ಮಂಗಳೂರು: ಫೇಮಸ್ ರಿಯಾಲಿಟಿ ಶೋನಲ್ಲಿ ಮಂಗಳೂರಿನ ಯುವಕನೊಬ್ಬ ಎಂಟ್ರಿ ಕೊಟ್ಟಿದ್ದಾನೆ. ತೆಲುಗು ಬಿಗ್ ಬಾಸ್ ನ 8 ನೇ ಆವೃತ್ತಿ ಆಯ್ಕೆಯಾಗಿರುವ ಈ ಯುವಕ ಮಂಗಳೂರಿನ ಪೃಥ್ವಿ ಶೆಟ್ಟಿ. ಮೂಲತ ಮಂಗಳೂರಿನವರಾದ ಇವರು ಇದೀಗ ಬಿಗ್ ಬಾಸ್ ಶೋ ಒಳಗೆ ಎಂಟ್ರಿ ಕೊಟ್ಟು ತಮ್ಮ ಪ್ರದರ್ಶನ ನೀಡುತ್ತಿದ್ದಾರೆ.
ತಮ್ಮ ಪ್ರಾಥಮಿಕ ಶಿಕ್ಷಣ ಮತ್ತು ಕಾಲೇಜು ಶಿಕ್ಷಣವನ್ನು ಮಂಗಳೂರು,ಕಾಸರಗೋಡು ಮತ್ತು ಉಡುಪಿ ಜಿಲೆಯಲ್ಲಿ ಮುಗಿಸಿರುವ ಪೃಥ್ವಿ ವಿದ್ಯಾಭ್ಯಾಸದ ಬಳಿಕ ಫ್ಯಾಷನ್ ಫೀಲ್ಡ್ ಗೆ ವಾಲಿದ್ದರು. ಕಾಲೇಜು ದಿನಗಳಲ್ಲಿಯೇ ಫ್ಯಾಷನ್ ಶೋಗಳಲ್ಲಿ ಪಾಲ್ಗೊಂಡು ಯಶಸ್ಸು ಕಂಡಿದ್ದ ಪೃಥ್ವಿ ಬಳಿಕದ ದಿನಗಳಲ್ಲಿ ಚಿತ್ರರಂಗ ಮತ್ತು ಟಿವಿ ಶೋಗಳಲ್ಲಿ ಅಭಿನಯಿಸುವ ಇಚ್ಛೆಯಿಂದ ಬೆಂಗಳೂರು ಮಹಾನಗರಕ್ಕೆ ಪ್ರಯಾಣ ಬೆಳೆಸಿದ್ದರು.
ಹಲವು ಸಣ್ಣ-ಪುಟ್ಟ ಧಾರಾವಾಹಿಗಳಲ್ಲಿ ನಟಿಸಿರುವ ಪೃಥ್ವಿ ಶೆಟ್ಟಿಗೆ ಉತ್ತಮ ಬ್ರೇಕ್ ದೊರೆತಿದ್ದು, ಪ್ರೀತಿಯ ಅರಸ ಮತ್ತು ಅರ್ಧಾಂಗಿ ಎನ್ನುವ ಟಿವಿ ಸೀರಿಯಲ್ ನಲ್ಲಿ. ಎರಡೂ ಧಾರಾವಾಹಿಗಳಲ್ಲಿ ತಮ್ಮ ಸಾಧನೆ ತೋರಿರುವ ಪೃಥ್ವಿ ಗೆ ಬಳಿಕದ ದಿನಗಳಲ್ಲಿ ತೆಲುಗು ಭಾಷೆಯ ಮೆಗಾ ಧಾರಾವಾಹಿಗಳಲ್ಲೂ ಅವಕಾಶ ದೊರೆತಿದೆ.ತೆಲುಗಿನ ಸೂಪರ್ ಹಿಟ್ ಧಾರಾವಾಹಿಯಾದ ನಾಗಪಂಚಮಿಯಲ್ಲಿನ ನಟನೆಗೆ ಪೃಥ್ವಿ ಶೆಟ್ಟಿ ಮನೆ ಮಾತಾಗಿದ್ದಾರೆ. ಈಗಾಗಲೇ ಎರಡು ತೆಲುಗು ಚಿತ್ರಗಳಲ್ಲಿ ನಟಿಸಿರುವ ಪೃಥ್ವಿ ಆ ಚಿತ್ರಗಳಲ್ಲೂ ಯಶಸ್ಸು ಕಾಣುವ ವಿಶ್ವಾಸದಲ್ಲಿದ್ದಾರೆ.
ತೆಲುಗು ಟಿವಿ ಶೋಗಳಲ್ಲಿ ಮಿಂಚಿರುವ ಪೃಥ್ವಿಯವರನ್ನು ಅವರ ಸಾಧನೆ ಹಾಗು ಯಶಸ್ಸನ್ನು ಪರಿಗಣಿಸಿ ಬಿಗ್ ಬಾಸ್ ನ 8 ನೇ ಆವೃತ್ತಿಗೆ ಆಯ್ಕೆ ಮಾಡಲಾಗಿದೆ. ಓಟಿಂಗ್ ನಲ್ಲೂ ಮೂರನೇ ಸ್ಥಾನವನ್ನು ಕಾಯ್ದುಕೊಂಡಿರುವ ಪೃಥ್ವಿ ಬಿಗ್ ಬಾಸ್ ಆಗಿ ಹೊರಬರಲಿ ಎನ್ನುವ ಹಾರೈಕೆಗಳೂ ಕೇಳಿ ಬರಲಾರಂಭಿಸಿದೆ.
ಪಡುಬಿದ್ರಿ: ಹೆಜಮಾಡಿ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ .. ಟೋಲ್ ಗೇಟ ನ್ನು ತಕ್ಷಣ ತೆರವುಗೊಳಿಸಬೇಕು ಎಂದು ಆಗ್ರಹ 15…
ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ: ಹಿಜಾಬ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ : ಪ್ರಿಯಾಂಕ ಖರ್ಗೆ ಸ್ಪಷ್ಟನೆ ಬೆಂಗಳೂರು: ಕರ್ನಾಟಕದ ಪೊಲೀಸ್…
ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿ ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ವಿಶೇಷ ಸೇನಾ…
ಕಡಬ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ :ಭಕ್ತರಿಗೆ ಡ್ರಮ್‌ಗಳಲ್ಲಿ ಪರ್ಯಾಯ ಸ್ನಾನ ವ್ಯವಸ್ಥೆ ಕಡಬ:ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿರಂತರ ಸುರಿಯುತ್ತಿರುವ…
ಮೀನುಗಾರಿಕಾ ಋತು ಆರಂಭ ಹಿನ್ನೆಲೆ : ಮಲ್ಪೆ ಬಂದರಿಗೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ ಉಡುಪಿ: ಜೂನ್ ಮತ್ತು ಜುಲೈ…
ಕುಂದಾಪುರ ರಿಚರ್ಡ್ ಹತ್ಯೆ ಪ್ರಕರಣ : ಆರೋಪಿ ಭಟ್ಕಳದಲ್ಲಿ ಬಂಧನ ಕುಂದಾಪುರ: ಇಲ್ಲಿನ ಚರ್ಚ್ ರಸ್ತೆಯ ಸಮೀಪ ಗುರುವಾರ ತಡರಾತ್ರಿ…