Featured

ತೆಲಂಗಾಣದಲ್ಲಿ ಬಾಲಿವುಡ್ ನಟ  ಸೋನು ಸೂದ್  ದೇವಾಲಯ , ಮೂರ್ತಿ ಪ್ರತಿಷ್ಟಾಪಿಸಿ  ನಿತ್ಯವೂ ಪೂಜೆ, ಆರತಿ -Vishwanews24

ತೆಲಂಗಾಣದಲ್ಲಿ ಬಾಲಿವುಡ್ ನಟ  ಸೋನು ಸೂದ್  ದೇವಾಲಯ , ಮೂರ್ತಿ ಪ್ರತಿಷ್ಟಾಪಿಸಿ  ನಿತ್ಯವೂ ಪೂಜೆ, ಆರತಿ -Vishwanews24

ತೆಲಂಗಾಣ: ಕೊರೊನಾ ಸಾಂಕ್ರಾಮಿಕದ ಸಂಕಟ ಕಾಲದಲ್ಲಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಜನರ ನೆರವಿಗೆ ಧಾವಿಸಿದ ನಟ ಸೋನು ಸೂದ್ ಕಾರ್ಯಗಳಿಗೆ ಇಡೀ ದೇಶಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ದೇವಸ್ಥಾನವೊಂದನ್ನು ಕಟ್ಟಿ ಅದರಲ್ಲಿ ಸೋನು ಸೂದ್ ಅವರ ಮೂರ್ತಿ ಪ್ರತಿಷ್ಟಾಪಿಸಿ ಪೂಜಿಸಲಾಗುತ್ತಿದೆ.

ಬಾಲಿವುಡ್ ನಟ ಸೋನು ಸೂದ್ ಅವರ ಮಾನವೀಯ ಕಾರ್ಯವನ್ನು ಗುರುತಿಸಿದ ತೆಲಂಗಾಣದ ಸಿದ್ದಿಪೇಟ್​​ನಲ್ಲಿರುವ ದುಬ್ಬಾ ತಾಂಡಾದ ಜನರು ತೆಲಂಗಾಣದ ಸಿದ್ದಿಪೇಟೆ ಜಿಲ್ಲಾಧಿಕಾರಿಗಳ ಸಹಾಯದಿಂದ ನಟನಿಗೆ ಗೌರವಾರ್ಥವಾಗಿ ದೇವಾಲಯ ಕಟ್ಟಿದ್ದಾರೆ.

ದೇವಾಲಯದಲ್ಲಿ ಸೋನು ಸೂದ್ ವಿಗ್ರಹ ಮಾಡಿದ ಶಿಲ್ಪಿ ಮತ್ತು ಸ್ಥಳೀಯ ಜನರು, ವಿಗ್ರಹಕ್ಕೆ ಆರತಿ ಮಾಡಿ ಉದ್ಘಾಟಿಸಿದ್ದಾರೆ. ತಾಂಡಾದ ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಪನ್ನು ಧರಿಸಿ ಜಾನಪದ ಗೀತೆಗಳನ್ನು ಹಾಡಿದ್ದಾರೆ.

ಈ ಕುರಿತು ಮಾತನಾಡಿರುವ ಸ್ಥಳೀಯ ವ್ಯಕ್ತಿ, ಸೋನು ಸೂದ್ ಅವರು ಈ ಹಿಂದೆ ಜನರಿಗೆ ಸಹಾಯ ಮಾಡಿದ ರೀತಿ ಕೇವಲ ಭಾರತ ಮಾತ್ರವಲ್ಲ, ವಿಶ್ವಕ್ಕೆ ಮನ್ನಣೆ ನೀಡಿದೆ. ಅವರಿಗೆ ವಿಶ್ವಸಂಸ್ಥೆಯು ಎಸ್ ಡಿಜಿ ವಿಶೇಷ ಮಾನವೀಯ ಕ್ರಿಯೆ ಪ್ರಶಸ್ತಿ ಯನ್ನು ನೀಡಿ ಗೌರವಿಸಲ್ಪಟ್ಟಿದೆ. ಹೀಗಾಗಿ ನಮ್ಮ ಊರಿನ ಪರವಾಗಿ ಅವರಿಗೆ ದೇವಸ್ಥಾನ ಕಟ್ಟಲು ನಿರ್ಧರಿಸಿದೆವು ಎಂದಿದ್ದಾರೆ.

ಕೊರೊನಾ ಸಂಕಷ್ಟದ ಸಮಯದಲ್ಲಿ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಲು ಬಸ್ ಹಾಗೂ ವಿಮಾನದ ವ್ಯವಸ್ಥೆ ಮಾಡುವ ಮೂಲಕ ಸೋನು ಸೂದ್ ಭಾರೀ ಪ್ರಶಂಸೆಗೆ ಒಳಗಾಗಿದ್ದರು.

Vishwa News 24

Recent Posts

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕಿವೀಸ್ ಲೆಜೆಂಡ್ ಕೇನ್ ವಿಲಿಯಮ್ಸನ್ -vishwanews24

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕಿವೀಸ್ ಲೆಜೆಂಡ್ ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್‌ನ ಮಾಜಿ ನಾಯಕ ಕೇನ್ ವಿಲಿಯಮ್ಸನ್  ಅಂತರರಾಷ್ಟ್ರೀಯ ಕ್ರಿಕೆಟ್‌ಗೆ…

7 hours ago

ಕೊಲ್ಲೂರು ಮೂಕಾಂಬಿಕೆಗೆ 1.6 ಕೆಜಿ ತೂಕದ ಬೆಳ್ಳಿ ಖಡ್ಗ ಅರ್ಪಿಸಿದ ತಮಿಳುನಾಡು ಸಿಎಂ ವಿಜಯ್‌ – vishwanews24

ಕೊಲ್ಲೂರು ಮೂಕಾಂಬಿಕೆಗೆ 1.6 ಕೆಜಿ ತೂಕದ ಬೆಳ್ಳಿ ಖಡ್ಗ ಅರ್ಪಿಸಿದ ತಮಿಳುನಾಡು ಸಿಎಂ ವಿಜಯ್‌ ಉಡುಪಿ: ತಮಿಳುನಾಡಿನ ಮುಖ್ಯಮಂತ್ರಿಯಾದ ಬಳಿಕ…

7 hours ago

ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ : ಸಿದ್ದರಾಮಯ್ಯ ಸ್ಪಷ್ಟನೆ – vishwanews24

ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ : ಸಿದ್ದರಾಮಯ್ಯ ಸ್ಪಷ್ಟನೆ ಬೆಂಗಳೂರು: ಕರ್ನಾಟಕದ ಹಿಂದುಳಿದ ವರ್ಗಗಳ ಇಲಾಖೆಯಿಂದ ಅನುದಾನ…

7 hours ago

ಧರ್ಮಸ್ಥಳ ವಿಚಾರದಲ್ಲಿ ಸನ್ನಿಧಿಗೆ ಕಳಂಕ ತರುವ ಬಹಳ ದೊಡ್ಡ ಷಡ್ಯಂತ್ರ : ವಿಜಯೇಂದ್ರ ಆರೋಪ – vishwanews24

ಧರ್ಮಸ್ಥಳ ವಿಚಾರದಲ್ಲಿ ಸನ್ನಿಧಿಗೆ ಕಳಂಕ ತರುವ ಬಹಳ ದೊಡ್ಡ ಷಡ್ಯಂತ್ರ : ವಿಜಯೇಂದ್ರ ಆರೋಪ ಬೆಂಗಳೂರು: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸ್ವಾಮಿಯ…

8 hours ago

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿದ ತಮಿಳುನಾಡು ಸಿಎಂ ವಿಜಯ್  – vishwanews24

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿದ ವಿಜಯ್  ಕೊಲ್ಲೂರು : ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಇಂದು ಕೊಲ್ಲೂರು ಶ್ರೀ…

8 hours ago

ಛಾಯಾಗ್ರಾಹಕ ಅನೀಶ್ ಕಾಪು ಅವರಿಗೆ ಕರ್ನಾಟಕ ಛಾಯಾರತ್ನ ಪ್ರಶಸ್ತಿ ಪ್ರಧಾನ – vishwanews24

ಛಾಯಾಗ್ರಾಹಕ ಅನೀಶ್ ಕಾಪು ಅವರಿಗೆ ಕರ್ನಾಟಕ ಛಾಯಾರತ್ನ ಪ್ರಶಸ್ತಿ ಪ್ರಧಾನ ಸನ್ನಿಧಿ ಸ್ಟುಡಿಯೋ ಶ್ರೀಯುತ ಅನೀಶ್ ಕಾಪು ಇವರು ಫೋಟೋಗ್ರಫಿ…

9 hours ago