Featured

ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ – vishwanews24

ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ

ಹೈದರಾಬಾದ್: ಹೈದರಾಬಾದಿನ ಎಲ್‍ಬಿ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಅದ್ದೂರಿ ಕಾರ್ಯಕ್ರಮದಲ್ಲಿ ರೇವಂತ್ ರೆಡ್ಡಿ ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರೇವಂತ್ ರೆಡ್ಡಿ ಅವರೊಂದಿಗೆ ಉತ್ತಮ್ ಕುಮಾರ್ ರೆಡ್ಡಿ, ಶ್ರೀಧರ್ ಬಾಬು, ಪೊನ್ನಂ ಪ್ರಭಾಕರ್, ಕೋಮಟಿರೆಡ್ಡಿ ವೆಂಕಟರ್ ರೆಡ್ಡಿ, ದಾಮೋದರ್ ರಾಜಾನರಸಿಂಹ, ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ, ದಾನ ಅನುಸೂಯ, ತುಮ್ಮಲ ನಾಗೇಶ್ವರ್ ರಾವ್, ಕೊಂಡ ಸುರೇಖಾ ಹಾಗೂ ಜೂಪಲ್ಲಿ ಕೃಷ್ಣ ರಾವ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಲ್ಲು ಭಟ್ಟಿ ವಿಕ್ರಮಾರ್ಕ ಅವರನ್ನು ತೆಲಂಗಾಣದ ಉಪ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದ್ದು, ಅವರೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಹಾಗೂ ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಉಪಸ್ಥಿತರಿದ್ದರು.

ಸುಮಾರು ಒಂದು ಲಕ್ಷ ಮಂದಿ ಈ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Vishwa News 24

Recent Posts

ಶಹಬಾಝ್ ಪಠಾಣ್ ಹತ್ಯೆ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ – vishwanews24

ಶಹಬಾಝ್ ಪಠಾಣ್ ಹತ್ಯೆ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ ಬೆಳಗಾವಿ : ನಗರದ ಶಿವಬಸವ ನಗರದಲ್ಲಿ ಐದು ವರ್ಷಗಳ ಹಿಂದೆ ನಡೆದ…

12 minutes ago

ಉಡುಪಿ ಬೆಂಕಿ ಅವಘಡ ಸ್ಥಳಕ್ಕೆ ಅಗ್ನಿಶಾಮಕ ದಳ ತಲುಪಲು ವಿಳಂಬ : ತನಿಖೆಗೆ ವಿವೇಕ್ ಜಿ. ಸುವರ್ಣ ಆಗ್ರಹ – vishwanews24

ಉಡುಪಿ ಬೆಂಕಿ ಅವಘಡ ಸ್ಥಳಕ್ಕೆ ಅಗ್ನಿಶಾಮಕ ದಳ ತಲುಪಲು ವಿಳಂಬ : ತನಿಖೆಗೆ ವಿವೇಕ್ ಜಿ. ಸುವರ್ಣ ಆಗ್ರಹ ಉಡುಪಿ:…

27 minutes ago

ವಿದ್ಯಾರ್ಥಿಗಳು ಧರಿಸಿದ್ದ ಜನಿವಾರ ತೆಗೆಸಿರುವುದು ಬ್ರಾಹ್ಮಣ ಸಮುದಾಯದ ವಿರುದ್ಧ ಹೆಣೆಯುತ್ತಿರುವ ವ್ಯವಸ್ಥಿತ ಜಾಲ : ಕೃಷ್ಣಮೂರ್ತಿ ಆಚಾರ್ಯ ಖಂಡನೆ – vishwanews24

ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಂದ ಬಲವಂತವಾಗಿ ಜನಿವಾರ ತೆಗೆಸಿದ ಘಟನೆ ತೀರಾ ಅವಮಾನಕಾರಿ ಬ್ರಾಹ್ಮಣ ಸಮಾಜದ ಧಾರ್ಮಿಕ ಹಕ್ಕು, ಸಂಸ್ಕೃತಿ…

41 minutes ago

ಉಡುಪಿ ಅಗ್ನಿ ದುರಂತ: ತಡವಾದ ಅಗ್ನಿಶಾಮಕ ಪ್ರತಿಕ್ರಿಯೆಗೆ ತನಿಖೆ ಮತ್ತು ಪೀಡಿತರಿಗೆ ತಕ್ಷಣ ಪರಿಹಾರಕ್ಕೆ SDPI ಆಗ್ರಹ – vishwanews24

ಉಡುಪಿ ಅಗ್ನಿ ದುರಂತ: ತಡವಾದ ಅಗ್ನಿಶಾಮಕ ಪ್ರತಿಕ್ರಿಯೆಗೆ ತನಿಖೆ ಮತ್ತು ಪೀಡಿತರಿಗೆ ತಕ್ಷಣ ಪರಿಹಾರಕ್ಕೆ SDPI ಆಗ್ರಹ ಉಡುಪಿ: ಉಡುಪಿ…

53 minutes ago

ರಾಜ್ಯದ ಎಲ್ಲಾ ಶಾಲೆಗಳಲ್ಲಿ ನ್ಯೂಸ್ ಪೇಪರ್ ಓದುವುದು ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ – vishwanews24

ರಾಜ್ಯದ ಎಲ್ಲಾ ಶಾಲೆಗಳಲ್ಲಿ ನ್ಯೂಸ್ ಪೇಪರ್ ಓದುವುದು ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ ಬೆಂಗಳೂರು : ಮಕ್ಕಳಲ್ಲಿ ಸಾಮಾನ್ಯ…

1 hour ago

ಮಂಗಳೂರು: ರೈಲಿನಲ್ಲೇ ಮಗುವಿಗೆ ಜನ್ಮ ಮಹಿಳೆ – vishwanews24

ಮಂಗಳೂರು: ರೈಲಿನಲ್ಲೇ ಮಗುವಿಗೆ ಜನ್ಮ ಮಹಿಳೆ : ವೈದ್ಯರಿಲ್ಲದೆ ರೈಲಿನಲ್ಲಿದ್ದ ಮಹಿಳೆಯರಿಂದಲೇ ಹೆರಿಗೆ ಮಂಗಳೂರು: ರೈಲಿನಲ್ಲೇ ಮಹಿಳೆಯೊಬ್ಬರು ಮಗುವಿಗೆ ಜನ್ಮ…

1 hour ago