್ತಿಗೆ ಆಸ್ತಿ ವಿವರ ಸಲ್ಲಿಕೆ ಕಡ್ಡಾಯ: ತಮಿಳುನಾಡು ಸರ್ಕಾರದಿಂದ ಮಹತ್ವದ ಆದೇಶ ಚೆನ್ನೈ,: ರಾಜ್ಯದ ಎಲ್ಲಾ ಸರ್ಕಾರಿ…
ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ ಇಸ್ರೇಲ್‌ನ ಶೌರ್ಯ ಪ್ರಶಸ್ತಿ ಘೋಷಣೆ ಜೆರುಸಲೇಂ: ಫ್ಲೈದುಬೈ ವಿಮಾನದ ಅವಘಡ ತಪ್ಪಿಸಿ 174 ಪ್ರಯಾಣಿಕರ…
ಬೆಂಗಳೂರು: ಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆ ; ಬಸವನಗರ ಮುಖ್ಯರಸ್ತೆ 20 ದಿನ ಬಂದ್ ಬೆಂಗಳೂರು: ಕೆರೆ ಕಾಲುವೆಗೆ ಸೇತುವೆ…
ರಾಜ್ಯಾದ್ಯಂತ 45 ಐಸ್‌ಕ್ರೀಂ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: ಹಲವು ಕಡೆ ನಿಯಮ ಉಲ್ಲಂಘನೆ ಪತ್ತೆ 70…
ಮೈಸೂರು ದಸರಾಕ್ಕೆ ಕೇಮಾರು ಶ್ರೀ ಸಹಿತ ಜಿಲ್ಲೆಯ ಸ್ವಾಮೀಜಿಗಳಿಗೆ ಆಹ್ವಾನ ನೀಡಿದ ಮುಖ್ಯಮಂತ್ರಿ ಡಿಕೆಶಿ ಮೂಡುಬಿದಿರೆ : ಅ.11 ರಂದು…
ಕಾರ್ಕಳದಲ್ಲಿ ಕಾಂಗ್ರೆಸ್‌ನಿಂದ ‘ಸತ್ಯ ಮೇವ ಜಯತೆ’ ಬೃಹತ್ ಪ್ರತಿಭಟನಾ ಸಭೆ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಆರ್ಥಿಕ ಭದ್ರತೆ…