“ಕನ್ನಡ ಕಣ್ಮಣಿ ನಾಡನ್ನೆಲ್ಲ ನಕ್ಕು ನಲಿಸುತ್ತಾ,ಇಂದು ಕೇಂದ್ರ ಸರಕಾರದ ರಾಜ್ಯಸಭಾ ಸದಸ್ಯನಾಗಿ ಆಯ್ಕೆಯಾದದ್ದು ನಿಜಕ್ಕೂ ಕನ್ನಡ ನಾಡಿಗೊಂದು ಕಿರೀಟ ಇಟ್ಟ ಹಾಗಾಗಿದೆ.
ನಾನು ಯಾವತ್ತೂ ಅವರೊಡನೆ ಹೇಳುವ ಮಾತು ,’ ಅಪ್ರಾಪ್ತೇ ಪ್ರಾಪ್ತಿಃ ಯೋಗಃ.ಯೋಗಸ್ಯ ಪರಿರಕ್ಷಣಂ ಕ್ಷೇಮಃ ‘ ಎನ್ನುತ್ತಿದ್ದೆ. ಈಗ ಅಂತಹ ಸುಯೋಗ ಲಭಿಸಿದೆ. ಅವರು ನನ್ನೊಡನೆ ಮಾತನಾಡುವಾಗ ಇವತ್ತು ಮನದೊಳಗಿನ ಮುಕ್ತ ಭಾವನೆಯನ್ನು ಹೇಳಿ ಆನಂದ ಭಾಷ್ಪ ಉದುರಿಸಿದರು. ಯಾರಿಗೆ ಕರ್ಮಸ್ಥಾನದಲ್ಲಿ ಮಹಾ ಯೋಗಕಾರಕನಾಗಿ ಸ್ವಕ್ಷೇತ್ರದಲ್ಲಿ ಗುರು ಇರುತ್ತಾನೋ ಅಂತವರ ಭಕ್ತಿ ಶ್ರದ್ಧೆಗಳು ಎಂದೂ ವ್ಯರ್ಥವಾಗದು ಎಂದು ಪ್ರತೀಸಲವೂ ಹೇಳುತ್ತಿದ್ದೆ.ಅದು ಇಂದು ಫಲಿಸಿದೆ.ಅಂತಹ ದೈವ ಫಲಕ್ಕೆ ನಾನೇನು ಕೊಡಲಿ ಎಂಬ ಕೊರಗು ಅವರಲ್ಲಿತ್ತು.ಆದರೂ ಒಂದು ನಿರ್ಧಾರಕ್ಕೆ ಬಂದಂತಿತ್ತು, ಒಮ್ಮೆ ಕಂಬಳದ ಬಗ್ಗೆ ಬೆಂಬಲವಾಗಿ ಧ್ವನಿ ಎತ್ತಿದವರು ಚಿತ್ರರಂಗದಲ್ಲಿ ಜಗ್ಗೇಶ್ ಮಾತ್ರ. ಅಂತಹ ಸಂಬಂಧವು ತುಳುಭಾಷಿಗರ ಮೇಲೆ ಅವರಿಗಿತ್ತು.ಹಾಗೆ ನೋಡಿದರೆ ಕರಾವಳಿಯಲ್ಲಿ ಜಗ್ಗೇಶ್ ಸಿನಿಮಗಳ ತೀವ್ರ ಅಭಿಮಾನ ಇರುವವರೇ ಕಡಿಮೆ.ಇಷ್ಟವಿತ್ತು.ಆದರೆ ಘಟ್ಟದ ಮೇಲೆ ಇದ್ದಷ್ಟೇನಿಲ್ಲ. ಆದರೂ ತುಳು ಭಾಷಿಗರ ಮೇಲೆ ಅವರಿಗೆ ತುಂಬಾ ಅಭಿಮಾನ ಇದೆ ಎನ್ನುವುದಕ್ಕೆ ಒಂದು ವಿಚಾರ ನಾನು ಹೇಳಲೇ ಬೇಕು. ‘ ನನ್ನ ಶಕ್ತಿಮೀರಿ ತುಳುವನ್ನು ಎಂಟನೇ ಪರಿಚ್ಚೇದಕ್ಕೆ ಸೇರಿಸದೆ ಬಿಡೋದಿಲ್ಲ’ ಎಂಬ ಅದ್ಬುತ ಮಾತನ್ನು ಇಂದು ಹೇಳಿದರು. ಯಾರ ಮೂಲಕ ಯಾವುದನ್ನು ಭಗವಂತ ಮಾಡಿಸುತ್ರಾನೋ ಅದು ಅವನ ಇಚ್ಛೆಗೆ ಬಿಟ್ಟದ್ದು. ಏನೇ ಆಗಲಿ ಜಗ್ಗಣ್ಣ ನನ್ನ ಮನೆಯವನು,ನನ್ನ ತಮ್ಮ ಎಂದು ಹೇಳಲು ನನಗೆ ಹೆಮ್ಮೆ ಇದೆ.”
ಪ್ರಕಾಶ್ ಅಮ್ಮಣ್ಣಾಯ
ಖ್ಯಾತ ಜ್ಯೋತಿಷಿ -ಉಡುಪಿ
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…